ಅಪ್ಪು ಸಮಾಧಿ ಬಳಿಕ, ರಾಜ್ಕುಮಾರ್ ಸಮಾಧಿಗೆ ನಮಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಇಂದು (ಜನವರಿ 29) ಪುನೀತ್ ಸಮಾಧಿ ಬಳಿ ಮೂರನೇ ತಿಂಗಳ ಕಾರ್ಯಗಳು ನಡೆದವು. ಈ ವೇಳೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಪ್ಪು ಸಮಾಧಿಗೆ ನಮಿಸಿದರು. ಆ ಬಳಿಕ ರಾಜ್ಕುಮಾರ್ ಸಮಾಧಿಗೂ ಅವರು ನಮಸ್ಕರಿಸಿದರು.
ಪುನೀತ್ ರಾಜ್ಕುಮಾರ್ ಅವರನ್ನು ಕಳೆದುಕೊಂಡು 3 ತಿಂಗಳು ಕಳೆದಿದೆ. ಅವರು ಇಲ್ಲ ಎನ್ನುವ ನೋವು ಇಂದಿಗೂ ಕಡಿಮೆ ಆಗಿಲ್ಲ. ಬೇರೆಬೇರೆ ಕಡೆಗಳಿಂದ ಅಭಿಮಾನಿಗಳು ಬಂದು ಪುನೀತ್ ಸಮಾಧಿಯ ದರ್ಶನ ಪಡೆಯುತ್ತಿದ್ದಾರೆ. ಇಂದು (ಜನವರಿ 29) ಪುನೀತ್ ಸಮಾಧಿ ಬಳಿ ಮೂರನೇ ತಿಂಗಳ ಕಾರ್ಯಗಳು ನಡೆದವು. ಈ ವೇಳೆ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಅವರು ಅಪ್ಪು ಸಮಾಧಿಗೆ ನಮಿಸಿದರು. ಆ ಬಳಿಕ ರಾಜ್ಕುಮಾರ್ ಸಮಾಧಿಗೂ ಅವರು ನಮಸ್ಕರಿಸಿದರು. ಪುನೀತ್ ನಿಧನ ಹಿನ್ನೆಲೆಯಲ್ಲಿ ಎಲ್ಲರಿಗೂ ಸಸಿಗಳನ್ನು ನೀಡುವ ಕಾರ್ಯ ನಡೆಯಿತು. ಪುನೀತ್ ಅವರಿಗೆ ಪ್ರಕೃತಿ ಬಗ್ಗೆ ವಿಶೇಷ ಕಾಳಜಿ ಇತ್ತು. ಅವರ ಆದರ್ಶಗಳನ್ನು ಮುಂದುವರಿಸುವ ಕೆಲಸವನ್ನು ಪುನೀತ್ ಕುಟುಂಬ ಮಾಡುತ್ತಿದೆ. ಈ ಬಗ್ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಕುರಿತು ಅಚ್ಚರಿಯ ಮಾಹಿತಿ ಬಿಚ್ಚಿಟ್ಟ ಲೇಡಿ ಬಾಡಿ ಬಿಲ್ಡರ್ ಮಮತಾ
ಪುನೀತ್ ರಾಜ್ಕುಮಾರ್ ಹೇಳಿದ ವಿಶೇಷ ಸಾಲುಗಳನ್ನು ನೆನಪಿಸಿಕೊಂಡ ಯೂಟ್ಯೂಬ್ ಸಂಸ್ಥೆ
Latest Videos