ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆರ್​​ಪಿಎನ್ ಸಿಂಗ್

ಸಿಂಗ್ ಅವರು ಇತ್ತೀಚೆಗೆ ಬಿಜೆಪಿ ತೊರೆದ ಸ್ವಾಮಿ ಪ್ರಸಾದ್ ಮೌರ್ಯ ಅವರ ವಿರುದ್ಧ ಅವರ ಭದ್ರಕೋಟೆಯಾದ ಪದ್ರೌನಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಸಿಂಗ್ ಅವರು ಈ ಪ್ರದೇಶದಲ್ಲಿ ಪ್ರಮುಖ ನಾಯಕರಾಗಿದ್ದಾರೆ.

ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಆರ್​​ಪಿಎನ್ ಸಿಂಗ್
ಬಿಜೆಪಿ ಸೇರಿದ ಆರ್‌ಪಿಎನ್ ಸಿಂಗ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 25, 2022 | 3:16 PM

ದೆಹಲಿ: ಮಾಜಿ ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್ (RPN Singh) ಅವರು ಮಂಗಳವಾರ ಕಾಂಗ್ರೆಸ್ (Congress) ತೊರೆದು ಬಿಜೆಪಿ ಸೇರಿದ್ದಾರೆ. ಮುಂದಿನ ತಿಂಗಳು ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ(Uttar Pradesh Election) ಸ್ಟಾರ್ ಪ್ರಚಾರಕರಾಗಿ ಸಿಂಗ್ ಅವರನ್ನು ಹೆಸರಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪೂರ್ವ ಉತ್ತರ ಪ್ರದೇಶದದ ಖುಷಿನಗರದಿಂದ ಬಂದಿರುವ ಆರ್‌ಪಿಎನ್ ಸಿಂಗ್, ರಾಜ್ಯದಲ್ಲಿ ಕಾಂಗ್ರೆಸ್‌ನ ದೊಡ್ಡ ನಾಯಕರಲ್ಲಿ ಒಬ್ಬರಾಗಿದ್ದಾರೆ. ಸೋನಿಯಾ ಗಾಂಧಿ  ಅವರಿಗೆ ಬರೆದಿರುವ ರಾಜೀನಾಮೆ ಪತ್ರವನ್ನು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ ಸಿಂಗ್ ಇಂದು ನಾವು ನಮ್ಮ ಮಹಾನ್ ಗಣರಾಜ್ಯದ ರಚನೆಯನ್ನು ಆಚರಿಸುತ್ತಿದ್ದೇವೆ, ನನ್ನ ರಾಜಕೀಯ ಪ್ರಯಾಣದಲ್ಲಿ ನಾನು ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇನೆ .ಜೈ ಹಿಂದ್ ಎಂದು ಬರೆದಿದ್ದಾರೆ.  ಸಿಂಗ್ ಅವರು ಇತ್ತೀಚೆಗೆ ಬಿಜೆಪಿ ತೊರೆದ ಸ್ವಾಮಿ ಪ್ರಸಾದ್ ಮೌರ್ಯ ಅವರ ವಿರುದ್ಧ ಅವರ ಭದ್ರಕೋಟೆಯಾದ ಪದ್ರೌನಾದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಸಿಂಗ್ ಅವರು ಈ ಪ್ರದೇಶದಲ್ಲಿ ಪ್ರಮುಖ ನಾಯಕರಾಗಿದ್ದಾರೆ ಮತ್ತು ಮೌರ್ಯ ಅವರು ಬಿಟ್ಟುಹೋದ ಜಾಗವನ್ನು ತುಂಬಬಹುದು ಎಂದು ಮೂಲಗಳು ಹೇಳಿರುವುದಾಗಿ ಎನ್​​ಡಿಟಿವಿ ವರದಿ ಮಾಡಿದೆ.

ಸಿಂಗ್ ಮೂರು ಅವಧಿಗೆ ಪದ್ರೌನಾದಿಂದ ಶಾಸಕರಾಗಿದ್ದಾರೆ. ಅವರು 2009 ರಲ್ಲಿ ಖುಷಿ ನಗರದಿಂದ ಸಂಸದರಾಗಿ ಆಯ್ಕೆಯಾದರು ಆದರೆ 2014 ರಲ್ಲಿ ಸೋತರು. ಸ್ವಾಮಿ ಪ್ರಸಾದ್ ಮೌರ್ಯ ಅವರು ಕಳೆದ ಎರಡು ರಾಜ್ಯಗಳ ಚುನಾವಣೆಯಲ್ಲಿ ಪದ್ರೌನಾ ಸ್ಥಾನದಿಂದ ಗೆದ್ದರು, ಮೊದಲು ಮಾಯಾವತಿಯವರ ಬಹುಜನ ಸಮಾಜ ಪಕ್ಷ (BSP) ಅಭ್ಯರ್ಥಿಯಾಗಿ ಮತ್ತು ನಂತರ ಬಿಜೆಪಿಯ ಅಭ್ಯರ್ಥಿಯಾಗಿ. 2009 ರ ಲೋಕಸಭಾ ಚುನಾವಣೆಯಲ್ಲಿ ಆರ್‌ಪಿಎನ್ ಸಿಂಗ್ ಗೆದ್ದರು, ಸ್ವಾಮಿ ಪ್ರಸಾದ್ ಮೌರ್ಯ ಎರಡನೇ ಸ್ಥಾನ ಪಡೆದರು.

