AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇತರರು ನಿಮ್ಮ ಯುಪಿಐ ಐಡಿ ಬಳಸಿ ಪೇಮೆಂಟ್ ಮಾಡುವ ಕ್ರಮ; ಇಲ್ಲಿದೆ ಯುಪಿಐ ಸರ್ಕಲ್ ಫೀಚರ್

UPI circle feature: ಯುಪಿಐ ಸರ್ಕಲ್ ಎನ್ನುವ ಹೊಸ ಫೀಚರ್ ಬಂದಿದ್ದು, ಇದು ಒಬ್ಬ ವ್ಯಕ್ತಿಯ ಯುಪಿಐ ಐಡಿ ಬಳಸಿ ಇತರರು ಹಣ ಪಾವತಿಸಲು ಅನುಮತಿ ನೀಡಬಹುದು. ಬ್ಯಾಂಕ್ ಅಕೌಂಟ್ ಮತ್ತು ಯುಪಿಐ ಅಕೌಂಟ್ ಇರುವ ಪ್ರಾಥಮಿಕ ಬಳಕೆದಾರ ಯುಪಿಐ ಸರ್ಕಲ್​​​ಗೆ ಗರಿಷ್ಠ ಐವರು ಸೆಕೆಂಡರಿ ಯೂಸರ್​​ಗಳನ್ನು ಜೋಡಿಸಬಹುದು. ಇದರಲ್ಲಿ ಎರಡು ನಿಯಂತ್ರಣ ಆಯ್ಕೆಗಳಿರುತ್ತವೆ. ಮೊದಲ ಆಯ್ಕೆಯಲ್ಲಿ ಸೆಕೆಂಡರಿ ಯೂಸರ್​​ಗಳು ಯುಪಿಐ ಪಿನ್ ಇಲ್ಲದೇ ಹಣ ಪಾವತಿಸಬಹುದು. ಮತ್ತೊಂದು ಆಯ್ಕೆಯಲ್ಲಿ, ಪ್ರತಿ ಪಾವತಿಗೂ ಅನುಮತಿ ಕೇಳಬೇಕಾಗುತ್ತದೆ.

ಇತರರು ನಿಮ್ಮ ಯುಪಿಐ ಐಡಿ ಬಳಸಿ ಪೇಮೆಂಟ್ ಮಾಡುವ ಕ್ರಮ; ಇಲ್ಲಿದೆ ಯುಪಿಐ ಸರ್ಕಲ್ ಫೀಚರ್
ಯುಪಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 31, 2025 | 2:08 PM

ಭಾರತದಲ್ಲಿ ಹಣ ಪಾವತಿ ಕ್ರಮದಲ್ಲಿ ದೊಡ್ಡ ಕ್ರಾಂತಿಯನ್ನೇ ತಂದಿರುವ ಯುಪಿಐ ತಂತ್ರಜ್ಞಾನ ಆಗಾಗ್ಗೆ ಅಪ್​ಡೇಟ್ ಆಗುತ್ತಲೇ ಇರುತ್ತದೆ. ಹೊಸ ಅಗತ್ಯಗಳಿಗೆ ತಕ್ಕಂತೆ ಹೊಸ ಫೀಚರ್​​ಗಳನ್ನು ಅಳವಡಿಸಲಾಗುತ್ತಲೇ ಇದೆ. ಯುಪಿಐ ಬಂದ ಬಳಿಕ ಹಣ ಪಾವತಿಗೆ ಕ್ಯಾಷ್ ಬಳಕೆ ಗಣನೀಯವಾಗಿ ತಗ್ಗಿದೆ. ಗ್ರಾಹಕರು ಮತ್ತು ವ್ಯಾಪಾರಿಗಳು ಇಬ್ಬರಿಗೂ ಹಣ ಪಾವತಿ ಕ್ರಿಯೆ ಸುಲಭವಾಗಿದೆ. ಜನರು ಎಷ್ಟು ಬೇಕಾದರೂ ಯುಪಿಐ ಆ್ಯಪ್​​ಗಳನ್ನು ಬಳಸಬಹುದು. ಎಷ್ಟು ಬೇಕಾದರೂ ಬ್ಯಾಂಕ್ ಅಕೌಂಟ್​​ಗಳನ್ನು ಜೋಡಿಸಿಕೊಳ್ಳಬಹುದು. ಯಾವ ಯುಪಿಐ ಆ್ಯಪ್​​ಗೆ ಹಣ ಬಂದರೆ ಅದು ಯಾವ ಬ್ಯಾಂಕ್ ಅಕೌಂಟ್​​ಗೆ ಸಂದಾಯವಾಗಬೇಕು ಎಂಬುದನ್ನು ನಿರ್ದಿಷ್ಟಪಡಿಸಬಹುದು. ಹೀಗೆ ಯುನಿಫೈಡ್ ಪೇಮೆಂಟ್ ಇಂಟರ್​​ಫೇಸ್​​ನಲ್ಲಿ ನಾನಾ ತರಹದ ಫೀಚರ್​​ಗಳಿವೆ. ಕೆಲ ತಿಂಗಳ ಹಿಂದೆ ಎನ್​ಪಿಸಿಐ ಸಂಸ್ಥೆ ಯುಪಿಐ ಸರ್ಕಲ್ (UPI Circle) ಎನ್ನುವ ಹೊಸ ಫೀಚರ್ ಜಾರಿಗೆ ತಂದಿದೆ.

