AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Beating Retreat 2022: ಇಂದು ಗಣರಾಜ್ಯೋತ್ಸವ ಸಂಭ್ರಮದ ಸಮಾರೋಪ; ಹೇಗಿರಲಿದೆ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮ?

ಭಾರತೀಯ ಭೂ ಸೇನೆ, ನೇವಿ, ವಾಯುಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್​ ಪಡೆಗಳ 26 ಸಂಗೀತ ವಾದ್ಯ ಪ್ರದರ್ಶನಗಳು ನಡೆಯಲಿವೆ ಎಂದು ಶುಕ್ರವಾರ ಕೇಂದ್ರ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

Beating Retreat 2022: ಇಂದು ಗಣರಾಜ್ಯೋತ್ಸವ ಸಂಭ್ರಮದ ಸಮಾರೋಪ; ಹೇಗಿರಲಿದೆ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮ?
ಸಾಂಕೇತಿಕ ಚಿತ್ರ
TV9 Web
| Updated By: Lakshmi Hegde|

Updated on:Jan 29, 2022 | 10:21 AM

Share

ಇಂದು ದೆಹಲಿಯಲ್ಲಿ ಗಣರಾಜ್ಯೋತ್ಸವ (Republic Day 2022) ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಬೀಟಿಂಗ್​ ರಿಟ್ರೀಟ್(Beating Retreat 2022)​ ನಡೆಯಲಿದೆ. ಈ ಬಾರಿ ಜನವರಿ 23ರಂದು ನೇತಾಜಿ ಸುಭಾಷ್​ ಚಂದ್ರ ಬೋಸ್​​ರ ಜನ್ಮದಿನದಿಂದಲೇ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಶುರುವಾಗಿದ್ದವು. ಎಂದಿನಂತೆ ಜನವರಿ 26ರಂದು ರಾಜಪಥ್​​ನಲ್ಲಿ ರಾಷ್ಟ್ರಪತಿ ಧ್ವಜಾರೋಹಣ ನಡೆಸಿದ ಬಳಿಕ, ಪರೇಡ್​​ಗಳು, ಸೇನಾಶಕ್ತಿ ಪ್ರದರ್ಶನಗಳು ನಡೆದಿದ್ದವು. ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ ಅಂದರೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಯೆಯಲ್ಲಿ ಆಜಾದಿ ಕಾ ಅಮೃತ ಮಹೋತ್ಸವ (Azadi ka Amrit Mahotsav) ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಸಹ ನಡೆಸಲಾಗುತ್ತಿದೆ. ಹಾಗೇ, ಇಂದು ನಡೆಯಲಿರುವ ಬೀಟಿಂಗ್​ ರಿಟ್ರೀಟ್ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಪಾಲ್ಗೊಳ್ಳುವರು. ಅಂದಹಾಗೆ ಈ ಬೀಟಿಂಗ್​ ರಿಟ್ರೀಟ್ ಎಂಬ ಸಾಂಪ್ರಾದಾಯಿಕ ಸಮಾರೋಪ ಸಮಾರಂಭದ ಆಚರಣೆ ಕಳೆದ 70ವರ್ಷಗಳಿಂದಲೂ ನಡೆದುಕೊಂಡು ಬಂದಿದೆ.  

1000 ಡ್ರೋನ್​​ಗಳಿಂದ ಲೈಟ್ ಶೋ ಈ ಬಾರಿ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮಕ್ಕೆ 1000 ಡ್ರೋನ್​​ಗಳು ಮೆರುಗು ನೀಡಲಿವೆ. ದೆಹಲಿಯಲ್ಲಿ ಇದೇ ಮೊದಲ ಬಾರಿಗೆ ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮದಲ್ಲಿ ಸಾವಿರ ಡ್ರೋನ್​​ಗಳ ಹಾರಾಟ ನಡೆಯಲಿದೆ. ಸುಮಾರು 10 ನಿಮಿಷಗಳ ಕಾಲ ನಡೆಯಲಿರುವ ಡ್ರೋನ್​ ಹಾರಾಟ ಸಮಾರಂಭವನ್ನು ಭಾರತದ ನವೋದ್ಯಮವಾದ (ಸ್ಟಾರ್ಟ್​ಅಪ್​) ಬಾಟ್‌ಲ್ಯಾಬ್ ಡೈನಾಮಿಕ್ಸ್  ಆಯೋಜಿಸಿದೆ. ಹಾಗೇ, ಇದಕ್ಕೆ ದೆಹಲಿಯ ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿ (ಐಐಟಿ) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಡಿಪಾರ್ಟ್​ಮೆಂಟ್​​ನ ಸಹಯೋಗವಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಇನ್ನೊಂದು ಬಹುಮುಖ್ಯ ವಿಷಯವೆಂದರೆ,  1000 ಡ್ರೋನ್​ಗಳೆಲ್ಲವೂ ದೇಶೀಯವಾಗಿ ಅಭಿವೃದ್ಧಿಪಡಿಸಿದವೇ ಆಗಿವೆ. ಇವು ಹಾರಾಡುವ 10 ನಿಮಿಷಗಳ ಕಾಲ, ಅದಕ್ಕೆ ತಕ್ಕನಾದ ಸಂಗೀತ ಕೂಡ ನುಡಿಸಲಾಗುವುದು. ಸರ್ಕಾರದ 75 ಸಾಧನೆಗಳನ್ನು ಇವು ಲೈಟಿಂಗ್​ ಮೂಲಕ ಪ್ರದರ್ಶಿಸಲಿವೆ ಎಂದೂ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಹಾಗೇ, ಬೀಟಿಂಗ್​ ರಿಟ್ರೀಟ್​ ಕಾರ್ಯಕ್ರಮಕ್ಕೂ ಮುನ್ನ ಡ್ರೋನ್​ಗಳು ಪ್ರಾಯೋಗಿಕ ಹಾರಾಟ ಕೂಡ ನಡೆಸಿವೆ.