ಮಂಗಳವಾರ ಸಿಂಗ್ ತಮ್ಮ ಟ್ವಿಟರ್ ಬಯೋವನ್ನು ಬದಲಾಯಿಸಿದರು ಮತ್ತು “ಕಾಂಗ್ರೆಸ್” ಎಂಬುದನ್ನು ಕೈ ಬಿಟ್ಟಾಗ ಇದು ಭಾರೀ ಊಹಾಪೋಹಗಳಿಗೆ ಉತ್ತೇಜನ ನೀಡಿತು. “ನನ್ನ ಧ್ಯೇಯವಾಕ್ಯ ಭಾರತ, ಮೊದಲು, ಯಾವಾಗಲೂ,” ಅವರ ಬಯೋದಲ್ಲಿದೆ. ಇಲ್ಲಿ ಮೊದಲು AICC (ಅಖಿಲ ಭಾರತ ಕಾಂಗ್ರೆಸ್ ಸಮಿತಿ) ಉಸ್ತುವಾರಿ ಸೇರಿದಂತೆ ಅವರ ಕಾಂಗ್ರೆಸ್ ಜವಾಬ್ದಾರಿಗಳನ್ನು ಉಲ್ಲೇಖಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ತಮ್ಮ ಸಹಚರರಿಗೆ ಟಿಕೆಟ್ ನಿರಾಕರಿಸಿದ್ದಕ್ಕಾಗಿ ಪಕ್ಷದ ನಾಯಕತ್ವದ ವಿರುದ್ಧ ಅವರು ಅಸಮಾಧಾನಗೊಂಡಿದ್ದಾರೆ ಎಂದು ಕೆಲವು ವರದಿಗಳು ಹೇಳಿವೆ.

ಕಳೆದ ವರ್ಷ ಜಿತಿನ್ ಪ್ರಸಾದ ಅವರು ರಾಜೀನಾಮೆ ನೀಡಿದ ನಂತರ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನಿಂದ ಇದು ಎರಡನೇ ದೊಡ್ಡ ನಿರ್ಗಮನವಾಗಿದೆ. ಪ್ರಸಾದ ಅವರು ಬಿಜೆಪಿ ಸೇರಿದರು ಮತ್ತು ನಂತರ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರಾದರು.

ಕಳೆದ ಎರಡು ವರ್ಷಗಳಲ್ಲಿ ಕಾಂಗ್ರೆಸ್ ಹಲವು ಪ್ರಮುಖ ನಾಯಕರನ್ನು ಕಳೆದುಕೊಂಡಿದೆ. 2020 ರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಘಾತಕಾರಿ ನಿರ್ಗಮನವು ಪಕ್ಷದಲ್ಲಿ ದೊಡ್ಡ ಮಂಥನಕ್ಕೆ ಕಾರಣವಾಗಿತ್ತು. ಇದು 23 ನಾಯಕರು ಸೋನಿಯಾ ಗಾಂಧಿಗೆ “ಗೋಚರ ಮತ್ತು ಪೂರ್ಣ ಸಮಯದ” ನಾಯಕತ್ವ ಮತ್ತು ಸಾಮೂಹಿಕ ನಿರ್ಧಾರಗಳನ್ನು ಕೇಳಲು ಪತ್ರ ಬರೆಯಲು ಕಾರಣವಾಯಿತು.

ಸಿಂಧಿಯಾ, ಪ್ರಸಾದ ಮತ್ತು ಸಿಂಗ್ ಎಲ್ಲರೂ ರಾಹುಲ್ ಗಾಂಧಿಯ ನಿಕಟ ಸಹಾಯಕರಾಗಿದ್ದರು. ಈಗ ಖಾಲಿಯಾಗಿರುವ ಕ್ಲಬ್‌ನ ಇನ್ನೊಬ್ಬ ಸದಸ್ಯ, ಸಚಿನ್ ಪೈಲಟ್, ತಿಂಗಳುಗಳ ನಿರಾಶೆಯ ನಂತರ ಇತ್ತೀಚೆಗೆ ರಾಜಸ್ಥಾನದಲ್ಲಿ ಕ್ಯಾಬಿನೆಟ್ ಸ್ಥಾನಗಳೊಂದಿಗೆ ಸಮಾಧಾನಗೊಂಡರು. ಆದರೆ ಇದು ಅಸ್ಥಿರವಾದ ಒಪ್ಪಂದ ಎಂದು ಹಲವರು ನಂಬುತ್ತಾರೆ.

ಇದು ದುಃಖಕರ ಸಂಗತಿ. ಅನೇಕ ಉಸ್ತುವಾರಿಗಳು ಬಂದು ಹೋಗಿದ್ದಾರೆ, ಪರವಾಗಿಲ್ಲ. ಅವನು ಬಹಳ ಯೋಚಿಸಿದ ನಂತರ ನಿರ್ಧರಿಸಿರಬೇಕು. ನಾವು ಕಾಂಗ್ರೆಸ್‌ನ ನಿಜವಾದ ಸೈನಿಕರು, ನಾವು ಇಲ್ಲಿಯೇ ಬದುಕುತ್ತೇವೆ ಮತ್ತು ಸಾಯುತ್ತೇವೆ. ಅವರ ನಿರ್ಧಾರ ತಪ್ಪು ಎಂದು ನಾವು ಭಾವಿಸುತ್ತೇವೆ ಎಂದು ಜಾರ್ಖಂಡ್ ಕಾಂಗ್ರೆಸ್ ಮುಖ್ಯಸ್ಥ ರಾಜೇಶ್ ಠಾಕೂರ್ ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಮತ್ತೆ ಭಾರತೀಯರ ಕೆಂಗಣ್ಣಿಗೆ ಗುರಿಯಾದ ಅಮೇಜಾನ್​; ಟ್ವಿಟರ್​ನಲ್ಲಿ ಟ್ರೆಂಡ್​ ಆಗ್ತಿದೆ Boycott Amazon ಹ್ಯಾಷ್​ಟ್ಯಾಗ್​

Published On - 2:57 pm, Tue, 25 January 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್