ಒಟಿಟಿಯಲ್ಲಿ ವಾರಾಂತ್ಯದ ಮನರಂಜನೆಗೆ ಇಲ್ಲಿವೆ ಕೆಲವು ಮಸ್ತ್ ಸಿನಿಮಾ, ವೆಬ್ ಸಿರೀಸ್ಗಳು
ದಿ ಲಾಸ್ಟ್ ಡಾಟರ್, ನೋ ಟೈಮ್ ಟು ಡೈ, ಅನದರ್ ರೌಂಡ್ ಮುಂತಾದ ಬೆಸ್ಟ್ ಸಿನಿಮಾಗಳು ಒಟಿಟಿಯಲ್ಲಿ ಲಭ್ಯವಾಗಿವೆ. ಅವುಗಳನ್ನು ನೋಡುತ್ತ ವೀಕೆಂಡ್ ಎಂಜಾಯ್ ಮಾಡಬಹುದು.
ದಿನದಿಂದ ದಿನಕ್ಕೆ ಒಟಿಟಿ (OTT) ಪ್ಲಾಟ್ಫಾರ್ಮ್ಗಳ ವ್ಯಾಪ್ತಿ ಹಿರಿದಾಗುತ್ತಿದೆ. ಕೊರೊನಾದಿಂದ ಬದಲಾದ ಈ ಕಾಲಘಟ್ಟದಲ್ಲಿ ಮನರಂಜನೆಯ ಸ್ವರೂಪ ಸಹ ಬದಲಾಗಿದೆ. ಮೊದಲೆಲ್ಲ ಚಿತ್ರಮಂದಿರಗಳಿಗೆ ತೆರಳಿ ಸಿನಿಮಾ ನೋಡುತ್ತಿದ್ದ ಬಹುತೇಕರು ಈಗ ಮನೆಯಲ್ಲೇ ಕುಳಿತು ಸಿನಿಮಾ ಕಣ್ತುಂಬಿಕೊಳ್ಳಲು ಬಯಸುತ್ತಾರೆ. ಅದರಲ್ಲೂ ಕೊರೊನಾ ಹಾವಳಿ ಶುರುವಾದ ನಂತರ ಥಿಯೇಟರ್ಗೆ ಕಾಲಿಡುವವರ ಸಂಖ್ಯೆ ಕೊಂಚ ತಗ್ಗಿದೆ ಎನ್ನಬಹುದು. ಚಿತ್ರಮಂದಿರಗಳಲ್ಲಿನ ಶೇ.50ರಷ್ಟು ಆಸನ ಮಿತಿ ನಿರ್ಬಂಧದಿಂದಾಗಿ ಕೆಲವು ಚಿತ್ರತಂಡಗಳಿಗೆ ನಿರಾಸೆ ಆಗಿದೆ. ಹಾಗಾಗಿ ಥಿಯೇಟರ್ ಬದಲು ನೇರವಾಗಿ ಒಟಿಟಿ ಮೂಲಕ ಪ್ರಸಾರ ಮಾಡಲು ಕೆಲವು ತಂಡಗಳು ಮುಂದಾಗಿವೆ. ಚಿತ್ರಮಂದಿರದಲ್ಲಿ ಬಿಡುಗಡೆಯಾದ ಹೊಸ ಚಿತ್ರಗಳು ಕೆಲವೇ ದಿನಗಳಲ್ಲಿ ಒಟಿಟಿಯಲ್ಲಿ ಲಭ್ಯವಾಗುವ ಟ್ರೆಂಡ್ ಕೂಡ ಶುರುವಾಗಿದೆ. ನೆಟ್ಫ್ಲಿಕ್ಸ್ (Netflix), ಅಮೇಜಾನ್ ಪ್ರೈಂ ವಿಡಿಯೋ, ಜೀ5, ವೂಟ್ ಸೆಲೆಕ್ಟ್, ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಸೇರಿದಂತೆ ಹಲವು ಒಟಿಟಿ ಸಂಸ್ಥೆಗಳು ತಮ್ಮ ವ್ಯಾಪ್ತಿ ಹೆಚ್ಚಿಸಿಕೊಳ್ಳುತ್ತಿವೆ. ಹೊಸ ಹೊಸ ಕಂಟೆಂಟ್ಗಳನ್ನು ಪ್ರೇಕ್ಷಕರಿಗೆ ತಲುಪಿಸುತ್ತಿವೆ. ಹಾಗಾದರೆ ವಾರಾಂತ್ಯದಲ್ಲಿ ಯಾವೆಲ್ಲ ಶೋ (Web Series) ಮತ್ತು ಸಿನಿಮಾಗಳನ್ನು ಜನರು ನೋಡಬಹುದು? ಅದರಲ್ಲಿ ಯಾವುದು ಬೆಸ್ಟ್? ಈ ಎಲ್ಲ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ..
‘ದಿ ಲಾಸ್ಟ್ ಡಾಟರ್’ – ನೆಟ್ಫ್ಲಿಕ್ಸ್
2021ರಲ್ಲಿ ಬಿಡುಗಡೆಯಾದ ‘ದಿ ಲಾಸ್ಟ್ ಡಾಟರ್’ ಸಿನಿಮಾ ಹಲವು ಕಾರಣಗಳಿಂದ ಗಮನ ಸೆಳೆದಿದೆ. ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯವಿದೆ. ವೃತ್ತಿಜೀವನ, ಮದುವೆ-ಮಕ್ಕಳು, ವೈಯಕ್ತಿಕ ಆಸೆ ಆಕಾಂಕ್ಷೆಗಳ ನಡುವೆ ಮಹಿಳೆಯೊಬ್ಬಳ ಜೀವನ ಯಾವ ರೀತಿ ರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಇದರಲ್ಲಿ ವಿವರಿಸಲಾಗಿದೆ.
