India vs West Indies: ನಿಮ್ಮದೇ ವಾಹನದಲ್ಲಿ ಬನ್ನಿ: ಟೀಮ್ ಇಂಡಿಯಾ ಆಟಗಾರರಿಗೆ ದೊಡ್ಡ ಶಾಕ್ ನೀಡಿದ ಬಿಸಿಸಿಐ

IND vs WI ODI Series: ಫೆಬ್ರವರಿ 6 ರಿಂದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಣ ಏಕದಿನ ಸರಣಿ ಆರಂಭವಾಗಲಿದೆ. ಇದಕ್ಕಾಗಿ ರೋಹಿತ್ ಶರ್ಮಾ ಪಡೆ ಫೆ. 1 ರಂದೇ ಅಹ್ಮದಾಬಾದ್​ಗೆ ತಲುಪಬೇಕಿದೆ. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಟೀಮ್ ಇಂಡಿಯಾ ಆಟಗಾರರಿಗೆ ಶಾಕ್ ನೀಡಿದೆ.

India vs West Indies: ನಿಮ್ಮದೇ ವಾಹನದಲ್ಲಿ ಬನ್ನಿ: ಟೀಮ್ ಇಂಡಿಯಾ ಆಟಗಾರರಿಗೆ ದೊಡ್ಡ ಶಾಕ್ ನೀಡಿದ ಬಿಸಿಸಿಐ
No charter flights for Indian players
Follow us
TV9 Web
| Updated By: Vinay Bhat

Updated on: Jan 29, 2022 | 9:36 AM

ದಕ್ಷಿಣ ಆಫ್ರಿಕಾ ಪ್ರವಾಸ ಮುಗಿಸಿರುವ ಭಾರತ ಕ್ರಿಕೆಟ್ ತಂಡದ ಆಟಗಾರರು ಇದೀಗ ತವರಿಗೆ ಮರಳಿದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಫೆಬ್ರವರಿ 6 ರಿಂದ ವೆಸ್ಟ್ ಇಂಡೀಸ್ (India vs West Indies) ವಿರುದ್ಧದ ಸರಣಿ ಆರಂಭವಾಗಲಿದೆ. ಅಹ್ಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದಕ್ಕಾಗಿ ಟೀಮ್ ಇಂಡಿಯಾ (Team India)ಆಟಗಾರರು ಫೆ. 1 ರಂದೇ ಅಹ್ಮದಾಬಾದ್​ಗೆ ತಲುಪಬೇಕಿದೆ. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತೀಯ ಆಟಗಾರರಿಗೆ ಶಾಕ್ ನೀಡಿದೆ. ಇದೇ ಮೊದಲ ಬಾರಿಗೆ ಕೋವಿಡ್ ಸಂದರ್ಭದಲ್ಲಿ ರೋಹಿತ್ ಪಡೆ ಚಾರ್ಟರ್ ಫ್ಲೈಟ್ ಇಲ್ಲದೆ ಪ್ರಯಾಣಿಸಬೇಕಾದ ಸ್ಥಿತಿ ಎದುರಾಗಿದೆ. ಹೌದು, ಏಕದಿನ ಸರಣಿಗಾಗಿ ತಮ್ಮ ಮನೆಯಿಂದ ಅಹ್ಮದಾಬಾದ್​ಗೆ ವೈಯಕ್ತಿಕವಾಗಿ ನೀವೇ ಬರಬೇಕು ಎಂದು ಬಿಸಿಸಿಐ (BCCI) ಟೀಮ್ ಇಂಡಿಯಾ ಆಟಗಾರರಿಗೆ ಸೂಚಿಸಿದೆ. ಭಾರತೀಯ ಆಟಗಾರರು ಫೆಬ್ರವರಿ 1 ರಂದು ಅಹ್ಮದಾಬಾದ್​ಗೆ ಬಂದು ಎರಡು ದಿನಗಳ ಕಾಲ ಕ್ವಾರಂಟೈನ್​ನಲ್ಲಿದ್ದು ಬಳಿಕ ಅಭ್ಯಾಸ ಆರಂಭಿಸುವ ಸಾಧ್ಯತೆ ಇದೆ. ಇತ್ತ ವೆಸ್ಟ್ ಇಂಡೀಸ್ ತಂಡ ಫೆ. 2 ರಂದು ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಮುಗಿಸಿ ಭಾರತd ಫ್ಲೈಟ್ ಏರಲಿದೆ.

ಇಂಡೋ- ವಿಂಡೀಸ್ ಏಕದಿನ ಸರಣಿ ಮುಗಿದ ಬಳಿಕ ಕೋಲ್ಕತ್ತಾದಲ್ಲಿ ನಡೆಯಲಿರುವ ಟಿ20 ಸರಣಿಗೆ ಬಿಸಿಸಿಐ ಚಾರ್ಟರ್ ಫ್ಲೈಟ್ ಆಯೋಜಿಸುವ ಸಾಧ್ಯತೆ ಇದೆ. ಆದರೆ, ಏಕದಿನ ಸರಣಿಗೆ ಆಟಗಾರರು ತಾವೇ ವೈಯಕ್ತಿಕವಾಗಿ ಬರಬೇಕು ಎಂದು ಹೇಳಿದೆ. ಇನ್​ಸೈಡ್ ಸ್ಫೋರ್ಟ್ಸ್​ ಮಾಡಿರುವ ವರದಿಯ ಪ್ರಕಾರ, ಬಿಸಿಸಿಐಯ ಮೂಲಗಳು ಈ ಬಗ್ಗೆ ಅಧಿಕೃತ ಮಾಹಿತಿ ತಿಳಿಸಿವೆಯಂತೆ. “ನಾವು ಇಂಗ್ಲೆಂಡ್ ಪ್ರವಾಸದ ರೀತಿಯಲ್ಲಿ ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಸರಣಿಗೂ ಭಾರತೀಯ ಆಟಗಾರರಿಗೆ ಚಾರ್ಟರ್ ಫ್ಲೈಟ್ ಆಯೋಜಿಸಲು ಸಾಕಷ್ಟು ಪ್ರಯತ್ನ ಪಟ್ಟೆವು ಆದರೆ, ಅದು ಸಾಧ್ಯವಾಗಲಿಲ್ಲ. ಈಗಲೂ ಪ್ರಯತ್ನ ಪಡುತ್ತಿದ್ದೇವೆ. ಇದರಿಂದ ಇತರೆ ಪ್ರಯಾಣಿಕರೊಂದಿಗಿನ ಸಂವಹನವನ್ನು ತಪ್ಪಿಸಬಹುದಿತ್ತು. ಆದರೆ, ಈಗ ಸಮಯ ಕಳೆದು ಹೋಗಿದೆ,” ಎಂದು ಹೇಳಿದ್ದಾರಂತೆ.

