‘ಅಮ್ಮ ಇಲ್ಲದಿದ್ದರೆ ಎಷ್ಟು ಕಷ್ಟ ಅಂತ ನಮಗೆ ಗೊತ್ತು’: ರವಿಚಂದ್ರನ್​ ತಾಯಿಯ ಅಂತಿಮ ದರ್ಶನ ಪಡೆದ ರಾಘಣ್ಣ

‘ಅಮ್ಮ ಇಲ್ಲದಿದ್ದರೆ ಎಷ್ಟು ಕಷ್ಟ ಅಂತ ನಮಗೆ ಗೊತ್ತು’: ರವಿಚಂದ್ರನ್​ ತಾಯಿಯ ಅಂತಿಮ ದರ್ಶನ ಪಡೆದ ರಾಘಣ್ಣ

TV9 Web
| Updated By: ಮದನ್​ ಕುಮಾರ್​

Updated on: Feb 28, 2022 | 3:13 PM

‘ನಮಗೆ ಈ ಕುಟುಂಬ ತುಂಬ ಪರಿಚಯ. ರವಿಚಂದ್ರನ್​ ಅವರ ತಾಯಿ ನಮ್ಮನ್ನು ಆಟ ಆಡಿಸಿದ್ದರು’ ಎಂದು ಪಟ್ಟಮ್ಮಾಳ್​ ವೀರಾಸ್ವಾಮಿ ಬಗ್ಗೆ ರಾಘವೇಂದ್ರ ರಾಜ್​ಕುಮಾರ್​ ಮಾತನಾಡಿದ್ದಾರೆ.

‘ಕ್ರೇಜಿ ಸ್ಟಾರ್​’ ರವಿಚಂದ್ರನ್ (Ravichandran)​ ಅವರ ಕುಟುಂಬದಲ್ಲಿ ಶೋಕ ಮನೆ ಮಾಡಿದೆ. ಇಂದು (ಫೆ.28) ಮುಂಜಾನೆಯೇ ರವಿಚಂದ್ರನ್​ ತಾಯಿ ಪಟ್ಟಮ್ಮಾಳ್​ ವೀರಾಸ್ವಾಮಿ ಅವರು ನಿಧನ ಹೊಂದಿದರು. ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿಯುತ್ತಿದ್ದಾರೆ. ರವಿಚಂದ್ರನ್​ ಅವರ ರಾಜಾಜಿನಗರದ ನಿವಾಸದಲ್ಲಿ ಪಟ್ಟಮ್ಮಾಳ್ (Pattammal Veeraswamy) ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಡಾ. ರಾಜ್​ಕುಮಾರ್​ ಕುಟುಂಬ ಮತ್ತು ರವಿಚಂದ್ರನ್​ ಕುಟುಂಬದ ನಡುವೆ ಮೊದಲಿನಿಂದಲೂ ಬಾಂಧವ್ಯ ಇದೆ. ಇಂದು ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಅವರು ಪಟ್ಟಮ್ಮಾಳ್​ ಅವರ ಅಂತಿಮ ದರ್ಶನ ಪಡೆದರು. ‘ತಾಯಿಯನ್ನು ಕಳೆದುಕೊಂಡರೆ ಎಷ್ಟು ಕಷ್ಟ ಆಗುತ್ತದೆ ಎಂಬುದು ನಮಗೆ ಗೊತ್ತು. ನಾವು ಆ ನೋವನ್ನು ಅನುಭವಿಸಿದ್ದೇವೆ. ತಾಯಿ ಇದ್ದರೆ ಅದೊಂಥರಾ ಶಕ್ತಿ ನಮಗೆ. ಎಲ್ಲೋ ಇದ್ದಾರೆ ಅಂತ ಧೈರ್ಯ ಬರುತ್ತದೆ. ನಮಗೆ ರವಿಚಂದ್ರನ್​ ಕುಟುಂಬ ತುಂಬ ಪರಿಚಯ. ರವಿಚಂದ್ರನ್​ ಅವರ ತಾಯಿ ನಮ್ಮನ್ನು ಆಟ ಆಡಿಸಿದ್ದರು. ತಾಯಿ ಇಲ್ಲ ಎಂಬ ನೋವನ್ನು ರವಿಚಂದ್ರನ್​ ಅವರು ಹೇಗೆ ತಡೆದುಕೊಳ್ಳುತ್ತಾರೋ ಗೊತ್ತಿಲ್ಲ. ತಡೆದುಕೊಳ್ಳುವ ಶಕ್ತಿಯನ್ನು ದೇವರು ನೀಡಲಿ’ ಎಂದು ರಾಘಣ್ಣ ಹೇಳಿದ್ದಾರೆ.

ಇದನ್ನೂ ಓದಿ:

Breaking News: ರವಿಚಂದ್ರನ್​ ತಾಯಿ ನಿಧನ: ಪಟ್ಟಮ್ಮಾಳ್​ ವೀರಸ್ವಾಮಿ ಇನ್ನಿಲ್ಲ

ರವಿಚಂದ್ರನ್​ಗೆ ‘ಹಳ್ಳಿ ಮೇಷ್ಟು’ ನೆನಪಿಸಿದ ‘ಬೈ ಟೂ ಲವ್​’; ಪ್ರೀ-ರಿಲೀಸ್​ ಇವೆಂಟ್​ನಲ್ಲಿ ‘ಕ್ರೇಜಿ ಸ್ಟಾರ್​’ ಮಸ್ತ್​ ಮಾತು