AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಮನೆಯಲ್ಲಿ ನಿನ್ನೆ ಬೆಳಿಗ್ಗೆ 8ರಿಂದ 10 ಗಂಟೆ ವರೆಗೆ ನಡೆದಿದ್ದೇನು? ಟಿವಿ9 ವರದಿ ಇಲ್ಲಿದೆ ನೋಡಿ

ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಮನೆಯಲ್ಲಿ ನಿನ್ನೆ ಬೆಳಿಗ್ಗೆ 8ರಿಂದ 10 ಗಂಟೆ ವರೆಗೆ ನಡೆದಿದ್ದೇನು? ಟಿವಿ9 ವರದಿ ಇಲ್ಲಿದೆ ನೋಡಿ

TV9 Web
| Updated By: sandhya thejappa|

Updated on: Jan 29, 2022 | 9:08 AM

Share

ಸೀಮಂತ ಕಾರ್ಯಕ್ರಮದಲ್ಲಿ ಬಿಎಸ್ವೈ ಸೇರಿದಂತೆ ಕುಟುಂಬದವರೆಲ್ಲ ಖುಷಿಯಾಗಿ ಭಾಗವಹಿಸಿದ್ದರು. ಗಂಡು ಮಗುವಿಗೆ ಜನ್ಮ ಕೊಟ್ಟಿದ್ದ ಸೌಂದರ್ಯ, ಮಗು ಹುಟ್ಟಿದ ಬಳಿಕ ಖಿನ್ನತೆಗೊಳಗಾಗಿದ್ದರೂ ಎಂದು ಹೇಳಲಾಗುತ್ತಿದೆ.

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ಅವರ ಮುದ್ದಿನ ಮೊಮ್ಮಗಳ ಆತ್ಮಹತ್ಯೆ (Suicide) ಇಡೀ ಕುಟುಂಬ ದುಃಖದಲ್ಲಿ ಮುಳುಗುವಂತೆ ಮಾಡಿದೆ. ಗಂಡ ಆಸ್ಪತ್ರೆಗೆ ಹೋದ ಸಮಯದಲ್ಲಿ ಸೌಂದರ್ಯ ಕೋಣೆ ಬಾಗಿಲು ಬಂದ್ ಆಗಿತ್ತು. ಮನೆ ಕೆಲಸದವರು ರೂಲ್ ಬಂದ್ ಆಗಿರುವುದನ್ನು ಗಮನಿಸಿ ಬಾಗಿಲು ತೆಗೆಯುವಂತೆ ಕೂಗಿದ್ದಾರೆ. ಆದರೆ ಬಾಗಿಲು ತೆಗೆಯದೆ ಇದ್ದಾಗ ನೀರಜ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ಮನೆಗೆ ಬರುವಷ್ಟರಲ್ಲಿ ಸೌದರ್ಯ ಉಸಿರು ಚೆಲ್ಲಿದ್ದರು. ಯಡಿಯೂರಪ್ಪ ಮೊದಲ‌ ಪುತ್ರಿ ಪದ್ಮಾವತಿಯವರ ಮಗಳು ಸೌಂದರ್ಯಗೆ 2018 ರಲ್ಲಿ ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿದ್ದ ಮರಿಸ್ವಾಮಿ ಅಣ್ಣನ ಮಗ ನೀರಜ್ ಜತೆ ಮದುವೆ ಮಾಡಿಕೊಡಲಾಗಿತ್ತು. ಬಳಿಕ ಬೆಂಗಳೂರಿನಲ್ಲಿ ಸೌಂದರ್ಯಗೆ ಅದ್ಧೂರಿಯಾಗಿ ಸೀಮಂತ ಮಾಡಲಾಗಿತ್ತು.

ಸೀಮಂತ ಕಾರ್ಯಕ್ರಮದಲ್ಲಿ ಬಿಎಸ್ವೈ ಸೇರಿದಂತೆ ಕುಟುಂಬದವರೆಲ್ಲ ಖುಷಿಯಾಗಿ ಭಾಗವಹಿಸಿದ್ದರು. ಗಂಡು ಮಗುವಿಗೆ ಜನ್ಮ ಕೊಟ್ಟಿದ್ದ ಸೌಂದರ್ಯ, ಮಗು ಹುಟ್ಟಿದ ಬಳಿಕ ಖಿನ್ನತೆಗೊಳಗಾಗಿದ್ದರೂ ಎಂದು ಹೇಳಲಾಗುತ್ತಿದೆ. ಇದು ಕೂಡ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ

Beating Retreat 2022: ಇಂದು ಗಣರಾಜ್ಯೋತ್ಸವ ಸಂಭ್ರಮದ ಸಮಾರೋಪ; ಹೇಗಿರಲಿದೆ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮ?

Video: ಎಂಜಲು ಹಚ್ಚಿ ಕರಪತ್ರ ಹಂಚಿದ ಗೃಹ ಸಚಿವ ಅಮಿತ್ ಶಾ !; ಬಿಜೆಪಿ ಕೊವಿಡ್​ 19 ಹಬ್ಬಿಸುತ್ತಿದೆ ಎಂದು ಆರೋಪಿಸಿದ ಅಖಿಲೇಶ್ ಯಾದವ್​