ರಾಯರ ಸನ್ನಿಧಿಯಲ್ಲಿ ನಟ ‘ಕಿಚ್ಚ’ ಸುದೀಪ್; ಇಲ್ಲಿದೆ ವಿಡಿಯೋ
ಸುದೀಪ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ದೇವಸ್ಥಾನಕ್ಕೆ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇವರನ್ನು ನಿಯಂತ್ರಿಸೋಕೆ ಪೊಲೀಸರು ಹರಸಾಹಸ ಪಡೆಯಬೇಕಾಯಿತು.
ನಟ ಸುದೀಪ್ (Kichcha Sudeep) ಅವರು ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ. ಮಂತ್ರಾಲಯದಲ್ಲಿ ಗುರುವೈಭವೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಅಲ್ಲಿಗೆ ತೆರಳಿದ್ದಾರೆ. ಸುದೀಪ್ ಅವರು ದೇವಸ್ಥಾನಕ್ಕೆ ತೆರಳಿ ರಾಯರ ಬೃಂದಾವನ ದರ್ಶನ ಪಡೆದಿದ್ದಾರೆ. ಚಿತ್ರರಂಗದಲ್ಲಿ ಸುದೀಪ್ 26 ವರ್ಷ ಪೂರೈಸಿದ್ದಾರೆ. ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರ ಸಾಧನೆಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸುದೀಪ್ಗೆ ಸನ್ಮಾನ ಮಾಡಲಾಗಿದೆ. ಪೀಠಾಧಿಪತಿ ಸುಭುದೇಂದ್ರ ತೀರ್ಥರಿಂದ ಸುದೀಪ್ಗೆ ಸನ್ಮಾನ ಮಾಡಲಾಯಿತು. ಸುದೀಪ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ದೇವಸ್ಥಾನಕ್ಕೆ ಅವರ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಇವರನ್ನು ನಿಯಂತ್ರಿಸೋಕೆ ಪೊಲೀಸರು ಹರಸಾಹಸ ಪಡೆಯಬೇಕಾಯಿತು. ‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ಕೊನೆಯ ಹಂತದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಸುದೀಪ್ ಇಂಗ್ಲಿಷ್ ವರ್ಷನ್ ಡಬ್ಬಿಂಗ್ ಪೂರ್ಣಗೊಳಿಸಿದ್ದರು.
ಇದನ್ನೂ ಓದಿ: 26 Years Of Sudeepism: ‘ಸುದೀಪ್ ಚಿತ್ರರಂಗದ ಪಯಣಕ್ಕೆ 26 ವರ್ಷ’; ಪತ್ನಿ ಪ್ರಿಯಾಗೆ ಧನ್ಯವಾದ ಹೇಳಿದ ಕಿಚ್ಚ
‘ಯಾಕ್ರಿ ನಿಮಗೆ ಇಷ್ಟು ಗಾಂಚಲಿ ಅಂತ ಕೇಳ್ತಾರೆ, ಎಲ್ಲವೂ ಇವರಿಂದಾನೆ’: ವೇದಿಕೆಯಲ್ಲಿ ಸುದೀಪ್ ಓಪನ್ ಮಾತು