AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ankita Lokhande: ಮದುವೆ ಚಿತ್ರಗಳನ್ನು ಹಂಚಿಕೊಂಡಿದ್ದಕ್ಕೆ ಟ್ರೋಲ್ ಮಾಡಿದ ನೆಟ್ಟಿಗರು; ಖಡಕ್ ಪ್ರತಿಕ್ರಿಯೆ ನೀಡಿದ ನಟಿ

Vicky Jain: ನಟಿ ಅಂಕಿತಾ ಲೋಖಂಡೆಗೆ ದೊಡ್ಡ ಅಭಿಮಾನಿ ಬಳಗವಿದೆ. ಕಳೆದ ಡಿಸೆಂಬರ್​ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅವರು ಆ ಸಂದರ್ಭದ ವಿಶೇಷ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದನ್ನೇ ಇಟ್ಟುಕೊಂಡು ಕೆಲವರು ಟ್ರೋಲ್ ಮಾಡಿದ್ದಾರೆ.

Ankita Lokhande: ಮದುವೆ ಚಿತ್ರಗಳನ್ನು ಹಂಚಿಕೊಂಡಿದ್ದಕ್ಕೆ ಟ್ರೋಲ್ ಮಾಡಿದ ನೆಟ್ಟಿಗರು; ಖಡಕ್ ಪ್ರತಿಕ್ರಿಯೆ ನೀಡಿದ ನಟಿ
ಅಂಕಿತಾ ಲೋಖಂಡೆ, ವಿಕ್ಕಿ ಜೈನ್
TV9 Web
| Updated By: shivaprasad.hs|

Updated on:Jan 29, 2022 | 3:13 PM

Share

ನಟಿ ಅಂಕಿತಾ ಲೋಖಂಡೆಗೆ (Ankita Lokhande) ದೊಡ್ಡ ಅಭಿಮಾನಿ ಬಳಗವಿದೆ. ಸುಶಾಂತ್ ಸಿಂಗ್ ಜತೆ ತೆರೆಹಂಚಿಕೊಂಡು ಮಿಂಚಿದ್ದ ಅವರು, ನಿಜ ಜೀವನದಲ್ಲೂ ಕೆಲ ಕಾಲ ಜತೆಯಾಗಿ ಸುತ್ತಾಡಿದ್ದವರು. ನಂತರ ಈರ್ವರೂ ಬೇರೆಯಾಗಿದ್ದರು. ನಂತರ ವಿಕ್ಕಿ ಜೈನ್ (Vicky Jain) ಜತೆ ಅಂಕಿತಾ ಗುರುತಿಸಿಕೊಂಡರು. ಅಲ್ಲದೇ ಇತ್ತೀಚೆಗೆ ಅಂದರೆ ಕಳೆದ ಡಿಸೆಂಬರ್​ನಲ್ಲಿ ಈರ್ವರೂ ಹಸೆಮಣೆ ಏರಿದರು. ಅದ್ದೂರಿಯಾಗಿ ನಡೆದ ಸಮಾರಂಭದಲ್ಲಿ ಹಲವು ತಾರೆಯರು ಭಾಗವಹಿಸಿದ್ದರು. ಇದೀಗ ಸಂಭ್ರಮದಿಂದ ದಿನಗಳನ್ನು ಕಳೆಯುತ್ತಿರುವ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವುದಲ್ಲದೇ, ವಿವಾಹ ಸಂಭ್ರಮದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇದರಿಂದ ಕೆಲವು ನೆಟ್ಟಿಗರಿಂದ ಟೀಕೆಗೂ ಒಳಗಾಗಬೇಕಾಗಿ ಬಂದಿದೆ! ಅಂಕಿತಾ ಹಂಚಿಕೊಳ್ಳುತ್ತಿರುವ ಚಿತ್ರಗಳಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಕೆಲವು ನೆಟ್ಟಿಗರು ಇದು ಅತಿಯಾಯ್ತು ಎಂದಿದ್ಧಾರೆ. ಅವರ ಅಸಮಾಧಾನಕ್ಕೆ ಕಾರಣ ಅಂಕಿತಾ ಅತಿಯಾಗಿ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್ ಮಾಡುತ್ತಿದ್ದಾರಂತೆ. ‘ಸಾಕು ಎಷ್ಟು ಚಿತ್ರಗಳನ್ನು ಹಾಕುತ್ತೀರಿ’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

ನೆಟ್ಟಿಗರ ಇಂತಹ ಹೇಳಿಕೆಗಳಿಗೆ ತಲೆಕೆಡಿಸಿಕೊಳ್ಳದ ಅಂಕಿತಾ ಅವುಗಳಿಗೆ ಖಡಕ್ ಆಗಿಯೇ ಉತ್ತರಿಸಿದ್ದಾರೆ. ‘‘ಇದು ನನ್ನ ಮದುವೆ. ಈ ಚಿತ್ರಗಳನ್ನು ನಾನೇ ಹಂಚಿಕೊಳ್ಳದಿದ್ದರೆ ಇನ್ಯಾರು ಹಂಚಿಕೊಳ್ಳುತ್ತಾರೆ?’’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಅಂಕಿತಾ ಪ್ರತಿಕ್ರಿಯೆಗೆ ಅಭಿಮಾನಿಗಳು ಕೂಡ ಒಪ್ಪಿದ್ದಾರೆ.

