ಕೆಆರ್ ಪುರಂನಲ್ಲಿ ಕೆಟ್ಟು ನಿಂತ ಕೆಎಸ್ಆರ್ಟಿಸಿ ಬಸ್; ಪರ್ಯಾಯ ವ್ಯವಸ್ಥೆ ಕಲ್ಪಿಸದ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ಆಕ್ರೋಶ
ಬೆಂಗಳೂರಿನಿಂದ ಊರಿಗೆ ಹೋಗೋಕೆ ಬಸ್ ಹತ್ತಿದ ಪ್ರಯಾಣಿಕರು ಪರದಾಡಿದ್ದಾರೆ. ಮಹಿಳೆಯರು, ಮಕ್ಕಳು, ಅಂಗವಿಕಲರು ನಡು ರಸ್ತೆಯಲ್ಲಿ ನಿಂತಿದ್ದರು.
ಬೆಂಗಳೂರು: ನಿನ್ನೆ (ಜ.28) ರಾತ್ರಿ 7.30ಕ್ಕೆ ಮೆಜೆಸ್ಟಿಕ್ನಿಂದ (Majestic) ಚಿಂತಾಮಣಿಗೆ ಪ್ರಯಾಣ ಬೆಳೆಸಿದ್ದ ಕೆಎಸ್ಆರ್ಟಿಸಿ ಬಸ್ (KSRTC Bus) ಕೆಆರ್ ಪುರಂ ಬರುತ್ತಿದ್ದಂತೆ ಕೆಟ್ಟು ನಿಂತಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಗಂಟೆ ಗಟ್ಟಲೆ ಬಸ್ಗಾಗಿ ಕಾದಿದ್ದರು. ಆದರೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಹೀಗಾಗಿ ಪ್ರಯಾಣಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ನಲ್ಲಿ 30ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಬೆಂಗಳೂರಿನಿಂದ ಊರಿಗೆ ಹೋಗೋಕೆ ಬಸ್ ಹತ್ತಿದ ಪ್ರಯಾಣಿಕರು ಪರದಾಡಿದ್ದಾರೆ. ಮಹಿಳೆಯರು, ಮಕ್ಕಳು, ಅಂಗವಿಕಲರು ನಡು ರಸ್ತೆಯಲ್ಲಿ ನಿಂತಿದ್ದರು. ಪ್ರತಿ ನಿತ್ಯ ಇದೇ ಸಮಸ್ಯೆ ಎದುರಾಗುತ್ತಿದ್ದರೂ ಸರಿಯಾದ ಬಸ್ ಕಲ್ಪಿಸುತ್ತಿಲ್ಲ ಅಂತ ಪ್ರಯಾಣಿಕರು ಡಿಪೋ ಮ್ಯಾನೇಜರ್ ವಿರುದ್ಧ ಆರೋಪ ಮಾಡಿದ್ದಾರೆ. ಗಂಟೆ ಗಟ್ಟಲೆ ನಿಂತರೂ ಬಸ್ ಸಿಗುತ್ತಿಲ್ಲ ಅಂತ ಕೆಲ ಪ್ರಯಾಣಿಕರು ಕಣ್ಣೀರು ಹಾಕಿದ್ದಾರೆ. ಚಿಂತಾಮಣಿ ಮಾರ್ಗದಲ್ಲಿ ನಿತ್ಯವೂ ಇದೇ ಸಮಸ್ಯೆ. ಆದರೆ ಯಾರು ಕ್ರಮ ತೆಗೆದುಕೊಳ್ಳುತ್ತಿಲ್ಲ ಅಂತ ಪ್ರಯಾಣಿಕರು ಆರೋಪಿಸಿದ್ದಾರೆ.
ಇದನ್ನೂ ಓದಿ
Puneeth Rajkumar: ಪುನೀತ್ ಅಗಲಿ 3 ತಿಂಗಳು; 500 ಸಸಿಗಳನ್ನು ಅಭಿಮಾನಿಗಳಿಗೆ ವಿತರಣೆ ಮಾಡಲಿರುವ ಕುಟುಂಬಸ್ಥರು