ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ ಯುವ ಹಾಸ್ಯ ನಟ; ಅಭಿಮಾನಿಗಳು ಶಾಕ್​

ರಾಹುಲ್​ ರಾಮಕೃಷ್ಣ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ವರ್ಷ ಮಾತ್ರ ಅವರು ಚಿತ್ರರಂಗದಲ್ಲಿ ಇರಲಿದ್ದಾರಂತೆ. ಆ ಬಳಿಕ ಅವರು ಚಿತ್ರರಂಗ ತೊರೆಯಲು ನಿರ್ಧರಿಸಿದ್ದಾರೆ!

ಚಿತ್ರರಂಗದಿಂದ ನಿವೃತ್ತಿ ಘೋಷಿಸಿದ ಯುವ ಹಾಸ್ಯ ನಟ; ಅಭಿಮಾನಿಗಳು ಶಾಕ್​
ವಿಜಯ್​ ದೇವರಕೊಂಡ- ರಾಹುಲ್​
TV9kannada Web Team

| Edited By: Rajesh Duggumane

Feb 05, 2022 | 1:54 PM

ಒಂದು ಸಿನಿಮಾ ಹಲವು ಕಲಾವಿದರ, ತಂತ್ರಜ್ಞರ ಬದುಕನ್ನು ಬದಲಾಯಿಸಿ ಬಿಡುತ್ತದೆ. ಇದಕ್ಕೆ ತೆಲುಗು ಕಾಮಿಡಿಯನ್​ ರಾಹುಲ್​ ರಾಮಕೃಷ್ಣ (Rahul Ramakrishna)​ ಕೂಡ ಒಬ್ಬರು. 2017ರಲ್ಲಿ ತೆರೆಗೆ ಬಂದ ‘ಅರ್ಜುನ್​ ರೆಡ್ಡಿ’ (Arjun Reddy)ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಚಿತ್ರದಲ್ಲಿ ಅರ್ಜುನ್​ ರೆಡ್ಡಿ ಗೆಳೆಯನ ಪಾತ್ರ ಮಾಡಿದ್ದರು ರಾಹುಲ್​. ಈ ಮೂಲಕ ಸಾಕಷ್ಟು ಖ್ಯಾತಿ ಗಳಿಸಿಕೊಂಡರು. ವಿಜಯ್​ ದೇವರಕೊಂಡ (Vijay Devarakonda) ನಟನೆಯ ‘ಗೀತ ಗೋವಿಂದಂ’ ಸಿನಿಮಾದಲ್ಲೂ ಅವರು ಹೀರೋನ ಗೆಳೆಯನ ಪಾತ್ರ ಮಾಡಿದ್ದರು​. ರಾಹುಲ್​ಗೆ ಈಗ ಸಾಕಷ್ಟು ಆಫರ್​ಗಳು ಬರುತ್ತಿವೆ. ಕೆಲವೇ ವರ್ಷಗಳಲ್ಲಿ ಅವರ ಜೀವನ ಬದಲಾಗಿದೆ. ಆದರೆ, ಶಾಕಿಂಗ್​ ವಿಚಾರ ಎಂದರೆ ಅವರು ಚಿತ್ರರಂಗ ತೊರೆಯೋಕೆ ನಿರ್ಧರಿಸಿದ್ದಾರೆ. ಶುಕ್ರವಾರ (ಫೆಬ್ರವರಿ 4) ರಾತ್ರಿ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಶಾಕ್​ ಆಗಿದ್ದಾರೆ.

