AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಬ್ಬರು ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ; ನಟಿಯ ಮಾದರಿ ಕೆಲಸಕ್ಕೆ ಬಹುಪರಾಕ್​

Sreeleela: ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಶ್ರೀಲೀಲಾ ಮತ್ತು ‘ಬೈ ಟೂ ಲವ್​’ ಚಿತ್ರತಂಡದವರು ಭೇಟಿ ನೀಡಿದ್ದಾರೆ. ಇಲ್ಲಿರುವ ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ಶ್ರೀಲೀಲಾ ಅವರು ದತ್ತು ಪಡೆದುಕೊಂಡಿದ್ದಾರೆ.

ಇಬ್ಬರು ಮಕ್ಕಳನ್ನು ದತ್ತು ಪಡೆದ ಶ್ರೀಲೀಲಾ; ನಟಿಯ ಮಾದರಿ ಕೆಲಸಕ್ಕೆ ಬಹುಪರಾಕ್​
ಶ್ರೀಲೀಲಾ, ಹರಿ ಸಂತೋಷ್​
Follow us
TV9 Web
| Updated By: ಮದನ್​ ಕುಮಾರ್​

Updated on: Feb 13, 2022 | 8:14 AM

ಕನ್ನಡದ ಖ್ಯಾತ ನಟಿ ಶ್ರೀಲೀಲಾ (Sreeleela) ಅವರು ಸಖತ್​ ಬ್ಯುಸಿ ಆಗಿದ್ದಾರೆ. ‘ಕಿಸ್​’, ‘ಭರಾಟೆ’ ಮುಂತಾದ ಸಿನಿಮಾಗಳ ಮೂಲಕ ಅವರು ಎಲ್ಲರ ಗಮನ ಸೆಳೆದಿದ್ದಾರೆ. ತೆಲುಗಿನ ‘ಪೆಳ್ಳಿ ಸಂದಡಿ’ ಚಿತ್ರದಲ್ಲಿ ನಟಿಸಿದ ಬಳಿಕ ಅವರ ಖ್ಯಾತಿ ದುಪ್ಪಟ್ಟಾಗಿದೆ. ಅಲ್ಲಿನ ಸ್ಟಾರ್​ ನಟರ ಚಿತ್ರಗಳಿಗೆ ಅವರು ನಾಯಕಿಯಾಗಿ ಆಯ್ಕೆ ಆಗುತ್ತಿದ್ದಾರೆ. ಶ್ರೀಲೀಲಾ ಅಭಿನಯಿಸಿರುವ ಕನ್ನಡದ ‘ಬೈ ಟೂ ಲವ್​’ (Bytwo Love Movie) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಿರುವ ಶ್ರೀಲೀಲಾ ಅವರು ಈಗೊಂದು ಮಹತ್ವದ ಕಾರ್ಯ ಮಾಡಿದ್ದಾರೆ. ಇಬ್ಬರು ವಿಶೇಷ ಚೇತನ ಮಕ್ಕಳನ್ನು (Special Children) ಅವರು ದತ್ತು ಪಡೆದುಕೊಂಡಿದ್ದಾರೆ. ಆ ಮೂಲಕ ಅವರು ಇತರರಿಗೂ ಮಾದರಿ ಆಗಿದ್ದಾರೆ. ಶ್ರೀಲೀಲಾಗೆ ಈಗಿನ್ನೂ ಇಪ್ಪತ್ತರ ಹರೆಯ. ಚಿತ್ರರಂಗದಲ್ಲಿ ಈಗತಾನೇ ಮಿಂಚಲು ಆರಂಭಿಸಿದ್ದಾರೆ. ಇಂಥ ಸಂದರ್ಭದಲ್ಲಿ ತಾವಾಯ್ತು, ತಮ್ಮ ಸಿನಿಮಾ ಆಯ್ತು ಎನ್ನುವವರೇ ಹೆಚ್ಚು. ಅಂಥವರ ನಡುವೆ ಶ್ರೀಲೀಲಾ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಸಮಾಜಮುಖಿ ಆಲೋಚನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ. ನಟಿಯ ಈ ಕಾರ್ಯಕ್ಕೆ ಎಲ್ಲರೂ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಮಾತೃಶ್ರೀ ಮನೋವಿಕಾಸ ಕೇಂದ್ರಕ್ಕೆ ಶ್ರೀಲೀಲಾ ಮತ್ತು ‘ಬೈ ಟೂ ಲವ್​’ ಚಿತ್ರತಂಡದವರು ಭೇಟಿ ನೀಡಿದ್ದಾರೆ. ಇದು ಬುದ್ಧಿಮಾಂದ್ಯ ಮಕ್ಕಳ ವಿಶೇಷ ಶಾಲೆ. ಇಲ್ಲಿರುವ ಗುರು ಮತ್ತು ಶೋಭಿತಾ ಎಂಬ ಇಬ್ಬರು ಮಕ್ಕಳನ್ನು ಶ್ರೀಲೀಲಾ ಅವರು ದತ್ತು ಪಡೆದುಕೊಂಡಿದ್ದಾರೆ. ಆ ಮೂಲಕ ಆ ಮಕ್ಕಳಿಗೆ ತಾಯಿಯ ಸ್ಥಾನವನ್ನು ತುಂಬಿದ್ದಾರೆ. ಮಕ್ಕಳ ಭವಿಷ್ಯದ ಸಂಪೂರ್ಣ ಜವಾಬ್ದಾರಿಯನ್ನು ಅವರು ಹೊತ್ತುಕೊಂಡಿದ್ದಾರೆ.

