‘ಯಾಕ್ರಿ ನಿಮಗೆ ಇಷ್ಟು ಗಾಂಚಲಿ ಅಂತ ಕೇಳ್ತಾರೆ, ಎಲ್ಲವೂ ಇವರಿಂದಾನೆ’: ವೇದಿಕೆಯಲ್ಲಿ ಸುದೀಪ್​ ಓಪನ್​ ಮಾತು

‘ಯಾಕ್ರಿ ನಿಮಗೆ ಇಷ್ಟು ಗಾಂಚಲಿ ಅಂತ ಕೇಳ್ತಾರೆ, ಎಲ್ಲವೂ ಇವರಿಂದಾನೆ’: ವೇದಿಕೆಯಲ್ಲಿ ಸುದೀಪ್​ ಓಪನ್​ ಮಾತು
ಪ್ರದೀಪ್​, ಸುದೀಪ್​

‘ಯೆಲ್ಲೋ ಬೋರ್ಡ್​’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ಗೆ ಸುದೀಪ್​ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ವೇದಿಕೆಯಲ್ಲಿ ಮುಕ್ತವಾಗಿ ಮಾತನಾಡಿದರು.

TV9kannada Web Team

| Edited By: Madan Kumar

Feb 28, 2022 | 1:39 PM

ಕನ್ನಡ ಚಿತ್ರರಂಗದಲ್ಲಿ ಕಿಚ್ಚ ಸುದೀಪ್​ (Kichcha Sudeep) ಬಹುಬೇಡಿಕೆಯ ನಟನಾಗಿ ಮಿಂಚುತ್ತಿದ್ದಾರೆ. ಸ್ಯಾಂಡಲ್​ವುಡ್​ ಮಾತ್ರವಲ್ಲದೇ ಪರಭಾಷೆಯಲ್ಲಿಯೂ ಅವರಿಗೆ ಸಖತ್​​ ಡಿಮ್ಯಾಂಡ್​ ಇದೆ. ರಾಜಮೌಳಿ, ಅಮಿತಾಭ್​ ಬಚ್ಚನ್, ಸಲ್ಮಾನ್​ ಖಾನ್​, ರಾಮ್​ ಗೋಪಾಲ್​ ವರ್ಮಾ ಮುಂತಾದ ಘಟಾನುಘಟಿಗಳ ಜೊತೆ ಕೆಲಸ ಮಾಡಿದ ಅನುಭವ ಸುದೀಪ್​ ಅವರಿಗೆ ಇದೆ. ಇಂದು ದೊಡ್ಡ ಸ್ಥಾನದಲ್ಲಿ ಅವರು ಅನೇಕ ಹೊಸಬರಿಗೆ ಪ್ರೋತ್ಸಾಹ ನೀಡುತ್ತಾರೆ. ಹೊಸ ತಂತ್ರಜ್ಞರು ಮತ್ತು ಕಲಾವಿದರಿಗೆ ಕಿಚ್ಚ ಬೆನ್ನು ತಟ್ಟುತ್ತಾರೆ. ಸ್ನೇಹಿತರ ಸಿನಿಮಾಗಳಿಗೆ ಮನಸಾರೆ ಬೆಂಬಲ ನೀಡುತ್ತಾರೆ. ಪ್ರದೀಪ್ ನಟನೆಯ ‘ಯೆಲ್ಲೋ ಬೋರ್ಡ್​’ (Yellow Board Movie) ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮಕ್ಕೆ ಸುದೀಪ್​ ಅತಿಥಿಯಾಗಿ ಬಂದಿದ್ದರು. ಈ ವೇಳೆ ಅವರು ವೇದಿಕೆಯಲ್ಲಿ ಮುಕ್ತವಾಗಿ ಮಾತನಾಡಿದರು. ತಮ್ಮ ಸಿನಿಮಾ ಜರ್ನಿಯ ಏಳು-ಬೀಳುಗಳನ್ನು ಕೂಡ ಅವರು ಮೆಲುಕು ಹಾಕಿದರು. ಆರಂಭದಿಂದ ದಿನಗಳಿಂದ ಇಂದಿನವರೆಗೆ ಸುದೀಪ್​ ಅವರ ಸಿನಿಮಾ ಪಯಣದಲ್ಲಿ ಜೊತೆಗಿದ್ದು ಪ್ರೋತ್ಸಾಹ ನೀಡಿದ್ದೇ ಅವರ ಕುಟುಂಬದವರು, ಸ್ನೇಹಿತರು ಮತ್ತು ಅಭಿಮಾನಿಗಳು. ಈ ಕುರಿತು ವೇದಿಕೆಯಲ್ಲಿ ಸುದೀಪ್​ (Sudeep) ಮಾತನಾಡಿದ್ದಾರೆ. ತಂದೆ-ತಾಯಿ, ಪತ್ನಿ, ಮಗಳು ಮತ್ತು ಬಂಧು-ಬಾಂಧವರ ಸಹಕಾರಕ್ಕೆ ಅವರು ಧನ್ಯವಾದ ಹೇಳಿದ್ದಾರೆ.

‘ತಮ್ಮ ಸಿನಿಮಾದ ಬಗ್ಗೆ ನಾಲ್ಕು ಮಾತನಾಡಿ ಎಂದು ಬೇರೆ ನಿರ್ದೇಶಕರು ಮತ್ತು ನಿರ್ಮಾಪಕರು ಕೇಳಿಕೊಳ್ಳುತ್ತಾರಲ್ಲ.. ಚಿತ್ರರಂಗದಲ್ಲಿ ನಮಗೆ ಈ ಒಂದು ಸ್ಥಾನ ಸಿಕ್ಕಿದ್ದು ಎಷ್ಟೋ ವರ್ಷಗಳ ನಂತರ. ಅದಕ್ಕಾಗಿ ನನ್ನ ತಂದೆ-ತಾಯಿಗೆ ನಾನು ಧನ್ಯವಾದ ಹೇಳಬೇಕು. ನನ್ನ ಪತ್ನಿ, ತನ್ನ ಮಗಳು ಹಾಗೂ ಇಡೀ ಕುಟುಂಬದವರು ನನಗೆ ಅಪರಿಮಿತ ಪ್ರೀತಿ ತೋರಿಸಿ, ಹಾರೈಸಿದ್ದಾರೆ’ ಎಂದು ಸುದೀಪ್​ ಹೇಳಿದ್ದಾರೆ.

‘ರಕ್ತ ಸಂಬಂಧ ಇಲ್ಲದ ಎಷ್ಟೋ ಜನ 26 ವರ್ಷದಿಂದ ನನ್ನ ಜೊತೆ ಎಷ್ಟು ಗಾಂಚಲಿಯಿಂದ ನಡೆದುಕೊಂಡು ಬಂದಿದ್ದಾರೆ ಎಂದರೆ, ಆ ಬಗ್ಗೆ ಹೇಳ್ತೀನಿ. ಯಾಕ್ರಿ ನಿಮಗೆ ಇಷ್ಟು ಗಾಂಚಲಿ ಅಂತ ಎಲ್ಲರೂ ಕೇಳ್ತಾರೆ. ಅದು ಇವರಿಂದಾನೇ. ಸಿನಿಮಾ ಹಿಟ್​ ಆದಾಗ ಮಾತ್ರವಲ್ಲ, ಫ್ಲಾಪ್​ ಆದಾಗಲೂ ನನ್ನನ್ನು ಅವರು ಹೀಗೆಯೇ ನಡೆಸಿದ್ದಾರೆ’ ಎಂದರು ಸುದೀಪ್​.

‘ರಕ್ತ ಸಂಬಂಧ ಇಲ್ಲದೇ ಇರುವ ಸಂಬಂಧಗಳ ಬಗ್ಗೆ ನಾವು ಮಾತನಾಡಬೇಕು. ನನಗಿಂತ ಒಳ್ಳೆಯ ಕಲಾವಿದರು ಇಲ್ಲ ಅಂತೇನೂ ಅಲ್ಲ. ನನಗಿಂತ ಚೆನ್ನಾಗಿ ಇರುವವರು ಇಲ್ಲ ಅಂತೇನೂ ಅಲ್ಲ. ಅದರ ನಡುವೆ ನೀನು ಇದಾಗು ಅಂತ ಸಮಯ ನಿಮ್ಮನ್ನು ಆಯ್ಕೆ ಮಾಡುತ್ತದೆ. ಇವನು ಕೂಡ ನನ್ನವನೇ’ ಎಂದು ‘ಯೆಲ್ಲೋ ಬೋರ್ಡ್​’ ಚಿತ್ರದ ಹೀರೋ ಪ್ರದೀಪ್​ ಕಡೆಗೆ ಕೈ ತೋರಿಸಿದರು ಸುದೀಪ್​.

‘ಯೆಲ್ಲೋ ಬೋರ್ಡ್​’ ಸಿನಿಮಾದಲ್ಲಿ ಪ್ರದೀಪ್​ ಅವರು ಕ್ಯಾಬ್​ ಡ್ರೈವರ್​ ಪಾತ್ರ ಮಾಡಿದ್ದಾರೆ. ‘ರಂಗ ಎಸ್​ಎಸ್​ಎಸ್​ಸಿ’ ಸಿನಿಮಾದಲ್ಲಿ ಸುದೀಪ್​ ಆಟೋ ಡ್ರೈವರ್​ ಪಾತ್ರಕ್ಕೆ ಬಣ್ಣ ಹಚ್ಚಿದ್ದರು ಎಂಬುದನ್ನು ನಿರೂಪಕಿ ನೆನಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸುದೀಪ್​, ‘ನಮ್​ ಆಟೋ ಹಿಂದೆ ರಮ್ಯಾ ಕೂತಿದ್ದರು. ಅದು ಬೇರೆ ವಿಚಾರ’ ಎಂದು ಹೇಳಿದರು. ಸುದೀಪ್​ ಅವರು ಈಗಾಗಲೇ ‘ಯೆಲ್ಲೋ ಬೋರ್ಡ್​’ ಸಿನಿಮಾ ನೋಡಿದ್ದಾರೆ. ಆ ಬಗ್ಗೆ ಕೂಡ ಅವರು ವೇದಿಕೆ ಮೇಲೆ ಮಾತನಾಡಿದರು.

ಇದನ್ನೂ ಓದಿ:

ಈ ಫೋಟೋಗಾಗಿ 36 ವರ್ಷಗಳಿಂದ ಕಾದಿದ್ದ ಸುದೀಪ್​; ಕಿಚ್ಚನ ಬಾಲ್ಯದ ಕನಸು ಈಗ ನನಸಾಯ್ತು

ಸುದೀಪ್​ ನಟನೆಯ ‘ವಿಕ್ರಾಂತ್​ ರೋಣ’ ರಿಲೀಸ್​ ದಿನಾಂಕ ಮುಂದಕ್ಕೆ; ಚಿತ್ರತಂಡದಿಂದ ಘೋಷಣೆ

Follow us on

Related Stories

Most Read Stories

Click on your DTH Provider to Add TV9 Kannada