ಏನಿದು ಯುಪಿಐ ಸರ್ಕಲ್ ಫೀಚರ್?

ಇದು ಒಬ್ಬ ವ್ಯಕ್ತಿಯ ಯುಪಿಐ ಅಕೌಂಟ್ ಬಳಸಿ ಬೇರೆಯವರು ಹಣ ಪಾವತಿಸಲು ಅವಕಾಶ ನೀಡುತ್ತದೆ. ಕುಟುಂಬ ಸದಸ್ಯರು, ಆಪ್ತರು, ಸ್ನೇಹಿತರ ಗುಂಪಿನ ಜೊತೆ ನಿಮ್ಮ ಹಣ ಹಂಚಿಕೊಳ್ಳಬಹುದು.

ಇಲ್ಲಿ ಪ್ರಾಥಮಿಕ ಬಳಕೆದಾರನಿಂದ ಯುಪಿಐ ಸರ್ಕಲ್ ಸೃಷ್ಟಿಸಬಹುದು. ಈ ಸರ್ಕಲ್​​ನಲ್ಲಿ ಗರಿಷ್ಠ ಐದು ಮಂದಿಯನ್ನು ಜೋಡಿಸಬಹುದು. ಇವರು ಸೆಕೆಂಡರಿ ಯೂಸರ್​​ಗಳಾಗಿರುತ್ತಾರೆ. ಪ್ರಾಥಮಿಕ ಬಳಕೆದಾರನ ಯುಪಿಐ ಅಕೌಂಟ್ ಅನ್ನು ಐವರು ಮಂದಿ ಬಳಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ
Image
ಸ್ಮಾಲ್ ಸೇವಿಂಗ್ಸ್ ಸ್ಕೀಮ್​​ಗಳಿಗೆ ಬಡ್ಡಿದರ ಬದಲಾವಣೆ ಇಲ್ಲ
Image
ಒಂದಕ್ಕಿಂತ ಹೆಚ್ಚು ಇನ್ಷೂರೆನ್ಸ್ ಪಾಲಿಸಿ ಬಳಸುವುದು ಹೇಗೆ?
Image
ಕ್ರೆಡಿಟ್ ಸ್ಕೋರ್ ಹೊಸ ನಿಯಮಗಳ ಪ್ರಯೋಜನಗಳೇನು?
Image
ಗೋಲ್ಡ್ ಲೋನ್ ಮೇಲೆ ಆರ್​ಬಿಐ ಕಣ್ಣು?

ಇದನ್ನೂ ಓದಿ: ಎಟಿಎಂನಲ್ಲಿ ಬ್ಯಾಲನ್ಸ್ ಪರಿಶೀಲಿಸಿದರೂ ಶುಲ್ಕವೇ; ಮೇ 1ರಿಂದ ಇಂಟರ್​​ಚೇಂಜ್ ಫೀಸ್ ಹೆಚ್ಚಳ

ಬ್ಯಾಂಕ್ ಅಕೌಂಟ್ ಮತ್ತು ಯುಪಿಐ ಅಕೌಂಟ್ ಹೊಂದಿರುವ ಪ್ರಾಥಮಿಕ ಬಳಕೆದಾರನು ಯುಪಿಐ ಸರ್ಕಲ್ ಸೃಷ್ಟಿಸಬಹುದು. ಈ ಸರ್ಕಲ್​​ನಲ್ಲಿ ಯಾರನ್ನು ಜೋಡಿಸಬೇಕೋ ಆ ವ್ಯಕ್ತಿಯ ಯುಪಿಐ ಐಡಿಯನ್ನು ನಮೂದಿಸಿ ಸರ್ಕಲ್​​ಗೆ ಸೇರಿಸಬಹುದು. ಅಥವಾ ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಮಾಡಿ ಸೇರಿಸಬಹುದು.

