ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳನ್ನು ಒಂದೇ ಕ್ಲೇಮ್ಗೆ ಬಳಸಬಹುದಾ? ಇಲ್ಲಿದೆ ಮಾಹಿತಿ
Advantages of multiple insurance policies: ಇನ್ಷೂರೆನ್ಸ್ ಪಾಲಿಸಿ ಒಂದೇ ಇದ್ದರೆ ಸಾಕು, ಒಂದಕ್ಕಿಂತ ಹೆಚ್ಚು ಇನ್ಷೂರೆನ್ಸ್ ಪಾಲಿಸಿಗಳು ಬೇಡ ಎಂದು ಯೋಚಿಸುತ್ತಿದ್ದರೆ ಅದನ್ನು ಬಿಟ್ಟುಬಿಡಿ. ಬಹು ಇನ್ಷೂರೆನ್ಸ್ ಪಾಲಿಸಿಗಳಿದ್ದರೆ ಅದನ್ನು ಒಂದೇ ಕ್ಲೇಮ್ಗೆ ಬಳಸಬಹುದು. ಒಂದು ಪಾಲಿಸಿಯ ಕವರೇಜ್ ಮಿತಿ ದಾಟಿದರೆ ಉಳಿದ ಹಣಕ್ಕೆ ಇನ್ನೊಂದು ಪಾಲಿಸಿಯನ್ನು ಬಳಸಬಹುದು.

ಈಗ ಉದ್ಯೋಗಿಗಳಿಗೆ ಕಂಪನಿ ವತಿಯಿಂದ ಇನ್ಷೂರೆನ್ಸ್ ಕವರೇಜ್ (health insurance) ಇರುತ್ತದೆ. ಹೀಗಿರುವಾಗ ಬಹಳ ಜನರು ವೈಯಕ್ತಿಕವಾಗಿ ಇನ್ಷೂರೆನ್ಸ್ ಪಾಲಿಸಿ ಮಾಡಲು ಹಿಂದೇಟು ಹಾಕುತ್ತಾರೆ. ಕಾರ್ಪೊರೇಟ್ ಕವರೇಜ್ ಇದ್ದರೂ ಪರ್ಸನಲ್ ವಿಮಾ ಕವರೇಜ್ ಇರುವುದು ಯಾವಾಗಲೂ ಉತ್ತಮ. ನೀವು ಎರಡನ್ನೂ ಬಳಸಿ ಕ್ಲೇಮ್ ಮಾಡಲು ಅವಕಾಶ ಇದೆ. ದಿಢೀರನೇ ದೊಡ್ಡ ಮಟ್ಟದ ಅನಾರೋಗ್ಯ ತೊಂದರೆಯಾಗಿ ಭಾರೀ ಹಣ ವ್ಯಯವಾಗುತ್ತಿದ್ದು, ಒಂದು ಪಾಲಿಸಿಯಲ್ಲಿ ಕವರೇಜ್ ಆಗುವ ಮೊತ್ತವು ಸಾಲದಿದ್ದರೆ ಆಗ ಎರಡೂ ಪಾಲಿಸಿಗಳ ಕವರೇಜ್ ಅನ್ನು ಬಳಸಿಕೊಳ್ಳಬಹುದು.
ಉದಾಹರಣೆಗೆ, ನಿಮ್ಮಲ್ಲಿ ಎರಡು ಹೆಲ್ತ್ ಇನ್ಷೂರೆನ್ಸ್ ಪಾಲಿಸಿ ಇದೆ ಎಂದಿಟ್ಟುಕೊಳ್ಳಿ. ತಲಾ 5 ಲಕ್ಷ ರೂ ಕವರೇಜ್ ಇರುವ ಪಾಲಿಸಿಗಳವು. ನಿಮ್ಮ ಆಸ್ಪತ್ರೆಯ ವೆಚ್ಚ 8 ಲಕ್ಷ ರೂ ಆಗಿ ಹೋಗಿದೆ ಎಂದಿಟ್ಟುಕೊಳ್ಳಿ. ನಿಮ್ಮ ಪ್ರೈಮರಿ ಇನ್ಷೂರೆನ್ಸ್ ಪ್ಲಾನ್ನಲ್ಲಿ 5 ಲಕ್ಷ ರೂ ಗರಿಷ್ಠ ಮಿತಿ ಇರುತ್ತದೆ. ಅಷ್ಟನ್ನು ಕ್ಲೇಮ್ ಮಾಡಿದ ಬಳಿಕ, ನೀವು ಉಳಿದ 3 ಲಕ್ಷ ರೂ ಹಣಕ್ಕೆ ಎರಡನೇ ವಿಮಾ ಪ್ಲಾನ್ನಲ್ಲಿ ಪ್ರಯತ್ನಿಸಬಹುದು.
