Updated on: Jan 29, 2022 | 11:50 AM
ನಟ ಪುನೀತ್ ರಾಜ್ಕುಮಾರ್ ನಿಧನರಾಗಿ 3 ತಿಂಗಳು ಸಂದಿವೆ. ಇಂದು ಕುಟುಂಬಸ್ಥರು ಅಪ್ಪು ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ಪುನೀತ್ ಪತ್ನಿ ಅಶ್ವಿನಿ ಹಾಗೂ ಅವರ ಪುತ್ರಿ ಮತ್ತು ಸಹೋದರ ರಾಘವೇಂದ್ರ ರಾಜ್ಕುಮಾರ್ ಸೇರಿದಂತೆ ಹಲವರು ಪೂಜೆಯಲ್ಲಿ ಭಾಗಿಯಾಗಿದ್ದರು.
ಕುಟುಂಬಸ್ಥರು ಅಭಿಮಾನಿಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸಿದರು.
ನಂತರದಲ್ಲಿ ಕುಟುಂಬಸ್ಥರು ಅಭಿಮಾನಿಗಳಿಗೆ 500 ಸಸಿಗಳನ್ನು ವಿತರಿಸಿದರು.
ಪುನೀತ್ಗೆ ಪರಿಸರದ ಬಗ್ಗೆ ಕಾಳಜಿ ಇತ್ತು ಹಾಗೆಯೇ ಗಿಡಗಳಲ್ಲಿ ಆತ್ಮ ವಾಸಿಸುತ್ತದೆ ಎಂಬ ಮಾತೂ ಇದೆ. ಇದರಂತೆ ಸಸಿ ವಿತರಣೆ ಮಾಡಲಾಗಿದೆ ಎಂದು ರಾಘಣ್ಣ ನುಡಿದಿದ್ದಾರೆ.
ಅಭಿಮಾನಿಗಳಿಗೆ ಸಸಿಯನ್ನಿ ವಿತರಿಸುತ್ತಿರುವ ಅಶ್ವಿನಿ ಪುನೀತ್ ರಾಜ್ಕುಮಾರ್