ಯುಪಿಐ ಸರ್ಕಲ್: ಹಣ ಬಳಕೆಯ ನಿಯಂತ್ರಣಗಳು…

ಯುಪಿಐ ಸರ್ಕಲ್​ ಫೀಚರ್​​ನಲ್ಲಿ ಎರಡು ಆಯ್ಕೆಗಳನ್ನು ಕಾಣಬಹುದು. ಈ ಸರ್ಕಲ್​​ಗೆ ಸೇರಿಸಲಾಗುವ ವ್ಯಕ್ತಿಗಳಿಗೆ ಹಣ ಪಾವತಿಸಲು ಪೂರ್ಣ ಹಕ್ಕು ನೀಡಬಹುದು. ಅಥವಾ ಪಾಕ್ಷಿಕ ಹಕ್ಕು ನೀಡಬಹುದು.

ಇಲ್ಲಿ ಪೂರ್ಣ ಹಕ್ಕು ನೀಡಲಾದ ವ್ಯಕ್ತಿಯು ನಿಗದಿತ ಮೊತ್ತದಷ್ಟು ಹಣ ಪಾವತಿಗಳನ್ನು ಮಾಡಲು ಯಾವುದೇ ಪಿನ್ ನೀಡಬೇಕಿಲ್ಲ. ಆ ವ್ಯಾಪ್ತಿ ಮೀರಿದಾಗ ಮಾತ್ರ ಪ್ರಾಥಮಿಕ ಬಳಕೆದಾರರ ಅನುಮತಿ ಪಡೆಯಬೇಕಾಗುತ್ತದೆ. ಎರಡನೇ ಆಯ್ಕೆಯಲ್ಲಿ, ಸೆಕೆಂಡರಿ ಯೂಸರ್​​​ಗಳು ತಮ್ಮ ಪ್ರತಿಯೊಂದು ವಹಿವಾಟಿಗೂ ಪ್ರೈಮರಿ ಯೂಸರ್​​ನ ಅನುಮತಿ ಪಡೆಯಬೇಕಾಗುತ್ತದೆ.

ಇದನ್ನೂ ಓದಿ: ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳನ್ನು ಒಂದೇ ಕ್ಲೇಮ್​​ಗೆ ಬಳಸಬಹುದಾ? ಇಲ್ಲಿದೆ ಮಾಹಿತಿ

ಫೋನ್ ಪೇ, ಪೇಟಿಎಂಗಳಲ್ಲಿ ಲಭ್ಯ ಇದೆಯಾ?

ಯುಪಿಐ ಸರ್ಕಲ್ ಸದ್ಯ ಭೀಮ್ ಯುಪಿಐ ಆ್ಯಪ್​​ನಲ್ಲಿ ಮಾತ್ರ ಇರುವ ಫೀಚರ್. ಪ್ರಾಯೋಗಿಕವಾಗಿ ಅಲ್ಲಿ ಅಳವಡಿಸಲಾಗಿದೆ. ಈಗ ಬೇರೆ ಪ್ಲಾಟ್​​ಫಾರ್ಮ್​​ಗಳಲ್ಲಿ ಇದನ್ನು ಕಾಣಲಾಗುವುದಿಲ್ಲ. ಮುಂದಿನ ದಿನಗಳಲ್ಲಿ ಫೋನ್ ಪೇ, ಗೂಗಲ್ ಪೇ, ಪೇಟಿಎಂ ಇತ್ಯಾದಿ ಬೇರೆ ಬೇರೆ ಯುಪಿಐ ಆ್ಯಪ್​​ಗಳಲ್ಲಿ ಸರ್ಕಲ್ ಫೀಚರ್ ಅನ್ನು ಜಾರಿಗೆ ತರುವ ಸಾಧ್ಯತೆ ಇದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್
ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್​ಪಾಸ್
ಹಣದ ವಂಚನೆ ಮಾಡಿ ಮನೆತನದ ಮಾನ ಹರಾಜು ಹಾಕಿದಳು: ಚೈತ್ರಾ ತಂದೆ
ಹಣದ ವಂಚನೆ ಮಾಡಿ ಮನೆತನದ ಮಾನ ಹರಾಜು ಹಾಕಿದಳು: ಚೈತ್ರಾ ತಂದೆ
ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ
ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