IPL 2022 Auction: ಸಿಎಸ್​ಕೆ, ರಾಜಸ್ಥಾನ್ ತಂಡದ ಈ ಮೂವರು ಆಟಗಾರರ ಮೇಲೆ ಕಣ್ಣಿಟ್ಟಿದೆ ಆರ್​ಸಿಬಿ!

IPL 2022 Auction: ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿರುವ ತಂಡವು ಜೇಸನ್ ಹೋಲ್ಡರ್, ಅಂಬಟಿ ರಾಯುಡು ಮತ್ತು ರಿಯಾನ್ ಪರಾಗ್ ಅವರ ಮೇಲೆ ಬಿಡ್ ಮಾಡಲಿದೆ. ಈ ಮೂವರು ಆಟಗಾರರಿಗೆ ಆರ್‌ಸಿಬಿ ಭಾರಿ ಮೊತ್ತವನ್ನು ನಿಗದಿ ಮಾಡಿದೆ.

TV9 Web
| Updated By: ಪೃಥ್ವಿಶಂಕರ

Updated on: Feb 07, 2022 | 9:17 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2022 ರ ಹರಾಜಿನಲ್ಲಿ ತಂಡಕ್ಕೆ ಮೂವರು ಸ್ಟಾರ್ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ತಯಾರಿ ನಡೆಸುತ್ತಿದೆ. ತಮ್ಮ ಚೊಚ್ಚಲ ಐಪಿಎಲ್ ಪ್ರಶಸ್ತಿಗಾಗಿ ಕಾಯುತ್ತಿರುವ ತಂಡವು ಜೇಸನ್ ಹೋಲ್ಡರ್, ಅಂಬಟಿ ರಾಯುಡು ಮತ್ತು ರಿಯಾನ್ ಪರಾಗ್ ಅವರ ಮೇಲೆ ಬಿಡ್ ಮಾಡಲಿದೆ. ಈ ಮೂವರು ಆಟಗಾರರಿಗೆ ಆರ್‌ಸಿಬಿ ಭಾರಿ ಮೊತ್ತವನ್ನು ನಿಗದಿ ಮಾಡಿದೆ. ಅವರನ್ನು ತೆಗೆದುಕೊಳ್ಳಲು ಬೆಂಗಳೂರು ಫ್ರಾಂಚೈಸಿ ಸಂಪೂರ್ಣ ಸಿದ್ಧತೆಯೊಂದಿಗೆ ಇಳಿಯಲಿದೆ. ಆರ್‌ಸಿಬಿ ಕೂಡ ನಾಯಕನನ್ನು ಆಯ್ಕೆ ಮಾಡಬೇಕಿದೆ. ಕೊಹ್ಲಿ ನಾಯಕತ್ವವನ್ನು ತೊರೆದ ನಂತರ, RCB ನಾಯಕತ್ವಕ್ಕೆ ಸಂಭಾವ್ಯ ಸ್ಪರ್ಧಿಗಳನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದೆ. ತಂಡವು ಶ್ರೇಯಸ್ ಅಯ್ಯರ್ ಅವರಂತಹ ಆಟಗಾರನನ್ನು ಸೇರಿಸಲು ಪ್ರಯತ್ನಿಸುತ್ತದೆಯೇ ಅಥವಾ ಇನ್ನೂ ಒಂದು ಋತುವಿಗೆ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಕೊಹ್ಲಿಯನ್ನು ವಿನಂತಿಸುತ್ತದೆಯೇ ಎಂಬುದನ್ನು ನೋಡಬೇಕಾಗಿದೆ.

1 / 5
ಆರ್‌ಸಿಬಿ ತಂಡವು 57 ಕೋಟಿ ರೂಪಾಯಿಯೊಂದಿಗೆ ಹರಾಜಿಗೆ ಪ್ರವೇಶಿಸಲಿದ್ದು, ತಂಡದ ಆಸಕ್ತಿಯು ಮೂವರು ಆಟಗಾರರ ಮೇಲ್ಲಿದೆ ಎಂದು ನಂಬಲಾಗಿದೆ. ಹೋಲ್ಡರ್ ಹೊರತುಪಡಿಸಿ, ಇದು ಮಾಜಿ ಚೆನ್ನೈ ಸೂಪರ್ ಕಿಂಗ್ಸ್ (CSK) ಬ್ಯಾಟ್ಸ್‌ಮನ್ ಅಂಬಟಿ ರಾಯುಡು ಮತ್ತು ರಾಜಸ್ಥಾನದ ಮಾಜಿ ಯುವ ಆಟಗಾರ ರಿಯಾನ್ ಪರಾಗ್ ಅವರನ್ನು ಒಳಗೊಂಡಿದೆ. ಮೂಲಗಳ ಪ್ರಕಾರ, ಆರ್​ಸಿಬಿ ಹೋಲ್ಡರ್‌ಗೆ 12 ಕೋಟಿ, ರಾಯುಡುಗೆ 8 ಕೋಟಿ ಮತ್ತು ಪರಾಗ್‌ಗೆ 7 ಕೋಟಿ ರೂಪಾಯಿ ಇಟ್ಟುಕೊಂಡಿದ್ದಾರೆ. ಈ ಆಟಗಾರರಿಗೆ ಸುಮಾರು 27 ಕೋಟಿ ಖರ್ಚು ಮಾಡಿದರೆ 28 ಕೋಟಿ ರೂ. ಕೊಹ್ಲಿ, ಮ್ಯಾಕ್ಸ್‌ವೆಲ್, ಸಿರಾಜ್, ಅವರ ರೂಪದಲ್ಲಿ ತಂಡದ ಪ್ರಮುಖ ಆಟಗಾರರನ್ನು ನಿರ್ಧರಿಸಲಾಗುತ್ತದೆ. ಆಶಾದಾಯಕವಾಗಿ ಆರ್​ಸಿಬಿ ಮೂರು ನೆಚ್ಚಿನ ಆಟಗಾರರಲ್ಲಿ ಇಬ್ಬರನ್ನು ಸೇರಿಸಬಹುದು.

