AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್​ ಬರ್ತ್​ಡೇ ಹೇಗೆ ಆಚರಿಸಬೇಕು? ಅಪ್ಪು ಫ್ಯಾನ್ಸ್​ಗೆ ರಾಘಣ್ಣ ನೀಡಿದ ವಿಶೇಷ ಸಲಹೆ ಇಲ್ಲಿದೆ..

ಪುನೀತ್​ ಬರ್ತ್​ಡೇ ಹೇಗೆ ಆಚರಿಸಬೇಕು? ಅಪ್ಪು ಫ್ಯಾನ್ಸ್​ಗೆ ರಾಘಣ್ಣ ನೀಡಿದ ವಿಶೇಷ ಸಲಹೆ ಇಲ್ಲಿದೆ..

TV9 Web
| Updated By: ಮದನ್​ ಕುಮಾರ್​|

Updated on: Jan 29, 2022 | 1:09 PM

Share

Puneeth Rajkumar Birthday: ಪುನೀತ್​ ರಾಜ್​ಕುಮಾರ್​ ಜನ್ಮದಿನದ ಸಲುವಾಗಿ ಅಭಿಮಾನಿಗಳು ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ರಾಘವೇಂದ್ರ ರಾಜ್​ಕುಮಾರ್​ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ. ಆ ವಿಡಿಯೋ ಇಲ್ಲಿದೆ..

ಅಭಿಮಾನಿಗಳ ನೆಚ್ಚಿನ ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ನಿಧನರಾಗಿ ಇಂದಿಗೆ (ಜ.29) ಮೂರು ತಿಂಗಳು ಕಳೆದಿದೆ. ಈ ಸಂದರ್ಭದಲ್ಲಿ ಅವರ ಇಡೀ ಕುಟುಂಬದವರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಪುನೀತ್​ ಸಮಾಧಿಗೆ ನಮನ ಸಲ್ಲಿಸಲು ಇಂದಿಗೂ ಕೂಡ ಅಭಿಮಾನಿಗಳು ದೂರದೂರದ ಊರುಗಳಿಂದ ಬೆಂಗಳೂರಿಗೆ ಬರುತ್ತಲೇ ಇದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ಬರ್ತ್​ಡೇ (ಮಾ.17) ಸಮೀಪಿಸುತ್ತಿದ್ದೆ. ಅವರ ಜನ್ಮದಿನವನ್ನು ಹೇಗೆ ಆಚರಣೆ ಮಾಡಬೇಕು ಎಂಬ ದೊಡ್ಡ ಪ್ರಶ್ನೆ ಎಲ್ಲರ ಮನದಲ್ಲೂ ಇದೆ. ಅದಕ್ಕೆ ರಾಘವೇಂದ್ರ ರಾಜ್​ಕುಮಾರ್​ (Raghavendra Rajkumar) ಅವರು ಉತ್ತರ ನೀಡಿದ್ದಾರೆ. ಪ್ರತಿಯೊಬ್ಬ ಅಭಿಮಾನಿಯೂ ಒಂದೊಂದು ಗಿಡ ನೆಡುವ ಮೂಲಕ ಅಪ್ಪು ಹುಟ್ಟುಹಬ್ಬವನ್ನು (Puneeth Rajkumar Birthday) ಆಚರಣೆ ಮಾಡಬೇಕು. ಅದರಿಂದ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದು ರಾಘಣ್ಣ ಎಲ್ಲರಲ್ಲೂ ಮನವಿ ಮಾಡಿಕೊಂಡಿದ್ದಾರೆ. ಅದರ ಮೊದಲ ಹೆಜ್ಜೆ ಎಂಬಂತೆ ಇಂದು ಪುನೀತ್​ ರಾಜ್​ಕುಮಾರ್​ ಪತ್ನಿ ಅಶ್ವಿನಿ ಅವರು 500 ಸಸಿಗಳನ್ನು ವಿತರಣೆ ಮಾಡಿದ್ದಾರೆ. ‘ಅಪ್ಪು ಕಣ್ಣು ನೀಡಿದ್ದರಿಂದ ಈಗಾಗಲೇ ನೇತ್ರದಾನದ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿದೆ. ಅದೇ ರೀತಿ ಪರಿಸರ ಕಾಳಜಿ ಬಗ್ಗೆಯೂ ಸಂದೇಶ ಸಾರುವಂತಾಗಲಿ’ ಎಂದು  ರಾಘವೇಂದ್ರ ರಾಜ್​ಕುಮಾರ್​ ಹೇಳಿದ್ದಾರೆ.

ಇದನ್ನೂ ಓದಿ:

ಅಂದು ಪುನೀತ್​ ಅವರಿಂದ 30 ಸಾವಿರ ರೂ. ನೆರವು ಪಡೆದಿದ್ದ ಗೌರಿಶ್ರೀ ಇಂದು ನಿರ್ದೇಶಕಿ, ನಿರ್ಮಾಪಕಿ

ಕಡು ಬಡತನದಲ್ಲೂ ಅಪ್ಪುಗಾಗಿ ಅದ್ದೂರಿ ಕಾರ್ಯಕ್ರಮ; ಮಗನಿಗೆ ಪುನೀತ್​ ಎಂದು ನಾಮಕರಣ