ಈ ವೇಳೆ ಶಾಲೆಯ ಇತರೆ ಮಕ್ಕಳ ಜೊತೆಗೆ ಶ್ರೀಲೀಲಾ ಅವರು ಒಂದಷ್ಟು ಹೊತ್ತು ಕಾಲ ಕಳೆದಿದ್ದಾರೆ. ವಿಶೇಷ ಚೇತನ ಮಕ್ಕಳ ಪರಿಸ್ಥಿತಿ ಕಂಡು ಅವರು ಭಾವುಕರಾಗಿದ್ದಾರೆ. ನಂತರ ಮಕ್ಕಳಿಗೆ ಸಿಹಿ ನೀಡಿ, ಊಟ ಬಡಿಸಿ ಖುಷಿಪಟ್ಟಿದ್ದಾರೆ. ಹಾಡಿ ಕುಣಿದು ಮಕ್ಕಳನ್ನು ಮನರಂಜಿಸಿದ್ದಾರೆ. ಈ ವೇಳೆ ‘ಬೈ ಟು ಲವ್​’ ಚಿತ್ರದ ನಿರ್ದೇಶಕ ಹರಿ ಸಂತೋಷ್​ ಕೂಡ ಜೊತೆಗಿದ್ದರು.

‘ಬೈ ಟು ಲವ್​’ ಸಿನಿಮಾ ಫೆ.18ರಂದು ತೆರೆ ಕಾಣಲಿದೆ. ಈ ಚಿತ್ರದಲ್ಲಿ ಧನ್ವೀರ್​ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ತಾಯಿ-ಮಗುವಿನ ಬಾಂಧವ್ಯದ ಕಥೆ ಇದೆ. ಸಿನಿಮಾದಲ್ಲಿ ಮಾತ್ರವಲ್ಲದೇ ರಿಯಲ್​ ಲೈಫ್​ನಲ್ಲಿಯೂ ಶ್ರೀಲೀಲಾ ಅವರು ಮಕ್ಕಳಿಗೆ ಆ ಪ್ರೀತಿ ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ:

Sreeleela: ಮಹೇಶ್​ ಬಾಬು ಮುಂದಿನ ಚಿತ್ರಕ್ಕೆ ಶ್ರೀಲೀಲಾ ನಾಯಕಿ? ಕನ್ನಡತಿಗೆ ಬಂಪರ್​ ಆಫರ್

ಧನ್ವೀರ್​-ಶ್ರೀಲೀಲಾ ಚಿತ್ರಕ್ಕೆ ‘ಬೈ ಟೂ ಲವ್​’ ಅಂತ ಟೈಟಲ್​ ಇಟ್ಟಿದ್ದು ಯಾಕೆ? ಡೈರೆಕ್ಟರ್​ ನೀಡಿದ ಉತ್ತರ ಇಲ್ಲಿದೆ..

ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಫೆಬ್ರುವರಿ ಮತ್ತು ಮಾರ್ಚ್ ಗೃಹಲಕ್ಷ್ಮಿ ಹಣ ಬಿಡುಗಡೆ ಆಗಿಲ್ಲ: ಸಚಿವೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
ಸಮಾವೇಶದಲ್ಲಿ ಸರ್ಕಾರದ ಎರಡು ವರ್ಷದ ಸಾಧನೆಗಳ ಪುಸ್ತಕ ಬಿಡುಗಡೆ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
Udupi Rains: ಉಡುಪಿಯಲ್ಲಿ ಮಳೆ ಆರ್ಭಟ: ಮಣಿಪಾಲ ರಸ್ತೆಯಲ್ಲಿ ಪ್ರವಾಹ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ಸಚಿವನಿಂದ ಪ್ರಾಸ್ತಾವಿಕ ಭಾಷಣ; ವೇದಿಕೆ ಮೇಲಿದ್ದವರು ಮಾತಿನಲ್ಲಿ ಬ್ಯೂಸಿ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ನಿರ್ಮಾಣ ಹಂತದ ನಾಡಪ್ರಭು ಕೆಂಪೇಗೌಡ ಲೇಔಟ್​ನಲ್ಲೂ ಜಲ ಪ್ರವಾಹ
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ಬೆಳಗ್ಗೆ ಸುರಿದ ಮಳೆಯಿಂದ ಮತ್ತಷ್ಟು ಹೆಚ್ಚಿದ ನೀರು, ಟ್ರಾಫಿಕ್ ಡೈವರ್ಟ್
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ರೈಲು ಹತ್ತುವ ಭರದಲ್ಲಿ ಪ್ರಯಾಣಿಕನನ್ನು ಕೆಳಗೆ ಬೀಳಿಸಿದ ವ್ಯಕ್ತಿ
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಜನ ನಿಶ್ಚಿಂತೆಯಿಂದ ಇರುವಂತೆ ಹೇಳಿ ಶಿವಕುಮಾರ್ ಹೊಸಪೇಟೆಗೆ ತೆರಳಿದರು
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ಕೋರ್ಟ್​ ಹಾಲಲ್ಲಿ ದರ್ಶನ್,ಪವಿತ್ರಾ ಅಕ್ಕ-ಪಕ್ಕ; ಹೊರಬರುವಾಗ ಅಪರೂಪದ ಘಟನೆ
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್
ವಿಡಿಯೋ: ಡಿವೈಡರ್ ಹಾರಿ ಬೈಕ್​ಗೆ ಗುದ್ದಿ ಪಲ್ಟಿಯಾದ ಕೆಎಸ್​ಆರ್​ಟಿಸಿ ಬಸ್