ಪಾರ್ಟಿ ಮಾಡಲು ಮದುವೆಯಾದೆ ಎಂದಿದ್ದ ಅಂಕಿತಾ: ಇತ್ತೀಚೆಗೆ ಅಂಕಿತಾ ಏಕೆ ಮದುವೆಯಾದೆ ಎಂದು ಹೇಳಿ ಸುದ್ದಿಯಾಗಿದ್ದರು. ‘ಮದುವೆ ನಂತರ ನನ್ನ ಬದುಕಿನಲ್ಲಿ ಏನೂ ಬದಲಾಗಿಲ್ಲ. ನಾನು ಮತ್ತು ವಿಕ್ಕಿ ಜೈನ್​ ಹಲವು ವರ್ಷದಿಂದ ಫ್ರೆಂಡ್ಸ್​ ಆಗಿದ್ದೆವು. ತುಂಬ ಎಂಜಾಯ್​ ಮಾಡಿದ್ದೇವೆ. ನನ್ನ ಕಷ್ಟದ ಸಂದರ್ಭದಲ್ಲಿ ಬೆಂಬಲವಾಗಿ ನಿಂತವರೇ ವಿಕ್ಕಿ. ಅಂತಹ ಪಾರ್ಟ್ನರ್​ ಪಡೆಯಲು ನಾನು ಪುಣ್ಯ ಮಾಡಿದ್ದೆ. ಕೆಲಸ ಮಾಡಲು ಅವರು ಪ್ರೇರಣೆ ನೀಡುತ್ತಾರೆ’ ಎಂದು ಅಂಕಿತಾ ಲೋಖಂಡೆ ಹಿಂದೂಸ್ತಾನ್ ಟೈಮ್ಸ್​​ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.

‘ಪಾರ್ಟಿ ಮಾಡಬಹುದು ಅಂತ ನಾನು ಮದುವೆ ಆಗಿದ್ದೇನೆ. ನಾವು ಮೂರು ದಿನಕ್ಕೊಮ್ಮೆ ಪಾರ್ಟಿ ಮಾಡುತ್ತೇವೆ. ಒಟ್ಟಿನಲ್ಲಿ ನಾವು ದುಡ್ಡು ಖರ್ಚು ಮಾಡಬೇಕು. ಮದುವೆ ಬಳಿಕ ಏನೋ ಬದಲಾಗಿದೆ ಅಂತ ನನಗೆ ಅನಿಸುತ್ತಿಲ್ಲ. ಮದುವೆ ಆದ್ಮೇಲೆ ಯಾವ ರೀತಿ ಬದಲಾವಣೆ ಇರಬೇಕು ಅಂತ ಜನರ ಬಯಸುತ್ತಾರೋ ನನಗೆ ತಿಳಿದಿಲ್ಲ. ನಾನಂತೂ ಬದಲಾಗಿಲ್ಲ. ಕೆಲವರು ಮದುವೆಯನ್ನು ತುಂಬ ಗಂಭೀರವಾಗಿ ಪರಿಗಣಿಸುತ್ತಾರೆ. ಅದೊಂದು ಜವಾಬ್ದಾರಿ ಅಲ್ಲ. ಮದುವೆ ಎಂದರೆ ಖುಷಿ. ನಾವಿಬ್ಬರು ಖುಷಿಯಾಗಿದ್ದೇವೆ. ಅದೇ ಮುಖ್ಯವಾಗೋದು’ ಎಂದು ಅಂಕಿತಾ ಲೋಖಂಡೆ ನುಡಿದಿದ್ದರು.

ಅಂಕಿತಾ ನಟಿಸಿದ್ದ ಸೂಪರ್ ಹಿಟ್ ಧಾರವಾಹಿ ‘ಪವಿತ್ರಾ ರಿಶ್ತಾ’ ಈಗ ವೆಬ್​ಸೀರೀಸ್ ರೂಪದಲ್ಲಿ ಸಿದ್ಧವಾಗಿದ್ದು, ಶೀಘ್ರದಲ್ಲಿ ಜೀ5ನಲ್ಲಿ ತೆರೆಗೆ ಬರಲಿದೆ.

ಇದನ್ನೂ ಓದಿ:

‘ಪಾರ್ಟಿ ಮಾಡಿ ದುಡ್ಡು ಖರ್ಚು ಮಾಡಲು ಮದುವೆ ಆದೆ’; ಸುಶಾಂತ್​ ಮಾಜಿ ಪ್ರೇಯಸಿಯ ಅಚ್ಚರಿಯ ಹೇಳಿಕೆ

Kareena Kapoor: ಕರೀನಾ- ಸೈಫ್ ಮಧ್ಯೆ ಬಿಸಿಬಿಸಿ ಚರ್ಚೆ; ಕಾರಣವಾದರೂ ಏನು?

Published On - 9:41 am, Sat, 29 January 22