Updated on:Jan 29, 2022 | 6:38 PM
ನಿವೇದಿತಾ ಗೌಡ ಅವರು ಬಿಗ್ ಬಾಸ್ ಮೂಲಕ ಖ್ಯಾತಿ ಹೆಚ್ಚಿಸಿಕೊಂಡರು. ಚಂದನ್ ಶೆಟ್ಟಿ ಅವರನ್ನು ಮದುವೆ ಆದ ನಂತರವಂತೂ ನಿವೇದಿತಾ ತುಂಬಾನೇ ಖ್ಯಾತಿ ಗಳಿಸಿಕೊಂಡರು. ಅವರಿಗೆ ಇನ್ಸ್ಟಾಗ್ರಾಮ್ನಲ್ಲಿ 14 ಲಕ್ಷ ಹಿಂಬಾಲಕರಿದ್ದಾರೆ.
ಅವರು ಪೋಸ್ಟ್ ಮಾಡುವ ಪೋಟೋ ಹಾಗೂ ವಿಡಿಯೋಗಳನ್ನು ಸಾವಿರಾರು ಮಂದಿ ಲೈಕ್ ಮಾಡುತ್ತಾರೆ. ಸಾಕಷ್ಟು ರೀಲ್ಸ್ಗಳನ್ನು ಮಾಡಿ ಅವರು ಪೋಸ್ಟ್ ಮಾಡುತ್ತಾರೆ. ಪತಿ ಚಂದನ್ ಶೆಟ್ಟಿ ಜತೆ ಸಾಕಷ್ಟು ರೀಲ್ಸ್ ಮಾಡಿ ಅವರು ಹಾಕಿದ್ದಾರೆ. ಈ ಮೂಲಕವೂ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ.
ನಿವೇದಿತಾ ಏನೇ ಮಾಡಿದರೂ ಬೆನ್ನುತಟ್ಟುವ ಅಭಿಮಾನಿಗಳು ಅವರಿಗೆ ಇದ್ದಾರೆ. ಈಗ ಅವರು ಪತಿ ಚಂದನ್ ಶೆಟ್ಟಿಗೋಸ್ಕರ ವಿಶೇಷ ಖಾದ್ಯ ಮಾಡಿ ಬಡಿಸಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ನಿವೇದಿತಾ ಅವರು ಕ್ಯಾರೆಟ್ ಹಲ್ವಾ ಮಾಡಿದ್ದಾರೆ. ಪ್ರೀತಿಯಿಂದ ಮಾಡಿದ ಈ ಹಲ್ವಾಅನ್ನು ಚಂದನ್ ಶೆಟ್ಟಿ ಸವಿದಿದ್ದಾರೆ. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿವೆ.
ನಿವೇದಿತಾ ಚಂದನ್ ಶೆಟ್ಟಿ ಮಾತ್ರವಲ್ಲದೆ, ಅವರ ತಾಯಿಯ ಜತೆಯೂ ಕಾಣಿಸಿಕೊಳ್ಳುತ್ತಾರೆ. ಅಮ್ಮ-ಮಗಳ ಡ್ಯಾನ್ಸ್ ಕಂಡು ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದುಂಟು.
ಇತ್ತೀಚೆಗೆ ಅಮ್ಮ-ಮಗಳ ಜತೆಗೆ ಅಜ್ಜಿಯೂ ಸೇರಿಕೊಂಡಿದ್ದರು. ನಿವೇದಿತಾ ಗೌಡ ಕುಟುಂಬದ ಮೂರು ತಲೆಮಾರಿನವರು ಜತೆಯಾಗಿ ರೀಲ್ಸ್ ಮಾಡಿದ್ದರು. ಅದನ್ನು ಕಂಡು ಅವರ ಫ್ಯಾನ್ಸ್ ಕಣ್ಣರಳಿಸಿದ್ದರು.
ನಿವೇದಿತಾ ಗೌಡ-ಚಂದನ್ ಶೆಟ್ಟಿ
Published On - 6:36 pm, Sat, 29 January 22