2 / 5
ಹರಾಜಿನಲ್ಲಿ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ ಆದರೆ ಆಲ್‌ರೌಂಡರ್‌ಗಳ ಸಂಖ್ಯೆ ಕಡಿಮೆ ಇರುವುದರಿಂದ ಹೋಲ್ಡರ್ ಐಪಿಎಲ್‌ನಲ್ಲಿ ದೊಡ್ಡ ಬಿಡ್‌ಗೆ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಈ ತಂಡ ಕೂಡ ಹೋಲ್ಡರ್ ಅವರನ್ನು ನಾಯಕನಾಗಿ ನೋಡುತ್ತಿದೆ. ಮೂಲಗಳ ಪ್ರಕಾರ, “ಕ್ರಿಸ್ ಮೋರಿಸ್ ಒಬ್ಬ ಉತ್ತಮ ಕ್ರಿಕೆಟಿಗ ಆದರೆ ಅವರು 16 ಕೋಟಿಗೂ ಹೆಚ್ಚು ಬಿಡ್‌ಗೆ ಅರ್ಹರೇ? ಎಂಬುದು ಪ್ರಶ್ನೆ. ಆದರೆ ಆಲ್ ರೌಂಡರ್ ಕೊರತೆಯಿಂದಾಗಿ ಕೆಲವು ಫ್ರಾಂಚೈಸಿಗಳು ತಾಳ್ಮೆ ಕಳೆದುಕೊಂಡವು.

3 / 5
ಸಿಎಸ್‌ಕೆ ಯಶಸ್ಸಿನಲ್ಲಿ ಅಂಬಟಿ ರಾಯುಡು ಪ್ರಮುಖ ಪಾತ್ರ ವಹಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಪ್ರಯತ್ನಿಸಿದ ಮತ್ತು ಪರೀಕ್ಷಿಸಿದ ಆಟಗಾರರ ಮೇಲೆ ಇತರ ತಂಡಗಳು ಬಿಡ್ ಮಾಡುವುದು ಸಹಜ. ಅಂತಹ ಪರಿಸ್ಥಿತಿಯಲ್ಲಿ, ಹಾಲಿ ಚಾಂಪಿಯನ್ ತಂಡವು ರಾಯುಡು ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲು ಬಯಸುತ್ತಿದೆ. ರಾಯುಡು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿ ಹರಾಜಿಗೆ ಪ್ರವೇಶಿಸುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಬ್ಯಾಟಿಂಗ್, ವಿಕೆಟ್ ಕೀಪಿಂಗ್ ಮತ್ತು ಅನುಭವವು ಅವರನ್ನು ಪ್ರಮುಖ ಸ್ಪರ್ಧಿಯನ್ನಾಗಿ ಮಾಡುತ್ತದೆ. RCB ಅವರನ್ನು ಖರೀದಿಸಲು ಪ್ರಯತ್ನಿಸಲಿದೆ. ರಾಯುಡು ಇದುವರೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಪರ ಮಾತ್ರ ಆಡಿದ್ದಾರೆ. ರಾಯುಡು ಮಧ್ಯಮ ಕ್ರಮಾಂಕದಲ್ಲಿ ಹಾಗೂ ಆರಂಭಿಕರಾಗಿ ಆಡಬಲ್ಲರು.

4 / 5
ಐಪಿಎಲ್ 2020 ರಲ್ಲಿ ಅವರ ಉತ್ತಮ ಪ್ರದರ್ಶನದ ನಂತರ ರಿಯಾನ್ ಪರಾಗ್ ಅವರ ಪ್ರದರ್ಶನ 2021 ರಲ್ಲಿ ಉತ್ತಮವಾಗಿರಲಿಲ್ಲ. ಅವರು ದೊಡ್ಡ ಹಿಟ್ಟರ್ ಆಗಿದ್ದು, ಅವರು ಆಫ್ ಸ್ಪಿನ್ ಬೌಲ್ ಕೂಡ ಮಾಡಬಲ್ಲರು, ಇದು ಹರಾಜಿನಲ್ಲಿ ಅವರಿಗೆ ದೊಡ್ಡ ಬಿಡ್ ಅನ್ನು ಪಡೆಯುವ ನಿರೀಕ್ಷೆಯಿದೆ. ಅವರು 2018 ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದಾರೆ.  ಪರಾಗ್ ಕೆಳ ಕ್ರಮಾಂಕದಲ್ಲಿ ತ್ವರಿತವಾಗಿ ರನ್ ಗಳಿಸಲು ಹೆಸರುವಾಸಿಯಾಗಿದ್ದಾರೆ.

5 / 5
Follow us