ಇದನ್ನೂ ಓದಿ: ಆರ್ಬಿಐನಿಂದ ಕ್ರೆಡಿಟ್ ಸ್ಕೋರ್ ನಿಯಮದಲ್ಲಿ ಬದಲಾವಣೆ; ಹೊಸ ಸಾಲಗಳ ಮೇಲೆ ಪರಿಣಾಮ; ಇದರ ಸಾಧಕ ಬಾಧಕಗಳಿವು…
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ನೀವು ಇನ್ಷೂರೆನ್ಸ್ ಪಾಲಿಸಿ ಮಾಡಿಸುವಾಗ ಮತ್ತೊಂದು ಪಾಲಿಸಿ ಮಾಡಿಸಿದ್ದರೆ ಅದರ ಮಾಹಿತಿಯನ್ನು ಒದಗಿಸಿರಬೇಕು. ನೀವು ಮೊದಲ ವಿಮಾ ಕಂಪನಿಯಿಂದ ಹಣ ಕ್ಲೇಮ್ ಮಾಡಿದ್ದರೆ ಅದರ ಸೆಟಲ್ಮೆಂಟ್ ಸರ್ಟಿಫಿಕೇಟ್ ಅನ್ನು ಪಡೆದು, ಎರಡನೇ ವಿಮಾ ಕಂಪನಿಗೆ ಒದಗಿಸಬೇಕು. ಇಲ್ಲದಿದ್ದರೆ ಉಳಿದ ವೆಚ್ಚವನ್ನು ಭರಿಸಲು ಎರಡನೇ ಕಂಪನಿ ನಿರಾಕರಿಸಬಹುದು.
ಮ್ಯಾಟರ್ನಿಟಿ ಇನ್ಷೂರೆನ್ಸ್ ಪಾಲಿಸಿಗಳು…
ಸಾಮಾನ್ಯವಾಗಿ ಹೆಚ್ಚಿನ ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳು ಮ್ಯಾಟರ್ನಿಟಿ ವೆಚ್ಚವನ್ನು ಅಷ್ಟಾಗಿ ಭರಿಸುವುದಿಲ್ಲ. ಒಟ್ಟಾರೆ ಕವರೇಜ್ನಲ್ಲಿ ಒಂದು ಸಣ್ಣ ಭಾಗವಾಗಿ ಮ್ಯಾಟರ್ನಿಟಿ ವೆಚ್ಚದ ಕವರೇಜ್ ಇರುತ್ತದೆ. ಸರಾಸರಿಯಾಗಿ ಸುಮಾರು 50,000 ರೂ ಕ್ಲೇಮ್ ಮಿತಿ ಇರಬಹುದು. ಈ ಸಂದರ್ಭದಲ್ಲಿ ಒಂದಕ್ಕಿಂತ ಹೆಚ್ಚು ಇನ್ಷೂರೆನ್ಸ್ ಪಾಲಿಸಿಗಳಿದ್ದರೆ ಅನುಕೂಲವಾಗುತ್ತದೆ.
ಇದನ್ನೂ ಓದಿ: ಐದು ವರ್ಷಗಳಿಂದ ಶೇ. 20ಕ್ಕೂ ಹೆಚ್ಚು ಲಾಭ ತರುತ್ತಿರುವ ಡಿವಿಡೆಂಡ್ ಯೀಲ್ಡ್ ಮ್ಯೂಚುವಲ್ ಫಂಡ್ಗಳು
ಈಗ ಆಸ್ಪತ್ರೆಯಲ್ಲಿ ಹೆರಿಗೆ ವೆಚ್ಚ ಬಹಳ ಹೆಚ್ಚಿದೆ. 75,000 ರೂನಿಂದ ಆರಂಭವಾಗಿ 3,00,000 ರೂವರೆಗೂ ಪ್ಯಾಕೇಜ್ಗಳಿವೆ. ಹೆರಿಗೆ ಕಾರ್ಯ ಸಂಕೀರ್ಣವಾದರೆ ಇನ್ನೂ ಹೆಚ್ಚಿನ ವೆಚ್ಚವಾಗಬಹುದು. ಹೀಗಾಗಿ, ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಷೂರೆನ್ಸ್ ಪಾಲಿಸಿಗಳಿದ್ದರೆ ಅನುಕೂಲವಾಗಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 7:05 pm, Thu, 27 March 25