- Kannada News Photo gallery Budget 2022: Minister Nirmala Sitharaman ready for paperless budget proposal Here's the information
ಬಜೆಟ್ 2022: ಕಾಗದರಹಿತ ಬಜೆಟ್ ಮಂಡನೆಗೆ ನಿರ್ಮಲಾ ಸೀತಾರಾಮನ್ ಸಿದ್ಧ; ಇಲ್ಲಿದೆ ಮಾಹಿತಿ
ಕೇಂದ್ರ ಬಜೆಟ್ 2022 ನ್ನು ಫೆಬ್ರವರಿ 1, ಮಂಗಳವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ.
Updated on: Jan 29, 2022 | 1:50 PM

ಕಳೆದ ವರ್ಷದಂತೆ ಈ ವರ್ಷವು ಕೇಂದ್ರ ಬಜೆಟ್ 2022 ಡಿಜಿಟಲ್ ಆಗಲಿದೆ. ನಿರ್ಮಲಾ ಸೀತಾರಾಮನ್ ಅವರು ಕಳೆದ ವರ್ಷದಂತೆ 2022-23ರ ಬಜೆಟ್ನ್ನು ಕಾಗದರಹಿತ ರೂಪದಲ್ಲಿ ಮಂಡಿಸಲಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

Budget 2022 Union Finance Minister Nirmala Sitharaman to deliver speech on Feb 1 Here are the Important Updates

ಸಂಸತ್ತಿನ ಸದಸ್ಯರು (ಸಂಸದರು) ಮತ್ತು ಸಾರ್ವಜನಿಕರಿಂದ ಬಜೆಟ್ ದಾಖಲೆಗಳ ತೊಂದರೆ-ಮುಕ್ತ ಪ್ರವೇಶಕ್ಕಾಗಿ "ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್"ನ್ನು ಸಹ ಪ್ರಾರಂಭಿಸಲಾಯಿತು. ಸಂಸತ್ತಿನಲ್ಲಿ 1 ಫೆಬ್ರವರಿ 2022 ರಂದು ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಯೂನಿಯನ್ ಬಜೆಟ್ 2022 -23 ಮೊಬೈಲ್ ಅಪ್ಲಿಕೇಶನ್‌ನಲ್ಲಿಯೂ ಲಭ್ಯವಿರುತ್ತದೆ.

ಸರ್ಕಾರದ ಪ್ರಕಾರ 14 ಯೂನಿಯನ್ ಬಜೆಟ್ ದಾಖಲೆಗಳಿಗೆ ಸಂಪೂರ್ಣ ಪ್ರವೇಶವನ್ನು ಬಜೆಟ್ ಅಪ್ಲಿಕೇಶನ್ ಅನುಮತಿಸುತ್ತದೆ. ಕಳೆದ ವರ್ಷವೂ ಇದನ್ನು ಮಾಡಲಾಗಿತ್ತು.

ಕೇಂದ್ರ ಬಜೆಟ್ 2022ನ್ನು ಫೆಬ್ರವರಿ 1, ಮಂಗಳವಾರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಳಿಗ್ಗೆ 11 ಗಂಟೆಗೆ ಮಂಡಿಸಲಿದ್ದಾರೆ. ಕಳೆದ ವರ್ಷದಿಂದ, ಹಣಕಾಸು ಸಚಿವರು ಡಿಜಿಟಲ್ ಇಂಡಿಯಾಗೆ ಅನುಕೂಲವಾಗುವಂತೆ ಡಿಜಿಟಲ್ ಬಜೆಟ್ ಮಂಡನೆಯನ್ನು ಸ್ವೀಕರಿಸಿದ್ದಾರೆ.




