Video: ಎಂಜಲು ಹಚ್ಚಿ ಕರಪತ್ರ ಹಂಚಿದ ಗೃಹ ಸಚಿವ ಅಮಿತ್ ಶಾ !; ಬಿಜೆಪಿ ಕೊವಿಡ್ 19 ಹಬ್ಬಿಸುತ್ತಿದೆ ಎಂದು ಆರೋಪಿಸಿದ ಅಖಿಲೇಶ್ ಯಾದವ್
ಸಮಾಜವಾದಿ ಪಕ್ಷ ಮತ್ತು ಆರ್ಎಲ್ಡಿ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿಯುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಇರುವ ನಕಾರಾತ್ಮಕ ರಾಜಕೀಯ (Negative Politics)ವನ್ನು ನಿರ್ಮೂಲನಗೊಳಿಸುವುದೇ ನಮ್ಮ ಎರಡೂ ಪಕ್ಷಗಳ ಗುರಿ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಬಿಜೆಪಿಯವರು ಚುನಾವಣೆ ಪ್ರಚಾರ ದ ಹೆಸರಲ್ಲಿ ಕೊವಿಡ್ 19 ಸೋಂಕು (Coronavirus) ಹಬ್ಬಿಸುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಆರೋಪಿಸಿದ್ದಾರೆ. ಶುಕ್ರವಾರ ಮುಜಾಫರ್ನಗರದಲ್ಲಿ, ರಾಷ್ಟ್ರೀಯ ಲೋಕ ದಳ (ಯುಪಿ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿಯ ಮೈತ್ರಿ ಪಕ್ಷ-ಆರ್ಎಲ್ಡಿ)ದ ಮುಖ್ಯಸ್ಥ ಜಯಂತ್ ಚೌಧರಿಯವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅಖಿಲೇಶ್ ಯಾದವ್, ಬಿಜೆಪಿ ಕಾರ್ಯಕರ್ತರು ಕರಪತ್ರಗಳನ್ನು ಹಂಚುವ ಮೂಲಕ ಕೊವಿಡ್ 19 ಸೋಂಕನ್ನು ಕೂಡ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಉತ್ತರಪ್ರದೇಶ ಸೇರಿ ಒಟ್ಟು ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಈ ಸುದ್ದಿಗೋಷ್ಠಿ ನಡೆಸಿದ್ದಾರೆ. ಕೊವಿಡ್ 19 ಮಧ್ಯೆ ಚುನಾವಣೆ ನಡೆಯುತ್ತಿರುವುದರಿಂದ, ಚುನಾವಣಾ ಆಯೋಗ ಹಲವು ನಿರ್ಬಂಧಗಳೊಟ್ಟಿಗೆ ಚುನಾವಣೆ ದಿನಾಂಕವನ್ನು ಘೋಷಿಸಿದೆ. ಈ ಬಗ್ಗೆ ಮಾಧ್ಯಮದವರು ಅಖಿಲೇಶ್ ಯಾದವ್ ಬಳಿ ಪ್ರಶ್ನಿಸಿದಾಗ ಉತ್ತರಿಸಿದ ಅವರು, ಬಿಜೆಪಿಯವರು ಚುನಾವಣಾ ಪ್ರಚಾರದ ಕರಪತ್ರಗಳನ್ನು ನೀಡುತ್ತಿದ್ದಾರೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತಿದೆ. ಹೀಗಾಗಿ ಈ ಬಗ್ಗೆ ಕೂಡ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉತ್ತರ ಪ್ರದೇಶದ ಗೌತಮ ನಗರ ಜಿಲ್ಲೆಯಲ್ಲಿ ಕಾರ್ಯಕರ್ತರೊಂದಿಗೆ ಸೇರಿ ಮನೆ-ಮನೆ ಪ್ರಚಾರ ನಡೆಸಿದ್ದಾರೆ. ಅವರೇ ಸ್ವತಃ ಕರಪತ್ರಗಳನ್ನು ಹಂಚಿದ್ದಾರೆ. ಆದರೆ ಹೀಗೆ ಕರಪತ್ರಗಳನ್ನು ತೆಗೆಯುವಾಗ ಅದಕ್ಕೆ ಎಂಜಲು ಹಚ್ಚಿದ್ದ ವಿಡಿಯೋವೊಂದನ್ನು ನಿವೃತ್ತ ಐಎಎಸ್ ಅಧಿಕಾರಿ ಸೂರ್ಯ ಪ್ರತಾಪ್ ಸಿಂಗ್ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಅನೇಕರ ಟೀಕೆಗೆ ಗುರಿಯಾದ ಬೆನ್ನಲ್ಲೇ ಅಖಿಲೇಶ್ ಯಾದವ್ ಹೀಗೊಂದು ಆರೋಪ ಮಾಡಿದ್ದಾರೆ.