‘ನೋ ಟೈಮ್ ಟು ಡೈ’ – ಗೂಗಲ್ ಪ್ಲೇ
ಬಾಂಡ್ ಸರಣಿಯ ಸಿನಿಮಾಗಳನ್ನು ಪ್ರೇಕ್ಷಕರು ಯಾವಾಗಲೂ ಇಷ್ಟಪಡುತ್ತಾರೆ. ಅದರ ಹೊಸ ಇನ್ಸ್ಟಾಲ್ಮೆಂಟ್ ‘ನೋ ಟೈಮ್ ಟು ಡೈ’ ಸಿನಿಮಾ ಈಗ ‘ಗೂಗಲ್ ಪ್ಲೇ’ ಮೂಲಕ ವೀಕ್ಷಣೆಗೆ ಲಭ್ಯವಾಗಿದೆ. ನಟ ಡೇನಿಯಲ್ ಕ್ರೇಗ್ ಅವರು ಎಂದಿನಂತೆ ಭರ್ಜರಿ ಆ್ಯಕ್ಷನ್ ಮೆರೆದಿದ್ದಾರೆ.
‘ಅನದರ್ ರೌಂಡ್’ – ಅಮೇಜಾನ್ ಪ್ರೈಂ ವಿಡಿಯೋ
ಅಮೇಜಾನ್ ಪ್ರೈಂ ವಿಡಿಯೋ ಮೂಲಕ ಈಗಾಗಲೇ ಈ ಸಿನಿಮಾ ಪ್ರಸಾರ ಆಗಿದೆ. 2020ರ ಸೆಪ್ಟೆಂಬರ್ನಲ್ಲಿ ಬಂದ ಈ ಚಿತ್ರ ವೀಕ್ಷಕರ ಫೇವರಿಟ್ ಆಗಿದೆ. ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಹಾಗಂತ ಇದು ಬೋರಿಂಗ್ ಆಗಿಲ್ಲ.
‘ಸಕ್ಸೆಷನ್’ – ಹಾಟ್ಸ್ಟಾರ್
ಮೂರು ಸೀಸನ್ಗಳಲ್ಲಿ ‘ಸಕ್ಸೆಷನ್’ ವೆಬ್ ಸಿರೀಸ್ ಮೂಡಿಬಂದಿದೆ. 2018, 2019 ಮತ್ತು 2021ರಲ್ಲಿ ಈ ಸರಣಿಗಳು ಬಿಡುಗಡೆ ಆದವು. ಮಾಧ್ಯಮ ಸಂಸ್ಥೆಯ ಒಡೆತನ ಹೊಂದಿರುವ ಒಂದು ಕುಟುಂಬದ ಕಥೆ ಇದರಲ್ಲಿ ಇದೆ. ತುಂಬ ಮನರಂಜನಾತ್ಮಕವಾಗಿ ಇದು ಮೂಡಿಬಂದಿದೆ. ಇದರಲ್ಲಿನ ಪ್ರತಿ ಪಾತ್ರಗಳು ಕೂಡ ವಿಭಿನ್ನವಾಗಿ ಪ್ರೇಕ್ಷಕರನ್ನು ಆಕರ್ಷಿಸುತ್ತವೆ.
‘ಯೇ ಕಾಲಿ ಕಾಲಿ ಆಂಖೆ’ – ನೆಟ್ಫ್ಲಿಕ್ಸ್
ತಾಹಿರ್ ರಾಜ್ ಭಸಿನ್, ಶ್ವೇತಾ ತ್ರಿಪಾಠಿ, ಆಂಚಲ್ ಸಿಂಗ್ ನಟಿಸಿರುವ ‘ಯೇ ಕಾಲಿ ಕಾಲಿ ಆಂಖೆ’ ವೆಬ್ ಸಿರೀಸ್ ಮೊದಲ ಸೀಸನ್ ಇತ್ತೀಚೆಗೆ ಬಿಡುಗಡೆ ಆಗಿತ್ತು. ಈಗ ಎರಡನೇ ಸೀಸನ್ ಕೂಡ ವೀಕ್ಷಣೆಗೆ ಲಭ್ಯವಾಗಿದೆ. ಈ ವೆಬ್ ಸಿರೀಸ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ:
175 ಕೋಟಿ ರೂ. ಎದುರಿಗಿಟ್ಟರೂ ಆಫರ್ ಒಪ್ಪಲಿಲ್ಲ ಅಕ್ಷಯ್ ಕುಮಾರ್; ಇದು ‘ಬಚ್ಚನ್ ಪಾಂಡೆ’ ತಾಕತ್ತು
ಭಾರತದಲ್ಲಿ 263 ಕೋಟಿ ಕಲೆಕ್ಷನ್ ಮಾಡಿದ ‘ಸ್ಪೈಡರ್ ಮ್ಯಾನ್’ ಒಟಿಟಿಗೆ ಬರೋದು ಯಾವಾಗ? ಇಲ್ಲಿದೆ ಉತ್ತರ