‘ಅಶ್ವಿನಿ ಅಕ್ಕ ಇನ್ನೂ ಮೌನವಾಗಿಯೇ ಇದ್ದಾರೆ’; ಪುನೀತ್​ ಗನ್​ಮ್ಯಾನ್​ ತೆರೆದಿಟ್ಟ ವಿವರಗಳು

ಪುನೀತ್ ರಾಜ್​ಕುಮಾರ್​ ವ್ಯಕ್ತಿತ್ವನ್ನು ಹತ್ತಿರದಿಂದ ಕಂಡವರಲ್ಲಿ ಗನ್​ಮ್ಯಾನ್​ ಚಲಪತಿ ಕೂಡ ಒಬ್ಬರು. ಅಪ್ಪು​ ಜೊತೆ ಹೆಚ್ಚು ಸಮಯ ಕಳೆಯುವಂತಹ ಅವಕಾಶ ಅವರಿಗೆ ಸಿಗುತ್ತಿತ್ತು.

TV9kannada Web Team

| Edited By: Madan Kumar

Jan 30, 2022 | 10:06 AM

ನಟ ಪುನೀತ್​ ರಾಜ್​ಕುಮಾರ್ (Puneeth Rajkumar) ನಿಧನರಾಗಿ ಮೂರು ತಿಂಗಳು ಕಳೆದಿದೆ. ಅವರು ನಮ್ಮೊಂದಿಗೆ ಇಲ್ಲ ಎಂಬ ನೋವಿನ ನಡುವೆಯೇ ಜೀವನ ಮುಂದುವರಿಯಬೇಕಿದೆ. ಅಪ್ಪು ಆಪ್ತ ವಲಯದವರಿಗೆ ಈ ನೋವು ಎಂದಿಗೂ ಮಾಯ ಆಗುವಂಥದ್ದಲ್ಲ. ಪುನೀತ್​ಗೆ ಗನ್​ ಮ್ಯಾನ್​ ಆಗಿದ್ದ ಚಲಪತಿ ಅವರು ಕೂಡ ಅಪ್ಪು ಬಗ್ಗೆ ಅಪಾರ ಅಭಿಮಾನ ಮತ್ತು ಗೌರವವನ್ನು ಹೊಂದಿದ್ದರು. ಪುನೀತ್​ ಜೊತೆ ಹೆಚ್ಚು ಸಮಯ ಕಳೆಯುವಂತಹ ಅವಕಾಶ ಅವರಿಗೆ ಸಿಗುತ್ತಿತ್ತು. ಅಪ್ಪು ವ್ಯಕ್ತಿತ್ವನ್ನು ಹತ್ತಿರದಿಂದ ಕಂಡವರಲ್ಲಿ ಚಲಪತಿ ಕೂಡ ಒಬ್ಬರು. ಇಂದು ಪುನೀತ್​ ಇಲ್ಲದೇ ಅವರ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಅವರ ಪರಿಸ್ಥಿತಿ ಕಷ್ಟವಾಗಿದೆ. ಈವರೆಗೂ ಅಶ್ವಿನಿ ಅವರು ಮೌನವಾಗಿಯೇ ಇದ್ದಾರೆ. ಆ ಕುರಿತು ಗನ್​ಮ್ಯಾನ್​ ಮಾತನಾಡಿದ್ದಾರೆ. ಜ.29ರಂದು ಪುನೀತ್​ ಸಮಾಧಿ (Puneeth Rajkumar Samadhi) ಬಳಿ ಮೂರನೇ ತಿಂಗಳ ಕಾರ್ಯಗಳು ನಡೆದವು. ಪುನೀತ್​ ಸ್ಮರಣಾರ್ಥವಾಗಿ ಎಲ್ಲರಿಗೂ ಸಸಿಗಳನ್ನು ನೀಡುವ ಕಾರ್ಯ ನಡೆಯಿತು. ಪುನೀತ್​ ಅವರಿಗೆ ಪ್ರಕೃತಿ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರ ಆದರ್ಶಗಳನ್ನು ಮುಂದುವರಿಸುವ ಕೆಲಸವನ್ನು ಪುನೀತ್​ ಕುಟುಂಬ ಮಾಡುತ್ತಿದೆ.

ಇದನ್ನೂ ಓದಿ:

ಪುನೀತ್​ ಬರ್ತ್​ಡೇ ಹೇಗೆ ಆಚರಿಸಬೇಕು? ಅಪ್ಪು ಫ್ಯಾನ್ಸ್​ಗೆ ರಾಘಣ್ಣ ನೀಡಿದ ವಿಶೇಷ ಸಲಹೆ ಇಲ್ಲಿದೆ..

ಅಂದು ಪುನೀತ್​ ಅವರಿಂದ 30 ಸಾವಿರ ರೂ. ನೆರವು ಪಡೆದಿದ್ದ ಗೌರಿಶ್ರೀ ಇಂದು ನಿರ್ದೇಶಕಿ, ನಿರ್ಮಾಪಕಿ

Follow us on

Click on your DTH Provider to Add TV9 Kannada