- Kannada News Photo gallery Five couples from B-Town celebrating Valentine's Day for the first time since their wedding; Here are photos
ಮದುವೆಯ ನಂತರ ಮೊದಲ ಬಾರಿಗೆ ವ್ಯಾಲೆಂಟೈನ್ಸ್ ಡೇ ಆಚರಿಸಿಕೊಳ್ಳುತ್ತಿರುವ ಬಿ-ಟೌನ್ನ ಐದು ಜೋಡಿಗಳು; ಇಲ್ಲಿವೆ ಫೋಟೋಗಳು
ಮದುವೆಯ ನಂತರ ತಮ್ಮ ಮೊದಲ ಪ್ರೇಮಿಗಳ ದಿನವನ್ನು ಆಚರಿಸಲು ಬಿ-ಟೌನ್ ಸೆಲೆಬ್‌ಗಳು ತಯಾರಾಗಿದ್ದಾರೆ. ಹಾಗಾದರೆ ಆ ಬಾಲಿವುಡ್ ಜೋಡಿಗಳು ಯಾರು ಅಂತ ನಿಮಗೆ ಗೊತ್ತಾ? ಚಿಂತಿಸಬೇಡ ಆ ಕುರಿತಾಗಿ ನಾವು ನಿಮಗೆ ತಿಳಿಸುತ್ತೇವೆ ಮುಂದೆ ನೋಡಿ.
Updated on: Feb 08, 2022 | 12:05 PM

ಮದುವೆಯ ನಂತರ ಬಾಲಿವುಡ್ ಜೋಡಿಯ ಮೊದಲ ಪ್ರೇಮಿಗಳ ದಿನ: ಪ್ರಣಯ, ಉತ್ಸಾಹ, ಭರವಸೆ ಮತ್ತು ಪ್ರೀತಿಯಿಂದ ತುಂಬಿದ ವರ್ಷ. ಹೌದು, ನಾವು ಪ್ರೇಮಿಗಳ ವಾರ ಪ್ರಾರಂಭವಾದ ಬಗ್ಗೆ ಮಾತನಾಡುತ್ತಿದ್ದೇವೆ. ವಾರದ ಆರಂಭವು ಪ್ರೀತಿಯಿಂದ ತುಂಬಿದ್ದು, ಮದುವೆಯ ನಂತರ ತಮ್ಮ ಮೊದಲ ಪ್ರೇಮಿಗಳ ದಿನವನ್ನು ಆಚರಿಸಲು ಬಿ-ಟೌನ್ ಸೆಲೆಬ್‌ಗಳು ತಯಾರಾಗಿದ್ದಾರೆ. ಹಾಗಾದರೆ ಆ ಬಾಲಿವುಡ್ ಜೋಡಿಗಳು ಯಾರು ಅಂತ ನಿಮಗೆ ಗೊತ್ತಾ? ಚಿಂತಿಸಬೇಡ ಆ ಕುರಿತಾಗಿ ನಾವು ನಿಮಗೆ ತಿಳಿಸುತ್ತೇವೆ ಮುಂದೆ ನೋಡಿ.

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್: ಕತ್ರಿನಾ ಮತ್ತು ವಿಕ್ಕಿ ಡಿಸೆಂಬರ್ 9, 2021ರಂದು ರಾಜಸ್ಥಾನದ ಬರ್ವಾರಾ ಕೋಟೆಯಲ್ಲಿ ಅದ್ದೂರಿ ವಿವಾಹ ನಡೆಯಿತು. ಮದುವೆಯ ನಂತರ ಇಬ್ಬರೂ ತಮ್ಮ ಮೊದಲ ವ್ಯಾಲೆಂಟೈನ್ನ್ನು ಒಟ್ಟಿಗೆ ಆಚರಿಸಲಿದ್ದಾರೆ.

ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್: ಮೌನಿ ಮತ್ತು ಸೂರಜ್ 2022ರಲ್ಲಿ ಮೊದಲ ಸೆಲೆಬ್ರಿಟಿ ವಿವಾಹವನ್ನು ಮಾಡಿಕೊಂಡರು. ಅವರ ವಿವಾಹವಾಗಿ ಕೇವಲ ಒಂದು ತಿಂಗಳಾಗಿದ್ದು, ಪ್ರೇಮಿಗಳ ವಾರದ ಬಾಗಿಲನ್ನು ತಟ್ಟಿದ್ದಾರೆ. ಲವ್ ಬರ್ಡ್ಸ್ ಈಗಾಗಲೇ ತಮ್ಮ ಮದುವೆಯ ಚಿತ್ರಗಳಿಂದ ತಮ್ಮ ಅಭಿಮಾನಿಗಳನ್ನು ಹುಚ್ಚರನ್ನಾಗಿ ಮಾಡಿದ್ದಾರೆ.

ರಾಜ್‌ಕುಮಾರ್ ರಾವ್ ಮತ್ತು ಪತ್ರಲೇಖಾ: ಈ ಸೂಪರ್ ಸ್ವಾಭಾವಿಕ ಮತ್ತು ಸಾಂಪ್ರದಾಯಿಕ ದಂಪತಿಗಳು ಕಳೆದ ವರ್ಷ ನವೆಂಬರ್‌ನಲ್ಲಿ ವಿವಾಹ ಮಾಡಿಕೊಂಡರು.ಮದುವೆಗೂ ಮುಂಚೆ ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡುತ್ತಿದ್ದ ಜೋಡಿ ಈಗ ಮದುವೆಯ ನಂತರ ದಂಪತಿಗಳು ತಮ್ಮ ಮೊದಲ ವ್ಯಾಲೆಂಟೈನ್ನ್ನು ಒಟ್ಟಿಗೆ ಆಚರಿಸುತ್ತಾರೆ.

ಯಾಮಿ ಗೌತಮ್ ಮತ್ತು ಆದಿತ್ಯ ಧರ್: ಯಾಮಿ ಮತ್ತು ಆದಿತ್ಯ ಕಳೆದ ವರ್ಷ ಜೂನ್‌ನಲ್ಲಿ ವಿವಾಹವಾಗಿದ್ದರು. ಆಪ್ತರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಇವರಿಬ್ಬರು ವಿವಾಹವಾದರು. ಈ ವರ್ಷ, ಲವ್ ಬರ್ಡ್ಸ್ ತಮ್ಮ ಮದುವೆಯ ನಂತರ ತಮ್ಮ ಮೊದಲ ಪ್ರೇಮಿಗಳ ದಿನವನ್ನು ಒಟ್ಟಿಗೆ ಆಚರಿಸುತ್ತಿದ್ದಾರೆ. ಇದು ನಿಸ್ಸಂಶಯವಾಗಿ ಇಬ್ಬರಿಗೆ ವಿಶೇಷ ಸಮಯವಾಗಿರುತ್ತದೆ.

ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್: ಅಂಕಿತಾ ಮತ್ತು ವಿಕ್ಕಿ ಕಳೆದ ವರ್ಷ ಡಿಸೆಂಬರ್ 14 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅವರ ವಿವಾಹ ಸಮಾರಂಭವು ಅದ್ಭುರಿಯಿಂದ ಕೂಡಿತ್ತು. ಇಬ್ಬರು ತಮ್ಮ ಮೊದಲ ವ್ಯಾಲೆಂಟೈನ್ಸ್ ವೀಕ್ ಅನ್ನು ಆಚರಿಸುತ್ತಿದ್ದಾರೆ ಮತ್ತು ಅವರು ಪರಸ್ಪರ ಪ್ರೀತಿ ಮತ್ತು ವಾತ್ಸಲ್ಯವನ್ನು ಹಂಚಿಕೊಳ್ಳುತ್ತಿದ್ದಾರೆ.
























