ಧನ್ವೀರ್-ಶ್ರೀಲೀಲಾ ಚಿತ್ರಕ್ಕೆ ‘ಬೈ ಟೂ ಲವ್’ ಅಂತ ಟೈಟಲ್ ಇಟ್ಟಿದ್ದು ಯಾಕೆ? ಡೈರೆಕ್ಟರ್ ನೀಡಿದ ಉತ್ತರ ಇಲ್ಲಿದೆ..
‘ಬೈ ಟೂ ಲವ್’ ಚಿತ್ರದ ಧನ್ವೀರ್ ಮತ್ತು ಶ್ರೀಲೀಲಾ ಜೋಡಿಯ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಇದೆ. ಈ ಸಿನಿಮಾಗೆ ಹರಿ ಸಂತೋಷ್ ನಿರ್ದೇಶನ ಮಾಡಿದ್ದಾರೆ.
ಧನ್ವೀರ್ ಮತ್ತು ಶ್ರೀಲೀಲಾ (Sreeleela) ನಟನೆಯ ‘ಬೈ ಟೂ ಲವ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಪೋಸ್ಟರ್ ಮತ್ತು ಸಾಂಗ್ ಮೂಲಕ ಈ ಸಿನಿಮಾ ಗಮನ ಸೆಳೆದಿದೆ. ಈ ಚಿತ್ರಕ್ಕೆ ‘ಬೈ ಟೂ ಲವ್’ ಅಂತ ಶೀರ್ಷಿಕೆ ಇಟ್ಟಿದ್ದು ಯಾಕೆ ಎಂಬ ಪ್ರಶ್ನೆ ಸಿನಿಪ್ರಿಯರ ಮನದಲ್ಲಿದೆ. ಅದಕ್ಕೆ ನಿರ್ದೇಶಕ ಹರಿ ಸಂತೋಷ್ (Hari Santhosh) ಉತ್ತರ ನೀಡಿದ್ದಾರೆ. ‘ಮೊದಲು ಕಥೆ ಸಿದ್ಧವಾಗಿತ್ತು. ಆದರೆ ಟೈಟಲ್ ಇಟ್ಟಿರಲಿಲ್ಲ. ಶೂಟಿಂಗ್ ಶುರು ಮಾಡಬೇಕು ಎಂದಾಗ ತಕ್ಷಣಕ್ಕೆ ಈ ಶೀರ್ಷಿಕೆ ಹೊಳೆಯಿತು. ನಾವು ಚಿಕ್ಕ ವಯಸ್ಸಿನಿಂದಲೂ ಎಲ್ಲವನ್ನೂ ಬೈ ಟೂ ಮಾಡಿ ಹಂಚಿಕೊಂಡಿರುತ್ತೇವೆ. ಅದೇ ರೀತಿ ದೊಡ್ಡವರಾದ ಮೇಲೆ ಭಾವನೆಗಳನ್ನು ಶೇರ್ ಮಾಡಿಕೊಳ್ಳುತ್ತೇವೆ. ಜಗಳದ ಕ್ಷಣಗಳನ್ನು ಕೂಡ ಶೇರ್ ಮಾಡುತ್ತೇವೆ. ಜಗಳಕ್ಕೂ ಸಹ ಕನಿಷ್ಠ ಇಬ್ಬರು ಇರಬೇಕು. ನಮ್ಮ ಸಿನಿಮಾದಲ್ಲಿ ಪ್ರೇಮಿಗಳಿಬ್ಬರು ಪ್ರೀತಿಯನ್ನು ಶೇರ್ ಮಾಡಿಕೊಳ್ಳುತ್ತಾರೆ. ಹಾಗಾಗಿ ಈ ಸಿನಿಮಾಗೆ ಬೈ ಟೂ ಲವ್ ಅಂತ ಹೆಸರು ಇಟ್ಟಿದ್ದೇವೆ’ ಎಂದು ಹರಿ ಸಂತೋಷ್ ಹೇಳಿದ್ದಾರೆ. ಧನ್ವೀರ್ (Dhanveer) ಮತ್ತು ಶ್ರೀಲೀಲಾ ಜೋಡಿಯ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಇದೆ. ಕೆವಿಎನ್ ಪ್ರೊಡಕ್ಷನ್ಸ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.
ಇದನ್ನೂ ಓದಿ:
‘ಹೆಣ್ಣುಮಗು ಹುಟ್ಟೋಕೆ ನಾನು ಮದುವೆ ಆಗಲ್ಲ’; ಶ್ರೀಲೀಲಾಗೆ ನೇರವಾಗಿ ಹೇಳಿದ ಧನ್ವೀರ್
ಡಬ್ಬಿಂಗ್ನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡ ಶ್ರೀಲೀಲಾ; ವೈರಲ್ ಆಯ್ತು ವಿಡಿಯೋ