ಚೆನ್ನೈನಲ್ಲಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಾ ದಂಪತಿ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ ಅವರನ್ನು ಶಿವರಾಜ್​ಕುಮಾರ್​-ಗೀತಾ ದಂಪತಿ ಭೇಟಿ ಮಾಡಿದ್ದಾರೆ. ಈ ಸಂದರ್ಭದ ಫೋಟೋ ಕೂಡ ಲಭ್ಯವಾಗಿದೆ.

ಚೆನ್ನೈನಲ್ಲಿ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ ಮಾಡಿದ ಶಿವರಾಜ್‌ಕುಮಾರ್-ಗೀತಾ ದಂಪತಿ
ಗೀತಾ ಶಿವರಾಜ್​ಕುಮಾರ್​, ಶಿವರಾಜ್​ಕುಮಾರ್​, ಎಂ.ಕೆ. ಸ್ಟಾಲಿನ್
Follow us
TV9 Web
| Updated By: ಮದನ್​ ಕುಮಾರ್​

Updated on:Feb 13, 2022 | 12:37 PM

ನಟ ಪುನೀತ್​ ರಾಜ್​ಕುಮಾರ್​ ಅವರನ್ನು ಕಳೆದುಕೊಂಡ ಬಳಿಕ ಡಾ. ರಾಜ್​ಕುಮಾರ್​ ಕುಟುಂಬ ನೋವಿನಲ್ಲಿದೆ. ಅದರ ನಡುವೆಯೂ ಜೀವನ ಮುಂದುವರಿಯಲೇ ಬೇಕಾದ ಅನಿವಾರ್ಯತೆ ಇದೆ. ಹಾಗಾಗಿ ಸಿನಿಮಾ ಕೆಲಸಗಳಲ್ಲಿ ನಟ ಶಿವರಾಜ್​ಕುಮಾರ್ (Shivarajkumar)​, ರಾಘವೇಂದ್ರ ರಾಜ್​ಕುಮಾರ್​ ಮತ್ತೆ ಬ್ಯುಸಿ ಆಗಿದ್ದಾರೆ. ಗೀತಾ ಶಿವರಾಜ್​ಕುಮಾರ್​ (Geetha Shivarajkumar) ಅವರು ಶಕ್ತಿಧಾಮದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ‘ಪಿಆರ್​ಕೆ ಪ್ರೊಡಕ್ಷನ್ಸ್​’ ಮತ್ತು ‘ಪಿಆರ್​ಕೆ ಆಡಿಯೋ’ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಾರೆ. ಈ ನಡುವೆ ಶಿವರಾಜ್​ಕುಮಾರ್​ ಮತ್ತು ಗೀತಾ ದಂಪತಿ ಚೆನ್ನೈಗೆ ತೆರಳಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್​ (M K Stalin) ಅವರನ್ನು ಭೇಟಿ ಆಗಿದ್ದಾರೆ. ಚೆನ್ನೈನಲ್ಲಿ ಇರುವ ಸ್ಟಾಲಿನ್​ ಅವರ ನಿವಾಸದಲ್ಲಿ ಈ ಭೇಟಿ ನಡೆದಿದೆ. ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈ ಭೇಟಿಯ ಉದ್ದೇಶ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಎಂ.ಕೆ. ಸ್ಟಾಲಿನ್​ ಅವರ ಜೊತೆ ಶಿವರಾಜ್​ಕುಮಾರ್​ ಮತ್ತು ಗೀತಾ ಅವರು ನಿಂತಿರುವ ಫೋಟೋ ಸಹ ಲಭ್ಯವಾಗಿದೆ.

ಡಾ. ರಾಜ್​ಕುಮಾರ್​ ಕುಟುಂಬಕ್ಕೂ ಚೆನ್ನೈಗೂ ಮೊದಲಿನಿಂದಲೂ ನಂಟು ಇದೆ. ಅಲ್ಲದೇ, ಬೇರೆ-ಬೇರೆ ರಾಜ್ಯಗಳ ರಾಜಕಾರಣಿಗಳು ಹಾಗೂ ಸೆಲೆಬ್ರಿಟಿಗಳು ಕೂಡ ಈ ಕುಟುಂಬದ ಜೊತೆ ಒಡನಾಟ ಹೊಂದಿದ್ದಾರೆ. ಪುನೀತ್​ ರಾಜ್​ಕುಮಾರ್​ ನಿಧನರಾದಾಗ ಎಂ.ಕೆ. ಸ್ಟಾಲಿನ್​ ಅವರು ಪತ್ರದ ಮುಖಾಂತರ ಅಣ್ಣಾವ್ರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ್ದರು. ಈಗ ಅವರನ್ನು ಶಿವಣ್ಣ ಮತ್ತು ಗೀತಾ ಭೇಟಿ ಆಗಿರುವುದು ಯಾಕೆ ಎಂಬ ಕೌತುಕ ಪ್ರಶ್ನೆ ಮೂಡಿದೆ.

ಸ್ಟಾಲಿನ್​ ಬರೆದ ಪತ್ರದಲ್ಲಿ ಏನಿತ್ತು?

