ಮಾಳವಿಕಾ ಮನೆಗೆ ಶ್ರುತಿ, ಸುಧಾರಾಣಿ ಸರ್ಪ್ರೈಸ್ ಎಂಟ್ರಿ; ಹೇಗಿತ್ತು ನೋಡಿ ಜನ್ಮದಿನದ ಸೆಲೆಬ್ರೇಷನ್
ಈ ಭೇಟಿಯ ವಿಡಿಯೋವನ್ನು ಸುಧಾರಾಣಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಗೆಳತಿ ಮಾಳವಿಕಾಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಟಿಯರಾದ ಮಾಳವಿಕಾ ಅವಿನಾಶ್ (Malavika Avinash), ಶ್ರುತಿ ಹಾಗೂ ಸುಧಾರಾಣಿ ಅವರು ಹಲವು ವರ್ಷಗಳ ಅನುಭವ ಹೊಂದಿದ್ದಾರೆ. ಈ ಮೂವರ ನಡುವೆ ಉತ್ತಮ ಬಾಂಧವ್ಯ ಇದೆ. ದಶಕಗಳಿಂದಲೂ ಸ್ನೇಹಿತೆಯರಾಗಿರುವ ಈ ನಟಿಯರು ಆಗಾಗ ಭೇಟಿ ಆಗುತ್ತಾರೆ. ಪರಸ್ಪರ ಕುಶಲೋಪರಿ ವಿಚಾರಿಸುತ್ತ ಕಾಲ ಕಳೆಯುತ್ತಾರೆ. ಜ.28ರಂದು ಮಾಳವಿಕಾ ಅವಿನಾಶ್ ಜನ್ಮದಿನ. ಗೆಳತಿಯ ಹುಟ್ಟುಹಬ್ಬಕ್ಕೆ ಸರ್ಪ್ರೈಸ್ ನೀಡಲು ಶ್ರುತಿ ಮತ್ತು ಸುಧಾರಾಣಿ (Sudharani) ನಿರ್ಧರಿಸಿದ್ದರು. ಮಾಳವಿಕಾಗೆ ಒಂದು ಮಾತೂ ತಿಳಿಸದೇ, ಸೀಕ್ರೇಟ್ ಆಗಿ ಅವರ ಮನೆಗೆ ತೆರೆಳಿದ್ದಾರೆ. ಸಡನ್ ಆಗಿ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದಾರೆ. ಆಕರ್ಷಕವಾದ ಕೇಕ್ ತೆಗೆದುಕೊಂಡು ಹೋಗಿ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ. ಈ ಭೇಟಿಯ ವಿಡಿಯೋವನ್ನು ಸುಧಾರಾಣಿ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ಗೆಳತಿ ಮಾಳವಿಕಾಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಸಿನಿಮಾದ ಜೊತೆಗೆ ರಾಜಕೀಯದಲ್ಲೂ ಮಾಳವಿಕಾ ಅವಿನಾಶ್ ಮತ್ತು ಶ್ರುತಿ (Actress Shruthi) ಅವರು ಗುರುತಿಸಿಕೊಂಡಿದ್ದಾರೆ. ಎರಡೂ ಕ್ಷೇತ್ರದಲ್ಲಿ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ:
‘ಮತ್ತೆ ಮನ್ವಂತರ’ದ ಮುಖಾಂತರ ಕಿರುತೆರೆಗೆ ಮರಳಲಿದ್ದಾರೆ ಮಾಳವಿಕಾ ಅವಿನಾಶ್
ಕೆಜಿಎಫ್ ಕಥೆ ಹೇಳಿದ ಮಾಳವಿಕಾ ಅವಿನಾಶ್.. ಪಾರ್ಟ್ 2 ಸೆಟ್ ಅದೆಷ್ಟು ಅದ್ಧೂರಿ!