ಈ ಬಾರಿಯ ಬೀಟಿಂಗ್​ ದಿ ರಿಟ್ರೀಟ್​ ಸಮಾರಂಭದಲ್ಲಿ ಅದ್ಭುತ ಮಾರ್ಷಲ್​ ಮ್ಯೂಸಿಕ್  ಟ್ಯೂನ್​​ಗಳು ಇರಲಿದ್ದು, ಇವು ಕಾರ್ಯಕ್ರಮಕ್ಕೆ ಇನ್ನಷ್ಟು ಸೊಬಗು ತರಲಿವೆ. ಭಾರತೀಯ ಭೂ ಸೇನೆ, ನೇವಿ, ವಾಯುಪಡೆ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್​ ಪಡೆಗಳ 26 ಸಂಗೀತ ವಾದ್ಯ ಪ್ರದರ್ಶನಗಳು ನಡೆಯಲಿವೆ ಎಂದು ಶುಕ್ರವಾರ ಕೇಂದ್ರ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ. ಅದರಲ್ಲಿ ಮೊದಲ ಬ್ಯಾಂಡ್ ವೀರ್​ ಸೈನಿಕ್​ ಟ್ಯೂನ್ ಆಗಿದೆ. ಅಂದಹಾಗೆ, ಈ ಬಾರಿ ಮಹಾತ್ಮ ಗಾಂಧಿಯವರ ಅಚ್ಚುಮೆಚ್ಚಿನ ಗೀತೆಯಾಗಿದ್ದ ಅಬೈಡ್​ ವಿತ್​ ಮಿ ರಾಗವನ್ನು ಬೀಟಿಂಗ್​ ರಿಟ್ರೀಟ್​ ಸಮಾರಂಭದಿಂದ ಹೊರಗಿಡಲಾಗಿದೆ. ಒಟ್ಟು 26 ಟ್ಯೂನ್​​ಗಳನ್ನು ನಡೆಸಲಾಗುವುದು ಎಂದು ಹೇಳಲಾಗಿದ್ದರೂ, ಅದರಲ್ಲಿ ಅಬೈಡ್​ ವಿತ್​ ಮಿ ಕ್ರಿಶ್ಚಿಯನ್​ ಗೀತೆಯ ಉಲ್ಲೇಖವಿಲ್ಲ. ಅದರ ಬದಲು ಏ ಮೇರೆ ವತನ್​ ಕೋ ಲೋಗೋ ಗೀತೆ ಸೇರಿಸಲಾಗಿದೆ.

ಇವತ್ತು ದೆಹಲಿಯ ವಿಜಯ್​ ಚೌಕ್​​ನಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಬೀಟಿಂಗ್​ ರಿಟ್ರೀಟ್​​ಗಾಗಿ ಈಗಾಗಲೇ ದೆಹಲಿ ಪೊಲೀಸರು ಸಿದ್ಧತೆ ಮಾಡಿದ್ದಾರೆ. ಸಂಚಾರ ಮಾರ್ಗಸೂಚಿಗಳನ್ನೂ ಬಿಡುಗಡೆ ಮಾಡಿದ್ದಾರೆ. ಈಗಾಗಲೇ ವಿಜಯ್​ ಚೌಕ್​​ನಲ್ಲಿ ಸಾಮಾನ್ಯ ಜನ, ವಾಹನ ಸಂಚಾರ ಬಂದ್​ ಆಗಿದೆ. ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆ! ರಾತ್ರಿ 12 ಗಂಟೆಯಾದರೂ ಊಟ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳು

Published On - 9:04 am, Sat, 29 January 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