कोरोना काल में थूक लगाकर पर्चे कौन बाँटता है?
इसपर मीडिया की हैसियत है बोलने की?pic.twitter.com/WqV6L7qLci
— Surya Pratap Singh IAS Rtd. (@suryapsingh_IAS) January 27, 2022
ನಕಾರಾತ್ಮಕ ರಾಜಕೀಯ ನಿರ್ಮೂಲನ ಸಮಾಜವಾದಿ ಪಕ್ಷ ಮತ್ತು ಆರ್ಎಲ್ಡಿ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕೆ ಇಳಿಯುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಇರುವ ನಕಾರಾತ್ಮಕ ರಾಜಕೀಯ (Negative Politics)ವನ್ನು ನಿರ್ಮೂಲನಗೊಳಿಸುವುದೇ ನಮ್ಮ ಎರಡೂ ಪಕ್ಷಗಳ ಗುರಿ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ. ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಮುಸ್ಲಿಂ ಪ್ರಾಬಲ್ಯವಿದೆ. ಈ ಜಿಲ್ಲಾ ವ್ಯಾಪ್ತಿಯ ಕೈರಾನಾದಿಂದ ಈ ಹಿಂದೆ ಅಖಿಲೇಶ್ ಯಾದವ್ ಸರ್ಕಾರವಿದ್ದ ಸಂದರ್ಭದಲ್ಲೇ ಅನೇಕ ಹಿಂದೂಗಳು ವಲಸೆ ಹೋಗಿದ್ದಾರೆ. ಅದರ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಖಿಲೇಶ್ ಯಾದವ್, ಈ ಬಾರಿ ರಾಜ್ಯದಿಂದ ಬಿಜೆಪಿ ನಿರ್ಗಮಿಸುವಂತೆ ಮಾಡಲಾಗುವುದು ಎಂದು ಚುಟುಕಾಗಿ ಉತ್ತರಿಸಿದ್ದಾರೆ.
ನಂತರ ಮಾತನಾಡಿದ ರಾಷ್ಟ್ರೀಯ ಲೋಕದಳ ಮುಖ್ಯಸ್ಥ ಜಯಂತ್ ಚೌಧರಿ, ವಿಧಾನಸಭೆ ಚುನಾವಣೆಯಲ್ಲಿ ಅಂಚೆ ಮತಪತ್ರದ ಮೂಲಕ ಮತದಾನ ಮಾಡುವಂತೆ ಬಿಜೆಪಿ ಸರ್ಕಾರ ಹೇಳಿದೆ. ಆದರೆ ಅದನ್ನು ಮಾಡಬೇಡಿ. ಯಾವ ಕಾರಣಕ್ಕೂ ನಿಮ್ಮ ಐಟಿ ಕಾರ್ಡ್ಗಳನ್ನು ಚುನಾವಣಾ ಹಿರಿಯ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಬೇಕು. ನಿಮ್ಮ ಹಿರಿಯ ಅಧಿಕಾರಿಗಳಿಂದ ಒತ್ತಡ ಬಂದಿದೆ ಎಂಬ ಕಾರಣಕ್ಕೆ ಅಂಚೆಮತ ಪತ್ರದ ಮೂಲಕ ಮತ ಚಲಾಯಿಸಬೇಡಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: Karnataka Dam Water Level: ಮತ್ತೆ ಮಳೆಯಿಂದ ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