Virat Kohli: ಟೀಮ್ ಇಂಡಿಯಾದಲ್ಲಿ ಅಸಮಾಧಾನ: ನೆಚ್ಚಿನ ಕೋಚ್ ಅನ್ನು ಅವಮಾನಿಸಿದ್ದಕ್ಕೆ ಸಿಡಿದೆದ್ರಾ ಕೊಹ್ಲಿ?

Indian Cricket Team: ಟೀಮ್ ಇಂಡಿಯಾದಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ದ ಪರಿಸ್ಥಿತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ, ಮಾಜಿ ಕೋಚ್ ರವಿ ಶಾಸ್ತ್ರಿಯನ್ನ ಅವಮಾನಿಸಿದ್ದೇ ಕಾರಣ ಎಂಬ ಅನುಮಾನ ದಟ್ಟವಾಗಿದೆ.

TV9kannada Web Team

| Edited By: Vinay Bhat

Jan 29, 2022 | 11:22 AM

ಟೀಮ್ ಇಂಡಿಯಾದಲ್ಲೀಗ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೆ ಮತ್ತೆ ಸಾಭೀತಾಗುತ್ತಿದೆ. ವಿರಾಟ್ ಕೊಹ್ಲಿ (Virat Kohli) ಟೆಸ್ಟ್ ತಂಡದ ನಾಯಕತ್ವ ತ್ಯಜಿಸಿದ್ದೇ ತಡ, ಅಸಮಾಧಾನದ ಹೊಗೆ ಬುಗಿಲೆದ್ದಿದೆ. ಆದರೀಗ ಟೀಮ್ ಇಂಡಿಯಾದಲ್ಲಿ ನಿರ್ಮಾಣವಾಗಿರುವ ಪ್ರಕ್ಷುಬ್ದ ಪರಿಸ್ಥಿತಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ (Sourav Ganguly), ಮಾಜಿ ಕೋಚ್ ರವಿ ಶಾಸ್ತ್ರಿಯನ್ನ ಅವಮಾನಿಸಿದ್ದೇ ಕಾರಣ ಎಂಬ ಅನುಮಾನ ದಟ್ಟವಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಪಾಕಿಸ್ತಾನದ ಮಾಜಿ ನಾಯಕ ರಶೀದ್ ಲತೀಫ್ ಕೆಲವೊಂದು ಶಾಕಿಂಗ್ ಹೇಳಿಕೆಗಳನ್ನು ಕೊಟ್ಟಿದ್ದಾರೆ. ರಶೀದ್ ಲತೀಫ್ ಪ್ರಕಾರ, 1990 ರ ದಶಕದ ಆರಂಭದಲ್ಲಿ ಪಾಕಿಸ್ತಾನಕ್ಕೆ ಏನಾಯಿತು, ಅದು ಇಂದು ಭಾರತೀಯ ಕ್ರಿಕೆಟ್‌ಗೆ (Indian Cricket) ಆಗುತ್ತಿದೆ. ಮೈದಾನದ ಹೊರಗೆ ಇಂತಹ ಸಂಗತಿಗಳು ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತವೆ ಎಂದು ರಶೀದ್ ಲತೀಫ್ ಹೇಳಿದ್ದಾರೆ. “2019 ರ ವಿಶ್ವಕಪ್ ನಂತರ ಶಾಸ್ತ್ರಿ ಅವರ ಒಪ್ಪಂದವು ಮುಕ್ತಾಯಗೊಂಡಿತ್ತು. ಆದರೆ ಆ ವೇಳೆ ಅವರಿಗೆ ಕೋಚ್‌ ಹುದ್ದೆಯಲ್ಲಿ ಎರಡು ವರ್ಷಗಳ ಮಟ್ಟಿಗೆ ವಿಸ್ತರಣೆ ಕೊಡಲಾಯಿತು. ಗಂಗೂಲಿ ಖುದ್ದು ಶಾಸ್ತ್ರಿಗೆ: ಬಾಸ್ ಇದು ಹೋಗಲು ಸಮಯ,” ಎಂದು ಹೇಳಿರುವುದಾಗಿ ಲತೀಫ್ ನೇರವಾಗಿ ಆಪಾದನೆ ಮಾಡಿದ್ದಾರೆ. ಈ ಮೂಲಕ ಕೊಹ್ಲಿಯ ನೆಚ್ಚಿನ ಕೋಚ್ ಶಾಸ್ತ್ರಿ ಅವರನ್ನು ಅವಮಾನಿಸಿದ್ದಕ್ಕೆ ಕೊಹ್ಲಿ ನಾಯಕತ್ವದಿಂದ ಹಿಂದೆ ಸರಿದರು ಎಂಬ ಮಾತು ಕೇಳಿಬರುತ್ತಿದೆ.

U19 World Cup 2022: ಇಂದು ಭಾರತಕ್ಕೆ ಬಾಂಗ್ಲಾದೇಶ ಎದುರಾಳಿ: ಯಾವುದರಲ್ಲಿ ನೇರ ಪ್ರಸಾರ, ಎಷ್ಟು ಗಂಟೆಗೆ ಪಂದ್ಯ?

India vs West Indies: ನಿಮ್ಮದೇ ವಾಹನದಲ್ಲಿ ಬನ್ನಿ: ಟೀಮ್ ಇಂಡಿಯಾ ಆಟಗಾರರಿಗೆ ದೊಡ್ಡ ಶಾಕ್ ನೀಡಿದ ಬಿಸಿಸಿಐ

Follow us on

Click on your DTH Provider to Add TV9 Kannada