AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NBK107: ದುನಿಯಾ ವಿಜಯ್ ಆಯ್ತು, ಇದೀಗ ‘ಮಾಣಿಕ್ಯ’ದ ಬೆಡಗಿಯ ಸರದಿ; ಹಿರಿದಾಗುತ್ತಿದೆ ‘ಎನ್​ಬಿಕೆ107’ ತಾರಾಗಣ

Nandamuri Balakrishna | Duniya Vijay: ನಂದಮೂರಿ ಬಾಲಕೃಷ್ಣ ನಟನೆಯ ಬಹುನಿರೀಕ್ಷಿತ ‘ಎನ್​ಬಿಕೆ107’ ಚಿತ್ರತಂಡದ ಕಲಾವಿದರನ್ನು ಪರಿಚಯಿಸಲಾಗುತ್ತಿದೆ. ಇತ್ತೀಚೆಗೆ ದುನಿಯಾ ವಿಜಯ್ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ‘ಮಾಣಿಕ್ಯ’ದ ಬೆಡಗಿಯ ಸರದಿ.

NBK107: ದುನಿಯಾ ವಿಜಯ್ ಆಯ್ತು, ಇದೀಗ ‘ಮಾಣಿಕ್ಯ’ದ ಬೆಡಗಿಯ ಸರದಿ; ಹಿರಿದಾಗುತ್ತಿದೆ ‘ಎನ್​ಬಿಕೆ107’ ತಾರಾಗಣ
ವರಲಕ್ಷ್ಮಿ, ದುನಿಯಾ ವಿಜಯ್
TV9 Web
| Updated By: shivaprasad.hs|

Updated on:Jan 05, 2022 | 7:30 PM

Share

ನಂದಮೂರಿ ಬಾಲಕೃಷ್ಣ ‘ಅಖಂಡ’ದ ಯಶಸ್ಸಿನ ಸಂತಸದಲ್ಲಿದ್ದಾರೆ. ಅವರ ಹೊಸ ಚಿತ್ರ ಎನ್​ಬಿಕೆ107 ಅನೌನ್ಸ್ ಆಗಿದ್ದು, ಖ್ಯಾತ ಕಲಾವಿದರು ಚಿತ್ರತಂಡವನ್ನು ಕೂಡಿಕೊಳ್ಳುತ್ತಿದ್ದಾರೆ. ಹಲವು ಹಿಟ್ ಚಿತ್ರಗಳನ್ನು ನೀಡಿದ ಗೋಪಿಚಂದ್ ಮಲಿನೇನಿ ಆಕ್ಷನ್ ಕಟ್ ಹೇಳುತ್ತಿರುವ ಎನ್​ಬಿಕೆ107ಗೆ ಶೃತಿ ಹಾಸನ್ ನಾಯಕಿ. ಇತ್ತೀಚೆಗೆ ಸ್ಯಾಂಡಲ್​ವುಡ್ ತಾರೆ ದುನಿಯಾ ವಿಜಯ್ ಚಿತ್ರತಂಡ ಸೇರಿಕೊಂಡಿದ್ದರು. ಇದೀಗ ಕಿಚ್ಚ ಸುದೀಪ್ ಜತೆ ‘ಮಾಣಿಕ್ಯ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದ ವರಲಕ್ಷ್ಮಿ ಶರತ್​ಕುಮಾರ್ ಇದೀಗ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಚಿತ್ರತಂಡ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅವರಿಗೆ ಸ್ವಾಗತ ಕೋರಿದೆ.

ನಂದಮೂರಿ ಬಾಲಕೃಷ್ಣ ನಟಿಸಲಿರುವ 107ನೇ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸದ್ಯ ಅದನ್ನು ಎನ್​ಬಿಕೆ 107 ಎಂದು ಕರೆಯಲಾಗುತ್ತಿದ್ದು, ಶ್ರುತಿ ಹಾಸನ್ ನಾಯಕಿಯಾಗಿ​ ಬಣ್ಣಹಚ್ಚಲಿದ್ದಾರೆ. ರಾಯಲಸೀಮಾ ಹಿನ್ನೆಲೆಯಲ್ಲಿ ಸಿನಿಮಾ ಮೂಡಿಬರಲಿದ್ದು, ನೈಜ ಘಟನೆಗಳನ್ನು ಆಧರಿಸಿ ಚಿತ್ರ ತಯಾರಾಗುತ್ತಿದೆ. ಸದ್ಯ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಖ್ಯಾತ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್​’ ಈ ಚಿತ್ರವನ್ನು ನಿರ್ಮಿಸುತ್ತಿದೆ.

