ಕಳೆದ ವರ್ಷದಂತೆ ಈ ವರ್ಷವು ಕೇಂದ್ರ ಬಜೆಟ್ 2022 ಡಿಜಿಟಲ್ ಆಗಲಿದೆ. ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದಂತೆ 2022-23ರ ಬಜೆಟ್ನ್ನು ಕಾಗದರಹಿತ ರೂಪದಲ್ಲಿ ಮಂಡಿಸಲಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
1 / 5
ಐತಿಹಾಸಿಕ ನಡೆಯಲ್ಲಿ, 2021-22ರ ಕೇಂದ್ರ ಬಜೆಟ್ನ್ನು ಮೊದಲ ಬಾರಿಗೆ ಕಾಗದರಹಿತ ರೂಪದಲ್ಲಿ ವಿತರಿಸಲಾಯಿತು. ಈ ವರ್ಷವೂ ಆ ಸಂಪ್ರದಾಯ ಮುಂದುವರೆಯಲಿದೆ.
2 / 5
ಸಂಸತ್ತಿನ ಸದಸ್ಯರು (ಸಂಸದರು) ಮತ್ತು ಸಾರ್ವಜನಿಕರಿಂದ ಬಜೆಟ್ ದಾಖಲೆಗಳ ತೊಂದರೆ-ಮುಕ್ತ ಪ್ರವೇಶಕ್ಕಾಗಿ "ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್"ನ್ನು ಸಹ ಪ್ರಾರಂಭಿಸಲಾಯಿತು. ಸಂಸತ್ತಿನಲ್ಲಿ 1 ಫೆಬ್ರವರಿ 2022 ರಂದು ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಯೂನಿಯನ್ ಬಜೆಟ್ 2022 -23 ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಲಭ್ಯವಿರುತ್ತದೆ.
3 / 5
ಸರ್ಕಾರದ ಪ್ರಕಾರ 14 ಯೂನಿಯನ್ ಬಜೆಟ್ ದಾಖಲೆಗಳಿಗೆ ಸಂಪೂರ್ಣ ಪ್ರವೇಶವನ್ನು ಬಜೆಟ್ ಅಪ್ಲಿಕೇಶನ್ ಅನುಮತಿಸುತ್ತದೆ. ಕಳೆದ ವರ್ಷವೂ ಇದನ್ನು ಮಾಡಲಾಗಿತ್ತು.
4 / 5
ಕೇಂದ್ರ ಬಜೆಟ್ 2022ನ್ನು ಫೆಬ್ರವರಿ 1, ಮಂಗಳವಾರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಕಳೆದ ವರ್ಷದಿಂದ, ಹಣಕಾಸು ಸಚಿವರು ಡಿಜಿಟಲ್ ಇಂಡಿಯಾಗೆ ಅನುಕೂಲವಾಗುವಂತೆ ಡಿಜಿಟಲ್ ಬಜೆಟ್ ಮಂಡನೆಯನ್ನು ಸ್ವೀಕರಿಸಿದ್ದಾರೆ.