ಉತ್ತರಪ್ರದೇಶ ಚುನಾವಣೆಗೆ ಮುನ್ನ ಪಕ್ಷ ತೊರೆಯಲಿದ್ದಾರೆಯೇ ಕಾಂಗ್ರೆಸ್ ನಾಯಕ ರಾಜ್ ಬಬ್ಬರ್?
Raj Babbar ಉತ್ತರ ಪ್ರದೇಶದ ಚುನಾವಣೆಗೆ ಮುನ್ನ ರಾಜ್ ಬಬ್ಬರ್ ಅವರು ತಮ್ಮ ಹಿಂದಿನ ಪಕ್ಷವಾದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಮರಳುವ ಬಗ್ಗೆ ವದಂತಿಗಳು ಕೇಳಿ ಬರುತ್ತಿವೆ. ಬಬ್ಬರ್ ಅವರು ಅಖಿಲೇಶ್ ಯಾದವ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ.
ದೆಹಲಿ: ಉತ್ತರ ಪ್ರದೇಶ ಚುನಾವಣೆಗೆ ಮುನ್ನ ರಾಜ್ ಬಬ್ಬರ್ (Raj Babbar) ಕಾಂಗ್ರೆಸ್ ಪಕ್ಷ ತೊರೆಯಲಿದ್ದಾರೆಯೇ? ಅವರ ಇತ್ತೀಚಿನ ಟ್ವೀಟ್‌ಗಳು ಕೆಲವೊಂದು ಸುಳಿವುಗಳನ್ನು ನೀಡುತ್ತಿದ್ದು ಉತ್ತರ ಪ್ರದೇಶದಲ್ಲಿ(Uttar Pradesh) ಮತ್ತೊಬ್ಬ ಕಾಂಗ್ರೆಸ್ (Congress) ನಾಯಕನ ಪಕ್ಷಾಂತರ ಸಾಧ್ಯತೆ ಕಾಣುತ್ತಿದೆ. ರಾಜ್ ಬಬ್ಬರ್ ಅವರ ಇತ್ತೀಚಿನ ಟ್ವೀಟ್‌ಗಳು ಪಕ್ಷದ ಉದ್ದೇಶಗಳಿಂದ ಭಿನ್ನವಾಗಿದ್ದು ಇವುಗಳ ಬಗ್ಗೆ ಸ್ಪಷ್ಟನೆಯನ್ನು ಕೊಡುವುದಕ್ಕೆ ಬಬ್ಬರ್ ಮುಂದಾಗಿಲ್ಲ. ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿದಾಗ ಜೈರಾಮ್ ರಮೇಶ್ ಅವರಂತಹ ಇತರ ಪಕ್ಷದ ನಾಯಕರು ವಾಗ್ದಾಳಿ ನಡೆಸಿದಾಗ. ರಾಜ್ ಬಬ್ಬರ್ ಅವರನ್ನು ಅಭಿನಂದಿಸಿದರು. “ಅಭಿನಂದನೆಗಳು ಗುಲಾಂ ನಬಿ ಆಜಾದ್ ಸಾಹಬ್! ನೀವು ಹಿರಿಯ ಸಹೋದರನಂತೆ ಇದ್ದೀರಿ ಮತ್ತು ನಿಮ್ಮ ಕಳಂಕರಹಿತ ಸಾರ್ವಜನಿಕ ಜೀವನ ಮತ್ತು ಗಾಂಧಿ ಆದರ್ಶಗಳಿಗೆ ಬದ್ಧತೆ ಯಾವಾಗಲೂ ಸ್ಫೂರ್ತಿಯಾಗಿದೆ. ಪದ್ಮಭೂಷಣವು ಐದು ದಶಕಗಳ ನಿಮ್ಮ ದೇಶಕ್ಕೆ ನಿಖರವಾದ ಸೇವೆಯ ಆದರ್ಶ ಮನ್ನಣೆಯಾಗಿದೆ” ಎಂದು ರಾಜ್ ಬಬ್ಬರ್ ಟ್ವೀಟ್ ಮಾಡಿದ್ದರು. ನಿನ್ನೆ, ಬಬ್ಬರ್ ಅವರು ಕಾಂಗ್ರೆಸ್‌ನ “G-23” ಅಥವಾ ಕಾಂಗ್ರೆಸ್‌ನ ಗಾಂಧಿ ಕುಟುಂಬದ ನಾಯಕತ್ವವನ್ನು ಟೀಕಿಸಿದ 23 ನಾಯಕರ ಗುಂಪಿನ ಸದಸ್ಯ ಗುಲಾಂ ನಬಿ ಆಜಾದ್ ವಿರುದ್ಧದ ಟೀಕೆಗೆ ಪ್ರತಿಕ್ರಿಯಿಸಿದರು. ವಿರೋಧ ಪಕ್ಷದ ನಾಯಕನ ಸಾಧನೆಯನ್ನು ಗೌರವಿಸಿದಾಗ ಪ್ರಶಸ್ತಿ ಹೆಚ್ಚು ಅರ್ಥಪೂರ್ಣವಾಗುತ್ತದೆ.ಅವರವರ ಪಕ್ಷದ ಅಧಿಕಾರದಲ್ಲಿ ಯಾರಿಗೆ ಬೇಕಾದರೂ ಅವರ ಆಸೆ ಪೂರೈಸಿಕೊಳ್ಳಬಹುದು. ನನ್ನ ಪ್ರಕಾರ ಪದ್ಮಭೂಷಣ ವಿವಾದ ಅನಗತ್ಯ ಎಂದು ಬಬ್ಬರ್ ಗುರುವಾರ ಟ್ವೀಟ್ ಮಾಡಿದ್ದಾರೆ.