ಚಿತ್ರರಂಗದಲ್ಲಿ ಬೇಡಿಕೆ ಇರುವಾಗಲೇ ಅದನ್ನು ತೊರೆಯೋಕೆ ಯಾರೂ ಇಷ್ಟಪಡುವುದಿಲ್ಲ. ಆದರೆ, ಆ ರೀತಿ ಮಾಡಿದ ಉದಾಹರಣೆ ಕೂಡ ಇದೆ. ನಟಿ ರಮ್ಯಾ ಕೂಡ ಚಿತ್ರರಂಗದಲ್ಲಿ ಬೇಡಿಕೆ ಇದ್ದಾಗಲೇ ಅದನ್ನು ತೊರೆದು ರಾಜಕೀಯ ಸೇರಿದರು. ನಂತರ ಅವರು ಮರಳಿ ಚಿತ್ರರಂಗಕ್ಕೆ ಬರಲೇ ಇಲ್ಲ. ಇದೇ ರೀತಿಯ ಕೆಲವು ಉದಾಹರಣೆಗಳು ಸಿಗುತ್ತವೆ. ಈಗ ರಾಹುಲ್​ ರಾಮಕೃಷ್ಣ ಕೂಡ ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಈ ವರ್ಷ ಮಾತ್ರ ಅವರು ಚಿತ್ರರಂಗದಲ್ಲಿ ಇರಲಿದ್ದಾರಂತೆ. ಆ ಬಳಿಕ ಅವರು ಚಿತ್ರರಂಗ ತೊರೆಯಲು ನಿರ್ಧರಿಸಿದ್ದಾರೆ!

‘ಈ ವರ್ಷವೇ ಕೊನೆ. ಆ ಬಳಿಕ ನಾನು ಯಾವುದೇ ಸಿನಿಮಾ ಮಾಡುವುದಿಲ್ಲ. ನಾನು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ನೀವು ಈ ಬಗ್ಗೆ ಚಿಂತಿಸಬೇಡಿ’ ಎಂದು ಬರೆದುಕೊಂಡಿದ್ದಾರೆ ರಾಹುಲ್​. ಇದು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.  ಕೆಲವರು ಇದನ್ನು ಗಂಭೀರವಾಗಿ ತೆಗೆದುಕೊಂಡರೆ ಇನ್ನೂ ಕೆಲವರು ಇದನ್ನು ಹಗುರವಾಗಿ ಪರಿಗಣಿಸಿದ್ದಾರೆ.

‘ಎಲ್ಲರ ಗಮನ ಸೆಳೆಯೋಕೆ ಈ ರೀತಿಯ ಗಿಮಿಕ್​ಗಳನ್ನು ಚಿತ್ರರಂಗದವರು ಮಾಡೋದನ್ನು ನೋಡಿದ್ದೇವೆ’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ರಾಹುಲ್​ ಅವರ ಖಾತೆ ಹ್ಯಾಕ್​ ಆಗಿದೆ’ ಎಂದು ಬರೆದುಕೊಂಡಿದ್ದಾರೆ. ಕೆಲವರನ್ನು ಇದನ್ನು ಟೀಕಿಸಿದ್ದಾರೆ. ‘ಇದು ವೋಡ್ಕಾ ಎಫೆಕ್ಟ್​. ರಾತ್ರಿ ಬೆಳಗಾಗುವುದರೊಳಗೆ ಎಲ್ಲವೂ ಸರಿಯಾಗುತ್ತದೆ’ ಎಂದಿದ್ದಾರೆ. ಈ ಬಗ್ಗೆ ರಾಹುಲ್​ ಕಡೆಯಿಂದ ಸ್ಪಷ್ಟನೆ ಸಿಗಬೇಕಿದೆ. ಅವರು ಚಿತ್ರರಂಗ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇಕೆ ಎನ್ನುವ ಪ್ರಶ್ನೆಯೂ ಕಾಡುತ್ತಿದೆ.

ಇದನ್ನೂ ಓದಿ: ಧೂಳೆಬ್ಬಿಸಿದ ‘ಲೈಗರ್​’ ಗ್ಲಿಂಪ್ಸ್​ ವಿಡಿಯೋ; ವಿಜಯ್​ ದೇವರಕೊಂಡಗೆ ಭಾರೀ ಮೆಚ್ಚುಗೆ

ವಿಜಯ್​ ದೇವರಕೊಂಡ ಜತೆ ಗೋವಾದಲ್ಲಿ ಹೊಸ ವರ್ಷ ಆಚರಿಸಿದ ರಶ್ಮಿಕಾ? ಇಲ್ಲಿದೆ ಫೋಟೋ ಸಾಕ್ಷಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada