ರವಿಚಂದ್ರನ್ಗೆ ‘ಹಳ್ಳಿ ಮೇಷ್ಟು’ ನೆನಪಿಸಿದ ‘ಬೈ ಟೂ ಲವ್’; ಪ್ರೀ-ರಿಲೀಸ್ ಇವೆಂಟ್ನಲ್ಲಿ ‘ಕ್ರೇಜಿ ಸ್ಟಾರ್’ ಮಸ್ತ್ ಮಾತು
‘ಬೈ ಟೂ ಲವ್’ ಚಿತ್ರದಲ್ಲಿ ಶ್ರೀಲೀಲಾ ಮತ್ತು ಧನ್ವೀರ್ ಜೊತೆಗೆ ಒಂದು ಮಗು ಕೂಡ ಅಭಿನಯಿಸಿದೆ. ಅದನ್ನು ನೋಡಿದ ತಕ್ಷಣ ರವಿಚಂದ್ರನ್ ಅವರಿಗೆ ‘ಹಳ್ಳಿ ಮೇಷ್ಟ್ರು’ ಚಿತ್ರ ನೆನಪಾಯಿತು.
ನಟ ರವಿಚಂದ್ರನ್ (Ravichandran) ಅವರಿಗೆ ಕನ್ನಡ ಚಿತ್ರರಂಗದಲ್ಲಿ ಇರುವ ಅನುಭವ ಅಪಾರ. ಅನೇಕ ಹೊಸಬರಿಗೆ ಅವರೇ ಸ್ಫೂರ್ತಿ. ಹಾಗಾಗಿ ಹಲವು ಸಿನಿಮಾ ಕಾರ್ಯಕ್ರಮಗಳಿಗೆ ‘ಕ್ರೇಜಿ ಸ್ಟಾರ್’ ಅತಿಥಿಯಾಗಿ ಆಗಮಿಸುತ್ತಾರೆ. ಶ್ರೀಲೀಲಾ ಮತ್ತು ಧನ್ವೀರ್ ನಟನೆಯ ‘ಬೈ ಟೂ ಲವ್’ (Bytwo Love Kannada Movie) ಚಿತ್ರದ ಪ್ರೀ ರಿಲೀಸ್ ಇವೆಂಟ್ ಇತ್ತೀಚೆಗೆ ನಡೆಯಿತು. ಈ ವೇದಿಕೆಯಲ್ಲಿ ರವಿಚಂದ್ರನ್ ಅವರು ಕೆಲವು ಅಪರೂಪದ ಮಾತುಗಳನ್ನು ಆಡಿದರು. ‘ಬೈ ಟೂ ಲವ್’ ಸಿನಿಮಾದಲ್ಲಿ ಶ್ರೀಲೀಲಾ ಮತ್ತು ಧನ್ವೀರ್ ಜೊತೆಗೆ ಒಂದು ಮಗು ಕೂಡ ಅಭಿನಯಿಸಿದೆ. ಅದನ್ನು ನೋಡಿದ ತಕ್ಷಣ ರವಿಚಂದ್ರನ್ ಅವರಿಗೆ ‘ಹಳ್ಳಿ ಮೇಷ್ಟ್ರು’ (Halli Meshtru Movie) ಚಿತ್ರ ನೆನಪಾಯಿತು. ಆ ಸಿನಿಮಾದ ಶೂಟಿಂಗ್ ಸಂದರ್ಭದಲ್ಲಿ ಏನೆಲ್ಲ ನಡೆದಿತ್ತು? ಮಗುವಿನ ಜೊತೆ ಚಿತ್ರೀಕರಣ ಮಾಡುವುದು ಎಷ್ಟು ಕಷ್ಟ ಎಂಬುದನ್ನೆಲ್ಲ ರವಿ ಚಂದ್ರನ್ ವಿವರಿಸಿದರು. ‘ಬೈ ಟೂ ಲವ್’ ಸಿನಿಮಾ ಫೆ.18ರಂದು ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರಕ್ಕೆ ಹರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಮತ್ತು ಟ್ರೇಲರ್ ಮೂಲಕ ಈ ಚಿತ್ರ ಸಖತ್ ಹೈಪ್ ಸೃಷ್ಟಿ ಮಾಡಿದೆ.
ಇದನ್ನೂ ಓದಿ:
ಇಬ್ಬರು ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ; ನಟಿಯ ಮಾದರಿ ಕೆಲಸಕ್ಕೆ ಬಹುಪರಾಕ್
ಧನ್ವೀರ್-ಶ್ರೀಲೀಲಾ ಚಿತ್ರಕ್ಕೆ ‘ಬೈ ಟೂ ಲವ್’ ಅಂತ ಟೈಟಲ್ ಇಟ್ಟಿದ್ದು ಯಾಕೆ? ಡೈರೆಕ್ಟರ್ ನೀಡಿದ ಉತ್ತರ ಇಲ್ಲಿದೆ..
ಹಬ್ಬಳ್ಳಿ ಲವ್ ಜಿಹಾದ್ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಗರಂ!

