‘ಗೀತಾ ಅವರು ತಾಯಿ ಸ್ಥಾನದಲ್ಲಿ ಇದ್ದಾರೆ’; ಮೈಸೂರಿನ ಶಕ್ತಿಧಾಮದ ಬಗ್ಗೆ ಶಿವರಾಜ್​ಕುಮಾರ್​ ಮಾತು

‘ಶಕ್ತಿಧಾಮದಿಂದಾಗಿ ಮೈಸೂರಿನ ಜೊತೆಗಿನ ನಮ್ಮ ಬಾಂಧವ್ಯ ಜಾಸ್ತಿ ಆಗುತ್ತಿದೆ. ಅದು ಎಂದಿಗೂ ಕಡಿಮೆ ಆಗುವುದಿಲ್ಲ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ.

TV9kannada Web Team

| Edited By: Madan Kumar

Jan 30, 2022 | 1:19 PM

ನಟ ಶಿವರಾಜ್​ಕುಮಾರ್​ (Shivarajkumar) ಅವರಿಗೆ ಮೈಸೂರಿನ ಜೊತೆ ನಂಟಿದೆ. ಆಗಾಗ ಅವರು ಮೈಸೂರಿಗೆ ಬಂದು ಹೋಗುತ್ತಾರೆ. ಮೈಸೂರಿನಲ್ಲಿರುವ ಶಕ್ತಿಧಾಮ ಆಶ್ರಮದ ಜವಾಬ್ದಾರಿಯನ್ನು ಗೀತಾ ಶಿವರಾಜ್​ಕುಮಾರ್​ (Geetha Shivarajkumar) ಅವರಿಗೆ ನೀಡಲಾಗಿದೆ. ಶಕ್ತಿಧಾಮದ (Shakthidhama) ಕೆಲಸಗಳ ಸಲುವಾಗಿ ಡಾ. ರಾಜ್​ಕುಮಾರ್​ ಕುಟುಂಬದವರು ಆಗಾಗ ಮೈಸೂರಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಈ ಕುರಿತು ಶಿವರಾಜ್​ಕುಮಾರ್​ ಅವರು ಮಾತನಾಡಿದ್ದಾರೆ. ‘ನಮಗೆ ಮೈಸೂರು ಹೊಸದಲ್ಲ. ಗೀತಾ ಅವರು ಶಕ್ತಿಧಾಮದಲ್ಲಿ ತಾಯಿಯ ಸ್ಥಾನದಲ್ಲಿ ಕೂತಿದ್ದಾರೆ. ಅವರಿಗೆ ಜವಾಬ್ದಾರಿ ಜಾಸ್ತಿ ಇದೆ. ಹಾಗಾಗಿ ಅವರು ಆಗಾಗ ಬೆಂಗಳೂರಿನಿಂದ ಮೈಸೂರಿಗೆ ಬರಬೇಕಾಗುತ್ತದೆ. ಮೀಟಿಂಗ್​ಗಳು ಇರುತ್ತವೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳಿಗೆ ಗೀತಾ ಅವರೇ ಪಾಠ ಮಾಡುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಮೈಸೂರಿನ ಜೊತೆಗಿನ ನಮ್ಮ ಬಾಂಧವ್ಯ ಜಾಸ್ತಿ ಆಗುತ್ತಿದೆ. ಅದು ಎಂದಿಗೂ ಕಡಿಮೆ ಆಗುವುದಿಲ್ಲ’ ಎಂದು ಶಿವರಾಜ್​ಕುಮಾರ್​ ಹೇಳಿದ್ದಾರೆ. ಜ.26ರಂದು ಶಕ್ತಿಧಾಮದ ಮಕ್ಕಳ ಜೊತೆಗೆ ಶಿವಣ್ಣ ಮತ್ತು ಗೀತಾ ಅವರು ಗಣರಾಜ್ಯೋತ್ಸವ ಆಚರಿಸಿದ್ದರು. ಧ್ವಜಾರೋಹಣದ ಬಳಿಕ ಆಶ್ರಮದ ಮಕ್ಕಳಿಗೆ ಸಿಹಿ ಹಂಚಿದ್ದರು. ಮಕ್ಕಳ ಜೊತೆ ಶಿವಣ್ಣ ಜಾಲಿ ರೈಡ್​ ತೆರಳಿದ್ದ ವಿಡಿಯೋ ಕೂಡ ವೈರಲ್ ಆಗಿತ್ತು.​

ಇದನ್ನೂ ಓದಿ:

ಅಭಿಮಾನಿಗಳಿಗೆ ಕೈ ತುತ್ತು ತಿನ್ನಿಸಿದ ಶಿವಣ್ಣ; ದೊಡ್ಮನೆ ಸರಳತೆಗೆ ಈ ವಿಡಿಯೋ ಸಾಕ್ಷಿ

ಭೂಗತ ಲೋಕದ ಕಥೆಯಲ್ಲಿ ಶಿವರಾಜ್​​ಕುಮಾರ್; ‘ಓಂ’ ರೀತಿಯಲ್ಲಿ ಹೊಸ ಸಿನಿಮಾ

Follow us on

Click on your DTH Provider to Add TV9 Kannada