ಪುನೀತ್ ರಾಜ್​ಕುಮಾರ್ ನಿಧನದ ಬಳಿಕ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಶಿವರಾಜ್​ಕುಮಾರ್​ಗೆ ಸಂತಾಪ ಪತ್ರ ಬರೆದಿದ್ದರು. ‘ಸಹೋದರ ಪುನೀತ್​ ಅವರ ದಿಢೀರ್ ಸಾವು ನನಗೆ ಭರಿಸಲಾಗದ ನೋವುಂಟು ಮಾಡಿದೆ. ಸಂತಾಪ ಸೂಚಿಸಲು ನನಗೆ ಮಾತೇ ಬರುತ್ತಿಲ್ಲ. ನಮ್ಮ ಎರಡೂ ಕುಟುಂಬಗಳು ಹಲವು ದಶಕಗಳಿಂದ ಸೌಹಾರ್ದಯುತ ಬಾಂಧವ್ಯವನ್ನು ಹೊಂದಿವೆ. ನನಗೆ ಪುನೀತ್ ಅಗಲಿಕೆ ವೈಯಕ್ತಿಕವಾಗಿ ನಷ್ಟವನ್ನುಂಟು ಮಾಡಿದೆ. ನನ್ನ ತಂದೆ ಕರುಣಾನಿಧಿ ಅವರ ಸಾವಿಗೆ ಸಂತಾಪ ಸೂಚಿಸಲು ಗೋಪಾಲಪುರಂಗೆ ಬಂದಿದ್ದ ಪುನೀತ್​ ಅವರ ಆ ಕ್ಷಣಗಳು ನನ್ನ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ದಯವಿಟ್ಟು ನನ್ನ ಸಂತಾಪವನ್ನು ನಿಮ್ಮ ಕುಟುಂಬಕ್ಕೆ ಮತ್ತು ಕರ್ನಾಟಕದ ಜನತೆಗೆ ತಿಳಿಸಿ. ಕರ್ನಾಟಕವು ಅಮೂಲ್ಯವಾದ ರತ್ನವನ್ನು, ಮಾನವತಾವಾದಿಯನ್ನು ಕಳೆದುಕೊಂಡಿದೆ. ಅಪ್ಪು ನಮ್ಮ ಮಧ್ಯೆ ಇಲ್ಲವಾದರೂ ಅವರ ನೆನೆಪು ಸದಾ ನಮ್ಮೊಂದಿಗೆ ಇರುತ್ತದೆ. ರಾಜ್​ಕುಮಾರ್​ ಹಿರಿಯ ಮಗನಾದ ನೀವು ಈ ಕಹಿ ಗಳಿಗೆಯಲ್ಲಿ ಆತ್ಮಸ್ಥರ್ಯ ತುಂಬಿಕೊಂಡು ಕುಟುಂಬಸ್ಥರೊಂದಿಗೆ ನಿಲ್ಲುತ್ತೀರಿ ಅಂತ ಭಾವಿಸುತ್ತೇನೆ’ ಎಂದು ಎಂ.ಕೆ. ಸ್ಟಾಲಿನ್ ಪತ್ರ ಬರೆದಿದ್ದರು.

ತಮಿಳುನಾಡು ವಿಧಾನಸಭೆಯಲ್ಲಿ ಪುನೀತ್​ಗೆ ಸಲ್ಲಿಕೆ ಆಗಿತ್ತು ಗೌರವ:

ನೆರೆಯ ರಾಜ್ಯಗಳ ಸೆಲೆಬ್ರಿಟಿಗಳು ಮತ್ತು ಬೇರೆ ಬೇರೆ ಕ್ಷೇತ್ರದ ಗಣ್ಯರ ಜೊತೆಗೆ ಪುನೀತ್​ ರಾಜ್​ಕುಮಾರ್​ ಉತ್ತಮ ಬಾಂಧವ್ಯ ಹೊಂದಿದ್ದರು. ಜ.5ರಂದು ತಮಿಳುನಾಡಿನ ವಿಧಾನಸಭೆ ಅಧಿವೇಷನ ಆರಂಭ ಆಗಿತ್ತು. ಅಧಿವೇಷನದ ಮೊದಲ ದಿನವೇ ಪುನೀತ್​ ಬಗ್ಗೆ ಮಾತನಾಡಲಾಗಿತ್ತು. ಪುನೀತ್​ ಅವರ ಸಾಧನೆಯನ್ನು ಸ್ಮರಿಸಲಾಗಿತ್ತು. ಅಪ್ಪು ಅಭಿಮಾನಿಗಳ ವಲಯದಲ್ಲಿ ಆ ವಿಡಿಯೋ ವೈರಲ್​ ಆಗಿತ್ತು.

ಇದನ್ನೂ ಓದಿ:

‘ಜೇಮ್ಸ್​’ ಚಿತ್ರಕ್ಕೆ ಹೇಗೆ ಡಬ್ಬಿಂಗ್​ ಮಾಡಿದ್ನೋ ಗೊತ್ತಿಲ್ಲ, ದೇವರೇ ನನಗೆ ಶಕ್ತಿ ಕೊಟ್ಟಿರಬೇಕು: ಶಿವಣ್ಣ

‘ಒಬ್ಬೊಬ್ಬರೇ ಇಂಡಸ್ಟ್ರಿಯನ್ನು ಬಿಟ್ಟು ಹೋಗುತ್ತಿರುವುದನ್ನು ನೋಡಿದ್ರೆ ಬೇಸರವಾಗುತ್ತದೆ’; ಶಿವರಾಜ್​ಕುಮಾರ್​

Published On - 12:01 pm, Sun, 13 February 22

ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