ಪುನೀತ್ ನಮನ; ಅಪ್ಪು ಸಮಾಧಿ ಎದುರು ದೀಪೋತ್ಸವ
ಇಂದು (ಜನವರಿ 29) ಪುನೀತ್ ಸಮಾಧಿ ಬಳಿ ಮೂರನೇ ತಿಂಗಳ ಕಾರ್ಯಗಳು ನಡೆದವು. ಪುನೀತ್ ನಿಧನ ಹಿನ್ನೆಲೆಯಲ್ಲಿ ಎಲ್ಲರಿಗೂ ಸಸಿಗಳನ್ನು ನೀಡುವ ಕಾರ್ಯ ನಡೆಯಿತು. ಪುನೀತ್ ಅವರಿಗೆ ಪ್ರಕೃತಿ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರ ಆದರ್ಶಗಳನ್ನು ಮುಂದುವರಿಸುವ ಕೆಲಸವನ್ನು ಪುನೀತ್ ಕುಟುಂಬ ಮಾಡುತ್ತಿದೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು 3 ತಿಂಗಳು ಕಳೆದಿದೆ. ಅವರು ಇಲ್ಲ ಎನ್ನುವ ನೋವು ಇಂದಿಗೂ ಕಡಿಮೆ ಆಗಿಲ್ಲ. ಬೇರೆಬೇರೆ ಕಡೆಗಳಿಂದ ಅಭಿಮಾನಿಗಳು ಬಂದು ಪುನೀತ್ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಇಂದು (ಜನವರಿ 29) ಪುನೀತ್ ಸಮಾಧಿ ಬಳಿ ಮೂರನೇ ತಿಂಗಳ ಕಾರ್ಯಗಳು ನಡೆದವು. ಪುನೀತ್ ನಿಧನ ಹಿನ್ನೆಲೆಯಲ್ಲಿ ಎಲ್ಲರಿಗೂ ಸಸಿಗಳನ್ನು ನೀಡುವ ಕಾರ್ಯ ನಡೆಯಿತು. ಪುನೀತ್ ಅವರಿಗೆ ಪ್ರಕೃತಿ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರ ಆದರ್ಶಗಳನ್ನು ಮುಂದುವರಿಸುವ ಕೆಲಸವನ್ನು ಪುನೀತ್ ಕುಟುಂಬ ಮಾಡುತ್ತಿದೆ. ಈ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದೇ ರೀತಿ ಇಂದು ಸಂಜೆ ದೀಪೋತ್ಸವ ಆಚರಿಸಲಾಗಿದೆ. ದೀಪದಲ್ಲಿ ಪುನೀತ ನಮನ ಸಲ್ಲಿಸಲಾಗಿದೆ. ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ದೀಪೋತ್ಸವ ಹಮ್ಮಿಕೊಂಡಿದೆ. ಪುನೀತ್ ಅವರು ಸಂಜೀವಿನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಯಾವುದೇ ಸಂಭಾವನೆ ಪಡೆಯದೇ ಪುನೀತ್ ರಾಯಭಾರಿ ಆಗಿದ್ದರು.
ಇದನ್ನೂ ಓದಿ: Puneeth Rajkumar: ಪುನೀತ್ ಅಗಲಿ 3 ತಿಂಗಳು; 500 ಸಸಿಗಳನ್ನು ಅಭಿಮಾನಿಗಳಿಗೆ ವಿತರಣೆ ಮಾಡಲಿರುವ ಕುಟುಂಬಸ್ಥರು
ಪುನೀತ್ ಬರ್ತ್ಡೇ ಹೇಗೆ ಆಚರಿಸಬೇಕು? ಅಪ್ಪು ಫ್ಯಾನ್ಸ್ಗೆ ರಾಘಣ್ಣ ನೀಡಿದ ವಿಶೇಷ ಸಲಹೆ ಇಲ್ಲಿದೆ..