ಭಾರತದ ಎಲ್ಲ ಆಟಗಾರರು ಸಪೋರ್ಟ್ ಸ್ಟಾರ್ಫ್, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಎಲ್ಲರೂ ಫೆಬ್ರವರಿ 1 ರಂದು ಅಹ್ಮದಾಬಾದ್​ಗೆ ತಲುಪಲಿದ್ದಾರೆ. ಅಲ್ಲಿನ ಹೊಟೇಲ್​ನಲ್ಲಿ ಮೂರು ದಿನಗಳ ಕಾಲ ಕ್ವಾರಂಟೈನ್​ ಆಗಲಿದ್ದಾರೆ. ಬಳಿಕ ಕೋವಿಡ್ ಟೆಸ್ಟ್ ನಡೆಸಿ ಅಭ್ಯಾಸ ಆರಂಭಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ಇನ್​ಸೈಡ್ ಸ್ಪೋರ್ಟ್ಸ್​​ ಹೇಳಿದೆ.

ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವೆ ಮೊದಲಿಗೆ ಏಕದಿನ ಸರಣಿ ಆಯೋಜನೆಯಾಗಲಿದೆ. ಈ ಸರಣಿಯ ಮೂರು ಪಂದ್ಯಗಳನ್ನು ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಮೊಟೇರಾದ ಸರ್ದಾರ್‌ ಪಟೇಲ್‌ ಕ್ರೀಡಾಂಗಣ ನರೇಂದ್ರ ಮೋದಿ ಸ್ಟೇಡಿಯಂ ಆಗಿ ಹೊಸ ವಿನ್ಯಾಸ ಪಡೆದ ಬಳಿಕ ಇದೇ ಮೊದಲ ಬಾರಿ ಏಕದಿನ ಕ್ರಿಕೆಟ್‌ ಸರಣಿಗೆ ಆತಿಥ್ಯ ವಹಿಸುತ್ತಿರುವುದು ವಿಶೇಷವಾಗಿದೆ. ಇದಾದ ಬಳಿಕ ಟಿ20 ಸರಣಿಯ 3 ಪಂದ್ಯಗಳು ಕೊಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಆಯೋಜನೆಯಾಗಲಿದೆ.

ಈಗಾಗಲೇ ವೆಸ್ಟ್​ ಇಂಡೀಸ್ ವಿರುದ್ಧದ ಏಕದಿನ ಮತ್ತು ಟಿ20 ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೂಡ ಬಲಿಷ್ಠ ಭಾರತ ತಂಡವನ್ನು ಪ್ರಕಟ ಮಾಡಿದೆ. ಕೆಲವು ಅಚ್ಚರಿಯ ಆಯ್ಕೆಗಳು ನಡೆದರೆ, ಪ್ರಮುಖ ಬೌಲರ್​ಗಳಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನೂ ಕೆಲ ಆಟಗಾರರು ಇಂಜುರಿ ಸಮಸ್ಯೆಯಿಂದ ಸಂಪೂರ್ಣ ಹೊರಬಂದಿಲ್ಲ. ನಾಯಕನಾಗಿ ರೋಹಿತ್ ಶರ್ಮಾ ಕಮ್​ಬ್ಯಾಕ್ ಮಾಡಿದ್ದಾರೆ. ಜೊತೆಗೆ ರಿಸ್ಟ್ ಸ್ಪಿನ್ನರ್ ಕುಲ್ದೀಪ್ ಯಾದವ್ ಕೂಡ ಏಕದಿನ ಮತ್ತು ಟಿ20 ತಂಡಕ್ಕೆ ಪುನರಾಗಮನ ಕಂಡಿದ್ದರೆ, ಯುವ ಬೌಲರ್‌ಗಳಾದ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯಿ ಹಾಗೂ ವೇಗಿ ಆವೇಶ್ ಖಾನ್ ತಂಡದಲ್ಲಿ ಸ್ಥಾನ ಪಡೆದಿರುವ ಹೊಸಮುಖವಾಗಿದ್ದಾರೆ.

Asia Cup 2022 Hockey: ಏಷ್ಯಾಕಪ್ ಹಾಕಿ: ಕಂಚಿನ ಪದಕಕ್ಕೆ ಕೊರಳೊಡ್ಡಿದ ಭಾರತೀಯ ವನಿತಾ ತಂಡ

Pro Kabaddi: ತಮಿಳ್ ತಲೈವಾಸ್ ವಿರುದ್ಧ ಪ್ರಚಂಡ ಗೆಲುವು ಸಾಧಿಸಿ ಎರಡನೇ ಸ್ಥಾನಕ್ಕೇರಿದ ಪಾಟ್ನಾ ಪೈರೇಟ್ಸ್​​