Congratulations @ghulamnazad Sahab ! You’re like an elder brother and your impeccable public life & commitment to Gandhian ideals have always been an inspiration. The #PadmaBhushan is an ideal recognition of 5 decades of your meticulous service to the nation.
— Raj Babbar (@RajBabbar23) January 25, 2022
अवार्ड की अहमियत तो तब है जब विरोधी पक्ष किसी नेता की उपलब्धियों को सम्मान दे – अपनी सरकार में तो कोई भी ख़्वाहिश पूरी कर सकते हैं लोग। #PadmaBhushan को लेकर जारी बहस मुझे लगता है ग़ैरज़रूरी है।
— Raj Babbar (@RajBabbar23) January 27, 2022
ಉತ್ತರ ಪ್ರದೇಶದ ಚುನಾವಣೆಗೆ ಮುನ್ನ ರಾಜ್ ಬಬ್ಬರ್ ಅವರು ತಮ್ಮ ಹಿಂದಿನ ಪಕ್ಷವಾದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಮರಳುವ ಬಗ್ಗೆ ವದಂತಿಗಳು ಕೇಳಿ ಬರುತ್ತಿವೆ. ಬಬ್ಬರ್ ಅವರು ಅಖಿಲೇಶ್ ಯಾದವ್ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ವರದಿಯಾಗಿದೆ. 80ರ ದಶಕದಲ್ಲಿ ಜನಪ್ರಿಯ ಚಲನಚಿತ್ರ ತಾರೆಯಾಗಿದ್ದ ಅವರು 1980 ರ ದಶಕದ ಉತ್ತರಾರ್ಧದಲ್ಲಿ ಜನತಾ ದಳದೊಂದಿಗೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ನಂತರ ಸಮಾಜವಾದಿ ಪಕ್ಷಕ್ಕೆ ಬದಲಾದರು. ಅವರು 1999 ಮತ್ತು 2004 ರ ಲೋಕಸಭಾ ಚುನಾವಣೆಯಲ್ಲಿ ಆಗ್ರಾದಿಂದ ಗೆದ್ದರು. ಆದರೆ 2006ರಲ್ಲಿ ಅವರನ್ನು ಸಮಾಜವಾದಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಎರಡು ವರ್ಷಗಳ ನಂತರ ಅವರು ಕಾಂಗ್ರೆಸ್ ಸೇರಿದರು. 2009 ರಲ್ಲಿ ಬಬ್ಬರ್ ಫಿರೋಜಾಬಾದ್‌ನಿಂದ ಉಪಚುನಾವಣೆಯಲ್ಲಿ ಗೆದ್ದರು. ಆದರೆ 2014 ಮತ್ತು 2019ರ ಎರಡೂ ಚುನಾವಣೆಗಳಲ್ಲಿ ಸೋತಿದ್ದರು.
ಮುಂದಿನ ತಿಂಗಳು ನಡೆಯಲಿರುವ ಯುಪಿ ಚುನಾವಣೆಗೆ ಬಬ್ಬರ್ ಅವರನ್ನು ಸೋಮವಾರ ಕಾಂಗ್ರೆಸ್‌ನ ಸ್ಟಾರ್ ಪ್ರಚಾರಕರಲ್ಲಿ ಒಬ್ಬರು ಎಂದು ಹೆಸರಿಸಿದೆ. ಕಾಂಗ್ರೆಸ್ ಸ್ಟಾರ್ ಪ್ರಚಾರಕ ಎಂದು ಹೆಸರಿಸಿದ ಮರುದಿನವೇ ಉದೇಶದ ಮತ್ತೊಬ್ಬ ಪ್ರಮುಖ ನಾಯಕ ಆರ್‌ಪಿಎನ್ ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಸದ್ಯಕ್ಕೆ ಕಾಂಗ್ರೆಸ್ ತನ್ನ ಪ್ರಮುಖ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಹೆಣಗಾಡುತ್ತಿದೆ.
2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಪಕ್ಷವನ್ನು ತೊರೆದು ಬಿಜೆಪಿಗೆ ಬದಲಾದಾಗ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರದ ಪತನ ಮತ್ತು ಬಿಜೆಪಿಯನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ “ರಾಹುಲ್ ಟೀಮ್” – ರಾಹುಲ್ ಗಾಂಧಿಯ ಆಂತರಿಕ ವಲಯದಲ್ಲಿನ ನಾಯಕರ ಗುಂಪು ದುರ್ಬಲವಾಗ ತೊಡಗಿತು.
ಕಳೆದ ವರ್ಷ, ಜಿತಿನ್ ಪ್ರಸಾದ ಅವರು ಕಾಂಗ್ರೆಸ್ ನಿಂದ ಬಿಜೆಪಿಗೆ ಪಕ್ಷಾಂತರಾವಗಿ ಯುಪಿಯಲ್ಲಿ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಸೇರ್ಪಡೆಗೊಂಡರು. ಈ ವಾರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ನಿಕಟವರ್ತಿಯಾಗಿದ್ದ ಆರ್‌ಪಿಎನ್ ಸಿಂಗ್ ಅವರು ಬಿಜೆಪಿಗೆ ಸೇರುವ ಮೂಲಕ ಯುಪಿಯಲ್ಲಿ ಕಾಂಗ್ರೆಸ್‌ಗೆ ಭಾರಿ ಹೊಡೆತ ನೀಡಿದ್ದರು. ಈ ಮೂವರೂ 2004-2009ರಲ್ಲಿ ಕೇಂದ್ರದಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದರು.
ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆರ್‌ಪಿಎನ್ ಸಿಂಗ್