ವರಲಕ್ಷ್ಮಿ ಶರತ್​ಕುಮಾರ್ ‘ಎನ್​ಬಿಕೆ107’ರಲ್ಲಿ ‘ಜಯಮ್ಮ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿನ ಅವರ ಪಾತ್ರವನ್ನು ಎಲ್ಲರೂ ನೆನಪಿನಲ್ಲಿಡಲಿದ್ದೀರಿ ಎನ್ನುವ ಭರವಸೆಯನ್ನು ನಿರ್ದೇಶಕ ಗೋಪಿಚಂದ್ ನೀಡಿದ್ದಾರೆ. ಈ ಮೂಲಕ ವರಲಕ್ಷ್ಮಿ ಅವರದ್ದು ಪ್ರಮುಖ ಪಾತ್ರವಾಗಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ. ನಿರ್ದೇಶಕ ಗೋಪಿಚಂದ್ ಹಂಚಿಕೊಂಡ ಟ್ವೀಟ್ ಇಲ್ಲಿದೆ.

ಇತ್ತೀಚೆಗಷ್ಟೇ ಚಿತ್ರತಂಡ ಸೇರಿಕೊಂಡಿದ್ದ ದುನಿಯಾ ವಿಜಯ್: ದುನಿಯಾ ವಿಜಯ್​ ಟಾಲಿವುಡ್​ಗೆ ಕಾಲಿಡಲಿದ್ದಾರೆ ಎಂಬ ಸುದ್ದಿ ಮೊದಲೇ ಓಡಾಡಿತ್ತು. ಇತ್ತೀಚೆಗೆ ಚಿತ್ರತಂಡ ಅದನ್ನು ಅಧಿಕೃತವಾಗಿ ಹಂಚಿಕೊಂಡಿತ್ತು. ಸ್ಯಾಂಡಲ್​ವುಡ್ ಸೆನ್ಸೇಶನ್ ಚಿತ್ರತಂಡ ಕೂಡಿಕೊಳ್ಳುತ್ತಿರುವುದು ಬಹಳ ಸಂತಸದ ವಿಚಾರ. ವಿಲನ್ ಎಂಬುದಕ್ಕೆ ಹೊಸ ಅರ್ಥ ಬರೆಯಲಿದ್ದಾರೆ ಎಂದು ಗೋಪಿಚಂದ್ ಟ್ವೀಟ್ ಮಾಡಿದ್ದರು. ಈ ಮೂಲಕ ದುನಿಯಾ ವಿಜಯ್ ಪಾತ್ರದ ಬಗ್ಗೆ ಅಪಾರ ನಿರೀಕ್ಷೆಗಳು ಮೂಡಿದ್ದವು.

‘ಎನ್​ಬಿಕೆ107’ ಚಿತ್ರದ ಚಿತ್ರೀಕರಣ ಈ ತಿಂಗಳಿನಿಂದ ಪ್ರಾರಂಭವಾಗಲಿದೆ ಎನ್ನಲಾಗಿದೆ. ಎಸ್.ತಮನ್ ಸಂಗೀತ ನೀಡುತ್ತಿದ್ದು, ಬಿಗ್ ಬಜೆಟ್​ನಲ್ಲಿ ಚಿತ್ರ ತಯಾರಾಗಲಿದೆ.

ಇದನ್ನೂ ಓದಿ:

ಟಾಲಿವುಡ್​ಗೆ ಎಂಟ್ರಿ ನೀಡಿದ ದುನಿಯಾ ವಿಜಯ್​; ನಂದಮೂರಿ ಬಾಲಕೃಷ್ಣ ಚಿತ್ರದಲ್ಲಿ ಬಂಪರ್​ ಚಾನ್ಸ್​

Shubha Poonja: ಸಿಂಪಲ್ ಆಗಿ ಗೆಳೆಯ ಸುಮಂತ್ ಜತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ನಟಿ ಶುಭಾ ಪೂಂಜ

Published On - 7:18 pm, Wed, 5 January 22

ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
Karnataka Assembly Session Live: ವಿಧಾನಸಭೆ ಕಲಾಪ ಆರಂಭ; ನೇರಪ್ರಸಾರ
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ಬಿಬಿಎಂಪಿ ಚುನಾವಣೆ ಆದಷ್ಟು ಬೇಗ ನಡೆಯಲಿದೆ: ರಿಜ್ವಾನ್ ಅರ್ಷದ್
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು
ನಿಂತಿದ್ದ ಖಾಸಗಿ ಶಾಲಾ ಬಸ್​​​​ಗೆ ಬೆಂಕಿ; ವ್ಯಕ್ತಿ ಅನುಮಾನಾಸ್ಪದ ಸಾವು