56ರ ವಯಸ್ಸಿನಲ್ಲೂ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಸಲ್ಮಾನ್; ಫೋಟೋ ನೋಡಿ ‘ಟೈಗರ್ ಈಸ್ ಬ್ಯಾಕ್’ ಎಂದ ಫ್ಯಾನ್ಸ್

Salman Khan | Tiger 3: ಬಾಲಿವುಡ್ ತಾರೆ ಸಲ್ಮಾನ್ ಖಾನ್ ‘ಬಿಗ್ ಬಾಸ್ 15’ನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಇದೀಗ ನಟ ಮತ್ತೆ ಚಿತ್ರದ ಕೆಲಸಗಳಿಗೆ ಮರಳಲು ತಯಾರಾಗುತ್ತಿದ್ದಾರೆ. ಇದಕ್ಕೆ ಅವರ ಪೋಸ್ಟ್ ಒಂದು ಸಾಕ್ಷಿ ಒದಗಿಸಿದೆ.

56ರ ವಯಸ್ಸಿನಲ್ಲೂ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಸಲ್ಮಾನ್; ಫೋಟೋ ನೋಡಿ ‘ಟೈಗರ್ ಈಸ್ ಬ್ಯಾಕ್’ ಎಂದ ಫ್ಯಾನ್ಸ್
ಸಲ್ಮಾನ್ ಖಾನ್
Follow us
TV9 Web
| Updated By: shivaprasad.hs

Updated on: Feb 02, 2022 | 3:59 PM

ಇತ್ತೀಚೆಗಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಬಾಲಿವುಡ್ (Bollywood) ನಟ ಸಲ್ಮಾನ್​ ಖಾನ್​ಗೆ (Salman Khan) ಈಗ 56ರ ಪ್ರಾಯ. ಆದರೆ ತರುಣರೂ ಹುಬ್ಬೇರಿಸುವಂತೆ ಮೈಕಟ್ಟನ್ನು ಅವರು ಕಾಪಿಟ್ಟುಕೊಂಡಿದ್ದಾರೆ. ಹುರಿಗೊಳಿಸಿದ ದೇಹ, ಮೈನವಿರೇಳಿಸುವ ಆಕ್ಷನ್ ದೃಶ್ಯಗಳು, ಮಾಸ್ ಡೈಲಾಗ್ಸ್.. ಇವೆಲ್ಲಾ ಸಲ್ಮಾನ್ ಚಿತ್ರಗಳಲ್ಲಿ ಮಾಮೂಲು. ಆದರೆ ಅಭಿಮಾನಿಗಳಿಗೆ ಸಲ್ಮಾನ್ ಫಿಟ್​ನೆಸ್ ಬಗ್ಗೆ ಎಲ್ಲಿಲ್ಲದ ಕುತೂಹಲ. ಈ ವಯಸ್ಸಿನಲ್ಲೂ ಸಲ್ಮಾನ್ ಸಿಕ್ಸ್​ಪ್ಯಾಕ್ ರಹಸ್ಯವೇನು? ಎಂಬುದು ಅವರ ಪ್ರಶ್ನೆ. ತಮ್ಮ ದೇಹದ ಬಗ್ಗೆ ವಿಪರೀತ ಕಾಳಜಿ ವಹಿಸುವ ಸಲ್ಲು, ದಿನನಿತ್ಯ ಜಿಮ್​ನಲ್ಲಿ ಬೆವರು ಹರಿಸುತ್ತಾರೆ. ಇದು ಅವರ ಫಿಟ್​ನೆಸ್ (Fitness) ಗುಟ್ಟು. ಇದಕ್ಕೆ ಸಾಕ್ಷಿ ಎಂಬಂತೆ ಜಿಮ್​ನಲ್ಲಿ ಬೆವರು ಹರಿಸುತ್ತಿರುವ ಹೊಸ ಚಿತ್ರವನ್ನು ಸಲ್ಮಾನ್ ಹಂಚಿಕೊಂಡಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಶನ್ ಸೃಷ್ಟಿಸಿದ್ದು, ಕಾಮೆಂಟ್​ಗಳ ಮಹಾಪೂರವೇ ಹರಿದುಬಂದಿದೆ.

ಸಲ್ಲು ಹೊಸ ಚಿತ್ರ ಗಮನಸೆಳೆದಿರುವುದೇಕೆ?

ಸಲ್ಮಾನ್ ಖಾನ್ ಇತ್ತೀಚೆಗೆ ಸಿನಿಮಾ ಕೆಲಸಗಳಿಂದ ತುಸು ಬ್ರೇಕ್ ತೆಗೆದುಕೊಂಡಿದ್ದರು. ಅವರೇನು ಪ್ರವಾಸ ಹೋಗಿರಲಿಲ್ಲ. ಬದಲಾಗಿ ಬಿಗ್ ಬಾಸ್ 15ರ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಇದೀಗ ಬಿಗ್ ಬಾಸ್​ ಮುಕ್ತಾಯವಾಗಿದೆ. ಸಲ್ಮಾನ್ ಮತ್ತೆ ತಮ್ಮ ಚಿತ್ರದ ಕೆಲಸಗಳಿಗೆ ಮರಳಿದ್ದಾರೆ. ಇದನ್ನೇ ಉದ್ದೇಶಿಸಿ ಪೋಸ್ಟ್ ಹಂಚಿಕೊಂಡಿರುವ ಸಲ್ಮಾನ್, ‘ಮರಳಲು ತಯಾರಾಗುತ್ತಿದ್ದೇನೆ’ ಎಂಬರ್ಥದಲ್ಲಿ ಬರೆದುಕೊಂಡು ಫೋಟೋ ಶೇರ್ ಮಾಡಿದ್ದಾರೆ.

