ಹಾಲಿನಲ್ಲಿರುವಷ್ಟೇ ಕ್ಯಾಲ್ಸಿಯಂ ಎಲೆಕೋಸಿನಲ್ಲಿದೆ; ಇದರ ಆರೋಗ್ಯ ಪ್ರಯೋಜನಗಳು ಇಲ್ಲಿದೆ ಗಮನಿಸಿ
ಎಲೆಕೋಸು ಹಾಲಿಗೆ ಸಮಾನವಾದ ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಆ ಮೂಲಕ ಇದು ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ. ಅವುಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.
Updated on: Jan 30, 2022 | 7:10 AM

ಎಲೆಕೋಸು ಹಾಲಿನಲ್ಲಿರುವಷ್ಟು ಕ್ಯಾಲ್ಸಿಯಂ ಅನ್ನು ಹೊಂದಿರುತ್ತದೆ. ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಅನೇಕ ಜನರು ಹಾಲು ಕುಡಿಯಲು ಇಷ್ಟಪಡುವುದಿಲ್ಲ. ಆದರೆ ಕೆಲವರು ಹಾಲಿಗೆ ಬದಲಿಯಾಗಿ ಎಲೆಕೋಸು ಸೇವಿಸಬಹುದು. ನಿಮಗೂ ಅಂತಹ ಸಮಸ್ಯೆ ಇದ್ದರೆ, ಎಲೆಕೋಸು ಉತ್ತಮ ಆಯ್ಕೆಯಾಗಿದೆ.

ಎಲೆಕೋಸು ಹೊಟ್ಟೆಯ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೊಟ್ಟೆ ನೋವನ್ನು ಹೋಗಲಾಡಿಸುತ್ತದೆ. ಇದರ ಸೇವನೆಯಿಂದ ಹೊಟ್ಟೆ ಹುಳುಗಳ ಸಮಸ್ಯೆಯೂ ವಾಸಿಯಾಗುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವ ಜನರು ತಮ್ಮ ಆಹಾರದಲ್ಲಿ ಎಲೆಕೋಸು ಸೇರಿಸಿಕೊಳ್ಳಬೇಕು. ಬೇಯಿಸಿದ ಎಲೆಕೋಸು ಕೇವಲ 33 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ನಿಮ್ಮ ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ ಮತ್ತು ದೇಹದಲ್ಲಿ ಕೊಬ್ಬು ಸಂಗ್ರಹಗೊಳ್ಳಲು ಅನುಮತಿಸುವುದಿಲ್ಲ. ನೀವು ಸೂಪ್, ತರಕಾರಿ, ಸಲಾಡ್ ರೂಪದಲ್ಲಿ ಎಲೆಕೋಸು ಸೇವಿಸಬಹುದು.

ಇದು ಕಬ್ಬಿಣ ಮತ್ತು ಪೊಟ್ಯಾಸಿಯಮ್ನಿಂದ ಸಮೃದ್ಧವಾಗಿದೆ. ಇಂತತಹ ಪರಿಸ್ಥಿತಿಯಲ್ಲಿ, ಇದು ದೇಹದಲ್ಲಿನ ರಕ್ತದ ಕೊರತೆಯನ್ನು ತೆಗೆದುಹಾಕುತ್ತದೆ. ಜೊತೆಗೆ ರಕ್ತವನ್ನು ಶುದ್ಧೀಕರಿಸುತ್ತದೆ. ಪೊಟ್ಯಾಶಿಯಂ ಬಿಪಿ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿಯಾಗಿದೆ.

ಸ್ನಾಯು ನೋವಿನಿಂದ ಬಳಲುತ್ತಿದ್ದರೆ ಎಲೆಕೋಸು ಸೇವಿಸಿ. ಇದು ಈ ಸಮಸ್ಯೆಯಲ್ಲಿ ನಿಮಗೆ ಪರಿಹಾರವನ್ನು ನೀಡುತ್ತದೆ. ಎಲೆಕೋಸು ಲ್ಯಾಕ್ಟಿಕ್ ಆಮ್ಲ ಎಂಬ ಅಂಶವನ್ನು ಹೊಂದಿದೆ. ಇದು ಸ್ವತಃ ನೈಸರ್ಗಿಕ ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ.



















