- Kannada News Photo gallery Cricket photos Super Smash T20 Top 5 Run Scorers Michael Bracewell to Finn Allen
IPL 2022 Auction: ಸೂಪರ್ ಸ್ಮ್ಯಾಶ್‌ನಲ್ಲಿ ಮಿಂಚಿ ಈಗ ಐಪಿಎಲ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿರುವ 5 ವಿದೇಶಿ ಆಟಗಾರರಿವರು
IPL 2022 Auction: ಜನವರಿ 29 ಶನಿವಾರ ನಡೆದ ಸೂಪರ್ ಸ್ಮ್ಯಾಶ್ ಫೈನಲ್‌ನಲ್ಲಿ ನಾರ್ದರ್ನ್ ಡಿಸ್ಟ್ರಿಕ್ಟ್ ಕ್ಯಾಂಟರ್‌ಬರಿ ತಂಡವನ್ನು 56 ರನ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು.
Updated on: Jan 29, 2022 | 7:40 PM

ನ್ಯೂಜಿಲೆಂಡ್‌ನ ಅಗ್ರ ಟಿ20 ಟೂರ್ನಿಯಾದ ಸೂಪರ್ ಸ್ಮ್ಯಾಶ್‌ನ ಚಾಂಪಿಯನ್ ಯಾರು ಎಂದು ನಿರ್ಧರಿಸಲಾಗಿದೆ. ಜನವರಿ 29 ಶನಿವಾರ ನಡೆದ ಫೈನಲ್‌ನಲ್ಲಿ ನಾರ್ದರ್ನ್ ಡಿಸ್ಟ್ರಿಕ್ಟ್ ಕ್ಯಾಂಟರ್‌ಬರಿ ತಂಡವನ್ನು 56 ರನ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪಂದ್ಯಾವಳಿಯ ಅಂತ್ಯದ ನಂತರ, ಈಗ ಈ ಬಾರಿಯ ಅತ್ಯಂತ ಯಶಸ್ವಿ ಬ್ಯಾಟರ್ಗಳು ಯಾರು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ. ವಿಶೇಷವೆಂದರೆ ಮುಂದಿನ ತಿಂಗಳು ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಇವರಲ್ಲಿ ಕೆಲ ಆಟಗಾರರು ತಂಡಗಳ ಗಮನ ಸೆಳೆಯಲಿದ್ದಾರೆ.

ವೆಲ್ಲಿಂಗ್ಟನ್ ಫೈರ್ ಬರ್ಡ್ಸ್ ತಂಡದ ನಾಯಕ ಮೈಕಲ್ ಬ್ರೇಸ್ ವೆಲ್ ಈ ಬಾರಿಯ ಸೂಪರ್ ಸ್ಮ್ಯಾಶ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರ ತಂಡವು ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ, ಆದರೆ ಈ ಎಡಗೈ ಆರಂಭಿಕ ಆಟಗಾರ ಕೇವಲ 10 ಇನ್ನಿಂಗ್ಸ್‌ಗಳಲ್ಲಿ ಗರಿಷ್ಠ 478 ರನ್ ಗಳಿಸಿದರು. ಅವರ ಸ್ಟ್ರೈಕ್ ರೇಟ್ 149 ಮತ್ತು ಸರಾಸರಿ 79. ವಿಶೇಷವೆಂದರೆ ನ್ಯೂಜಿಲೆಂಡ್‌ನಲ್ಲಿ ಅತಿದೊಡ್ಡ ಇನ್ನಿಂಗ್ಸ್ (141 ರನ್, 65 ಎಸೆತ) ದಾಖಲೆಯನ್ನೂ ಮಾಡಿದ್ದಾರೆ. ಬ್ರೇಸ್‌ವೆಲ್ ಐಪಿಎಲ್ ಹರಾಜಿಗೆ ತನ್ನ ಹೆಸರನ್ನು ನೋಂದಾಯಿಸಿಕೊಂಡಿದ್ದು ಈಗ ಫೆಬ್ರವರಿ 12 ಮತ್ತು 13 ರಂದು ಅವರ ಅದೃಷ್ಟ ನಿರ್ಧಾರವಾಗಲಿದೆ.

ಅದೇ ಸಮಯದಲ್ಲಿ, ಡ್ಯಾನ್ ಕ್ಲೀವರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಬಲಗೈ ಬ್ಯಾಟ್ಸ್‌ಮನ್ ಸೆಂಟ್ರಲ್ ಡಿಸ್ಟ್ರಿಕ್ಟ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಕ್ಲೀವರ್ 9 ಇನ್ನಿಂಗ್ಸ್‌ಗಳಲ್ಲಿ 369 ರನ್ ಗಳಿಸಿದರು, ಇದರಲ್ಲಿ ಒಂದು ಶತಕ ಮತ್ತು 2 ಅರ್ಧಶತಕಗಳು ಸೇರಿವೆ.

29 ವರ್ಷ ವಯಸ್ಸಿನ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಚಾಡ್ ಬೋವ್ಸ್ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕ್ಯಾಂಟರ್ಬರಿ ಪರ ಆಡುತ್ತಿರುವ ಬೋವ್ಸ್ 12 ಇನ್ನಿಂಗ್ಸ್‌ಗಳಲ್ಲಿ 4 ಅರ್ಧ ಶತಕ ಸೇರಿದಂತೆ 333 ರನ್ ಗಳಿಸಿದರು. ಅವರು 142 ಸ್ಟ್ರೈಕ್ ರೇಟ್‌ನಲ್ಲಿ ಈ ರನ್ ಪೇರಿಸಿದ್ದಾರೆ.

ಅದೇ ಸಮಯದಲ್ಲಿ, ನ್ಯೂಜಿಲೆಂಡ್‌ನ ಕ್ಯಾಮರೂನ್ ಫ್ಲೆಚರ್ ಕೂಡ ಈ ಸಾಲಿನಲ್ಲಿದ್ದಾರೆ. ಫ್ಲೆಚರ್ ಕೂಡ ಕ್ಯಾಂಟರ್ಬರಿ ಪರ ಆಡುತ್ತಿದ್ದು ತಂಡವನ್ನು ಫೈನಲ್ಗೆ ಕರೆದೊಯ್ದರು. ಅವರು 11 ಇನ್ನಿಂಗ್ಸ್‌ಗಳಲ್ಲಿ 160 ಸ್ಟ್ರೈಕ್ ರೇಟ್‌ನಲ್ಲಿ 305 ರನ್ ಗಳಿಸಿದ್ದಾರೆ.

ನ್ಯೂಜಿಲೆಂಡ್ ಕ್ರಿಕೆಟ್‌ನ ಭವಿಷ್ಯ ಎಂದು ಪರಿಗಣಿಸಲ್ಪಟ್ಟ 22 ವರ್ಷದ ಯುವ ಆರಂಭಿಕ ಆಟಗಾರ ಫಿಲ್ ಅಲೆನ್ ಈ ಬಾರಿ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ 11 ಇನ್ನಿಂಗ್ಸ್‌ಗಳಲ್ಲಿ ಅವರು 200 ಸ್ಟ್ರೈಕ್ ರೇಟ್‌ನಲ್ಲಿ 280 ರನ್ ಗಳಿಸಿದರು. ಅಲೆನ್ ರಾಯಲ್ ತಂಡದ ಭಾಗವಾಗಿದ್ದರು. ಕಳೆದ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಈ ಬಾರಿಯೂ ಐಪಿಎಲ್ ಫ್ರಾಂಚೈಸಿಗಳ ಕಣ್ಣು ಅವರ ಮೇಲಿದೆ.