ಜಿಮ್​ನಲ್ಲಿ ಬೆವರು ಹರಿಸಿ,ಫೋಟೋಗೆ ಪೋಸ್ ನೀಡಿರುವ ಸಲ್ಮಾನ್ ಪೋಸ್ಟ್ ಇದೀಗ ವೈರಲ್ ಆಗಿದೆ. ‘ಟೈಗರ್ 3’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಂಡಿರುವ ಸಲ್ಮಾನ್, ಅದೇ ಹೆಸರಿನ ಸರಣಿ ಚಿತ್ರಗಳಿಂದ ಖ್ಯಾತಿ ಪಡೆದವರು. ಇದನ್ನು ಉಲ್ಲೇಖಿಸಿದ ಫ್ಯಾನ್ಸ್, ‘ಟೈಗರ್ ಈಸ್ ಬ್ಯಾಕ್’ ಎಂದು ಕಾಮೆಂಟ್ ಮಾಡಿದ್ದಾರೆ. ಹಲವು ಅಭಿಮಾನಿಗಳು ‘ನಿಜವಾದ ಫಿಟ್​ನೆಸ್ ಐಕಾನ್’ ಎಂದು ಸಲ್ಲುವನ್ನು ಹೊಗಳಿದ್ದಾರೆ.

ಸಲ್ಮಾನ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

‘ಟೈಗರ್ 3’ಯಲ್ಲಿ ಕಾಣಿಸಿಕೊಳ್ಳಲಿರುವ ಸಲ್ಮಾನ್- ಕತ್ರಿನಾ:

ಸಲ್ಮಾನ್ ಖಾನ್ ಪ್ರಸ್ತುತ ‘ಟೈಗರ್ 3’ ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ. ಇದು ‘ಟೈಗರ್’ ಸರಣಿಯ ಮೂರನೇ ಚಿತ್ರವಾಗಿದ್ದು, ಇನ್ನೂ ಹೆಸರಿಟ್ಟಿಲ್ಲ. ಆದ್ದರಿಂದ ಸದ್ಯ ‘ಟೈಗರ್ 3’ ಎಂದು ಚಿತ್ರವನ್ನು ಕರೆಯಲಾಗುತ್ತಿದೆ. ಈ ಹಿಂದಿನ ಟೈಗರ್ ಸರಣಿಯ ಚಿತ್ರಗಳಾದ ‘ಏಕ್ ಥಾ ಟೈಗರ್’ ಹಾಗೂ ‘ಟೈಗರ್ ಜಿಂದಾ ಹೈ’ ಬಾಕ್ಸಾಫೀಸ್​ನಲ್ಲಿ ದಾಖಲೆ ಬರೆದಿದ್ದವು. ಇದೀಗ ‘ಟೈಗರ್ 3’ ತಯಾರಾಗುತ್ತಿದೆ.

ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಮನೀಶ್ ಶರ್ಮಾ. ಇತ್ತೀಚೆಗಷ್ಟೇ ವಿಕ್ಕಿ ಕೌಶಲ್ ಜತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನಟಿ ಕತ್ರಿನಾ ಕೈಫ್ ‘ಟೈಗರ್ 3’ ಚಿತ್ರಕ್ಕೆ ನಾಯಕಿ. ಈಗಾಗಲೇ ಚಿತ್ರದ ಕೆಲವು ಭಾಗದ ಚಿತ್ರೀಕರಣ ಆಗಿದೆ. ಮುಂದಿನ ವಾರ ಮುಂಬೈನಲ್ಲಿ ಚಿತ್ರತಂಡ ಮತ್ತೆ ಚಿತ್ರೀಕರಣ ಆರಂಭಿಸಲಿದೆ ಎನ್ನಲಾಗಿದೆ. ‘ಟೈಗರ್ 3’ನಲ್ಲಿ ರಾ ಏಜೆಂಟ್ ಆಗಿ ಸಲ್ಮಾನ್ ಬಣ್ಣಹಚ್ಚುತ್ತಿದ್ದಾರೆ.

ಇದನ್ನೂ ಓದಿ:

‘ಕರೀನಾ ಸಿಕ್ಕಾಪಟ್ಟೆ ಡೇಂಜರ್’ ಎಂದು ಸೈಫ್​ಗೆ ಹಿತೋಪದೇಶ ನೀಡಿದ್ದ ಅಕ್ಷಯ್; ಇಲ್ಲಿದೆ ಕರೀನಾ- ಸೈಫ್ ಪ್ರೇಮ ಪುರಾಣ!

Shiva Rajkumar: ‘ಜೇಮ್ಸ್’ನಲ್ಲಿ ಪುನೀತ್ ಪಾತ್ರಕ್ಕೆ ಯಾರ ಧ್ವನಿ? ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್