ದೆಹಲಿ ಶಾಸಕರಿರಲಿ, ಕೇರಳ ಶಾಸಕರ ಬೇಸಿಕ್ ಸ್ಯಾಲರಿ ಕೇವಲ 2,000 ರೂ; ಬೇರೆ ರಾಜ್ಯಗಳಲ್ಲಿ ಹೇಗಿದೆ ಸಂಬಳ? ಇಲ್ಲಿದೆ ಪಟ್ಟಿ
MLAs' salaries in India: ದೆಹಲಿಯಲ್ಲಿ ಶಾಸಕರಿಗೆ ಸಂಬಳ ಕೇವಲ 90,000 ರೂ ಇದೆ. ಸಂಬಳ ಪರಿಷ್ಕರಣೆಗೆ ಪ್ರಯತ್ನಗಳಾಗುತ್ತಿವೆ. ಆದರೆ, ಕೇರಳ ಶಾಸಕರಿಗೆ ಇನ್ನೂ ಕಡಿಮೆ ಸಂಬಳ ಇದೆ. ಅಲ್ಲಿಯ ಎಂಎಲ್ಎಗಳ ಮೂಲವೇತನ ಕೇವಲ 2,000 ರೂ ಎಂದರೆ ನಂಬಲು ಕಷ್ಟ. ಆದರೂ ನಿಜ. ಶಾಸಕರಿಗೆ ಅತಿಹೆಚ್ಚು ಸಂಬಳ ನೀಡುವ ಟಾಪ್-5 ರಾಜ್ಯಗಳಲ್ಲಿ ಕರ್ನಾಟಕ ಇದೆ.

ನವದೆಹಲಿ, ಮಾರ್ಚ್ 27: ದೆಹಲಿಯಲ್ಲಿ ಶಾಸಕರ ಸಂಬಳ ಅತಿ ಕಡಿಮೆ ಇದೆ ಎನ್ನುವ ವಿಚಾರ ಅಲ್ಲಿನ ವಿಧಾನಸಭೆಯಲ್ಲಿ ಸದ್ದು ಮಾಡುತ್ತಿದೆ. ಶಾಸಕರಿಗೆ ಅತಿ ಕಡಿಮೆ ಸಂಬಳ ನೀಡುವ ರಾಜ್ಯಗಳಲ್ಲಿ ದೆಹಲಿಯೂ ಒಂದು. ಶಾಸಕರ ಮೂಲವೇತನ ಕೇವಲ 30,000 ರೂ ಮಾತ್ರವೇ. ಒಟ್ಟು ಮಾಸಿಕ ಸಂಬಳ ಒಂದು ಲಕ್ಷ ರೂಗಿಂತಲೂ ಕಡಿಮೆ. ಕೇರಳ ರಾಜ್ಯದ ಶಾಸಕರದ್ದು ಇನ್ನೂ ಕಡಿಮೆ ಸಂಬಳ. ಇವರ ಮೂಲವೇತನ ಕೇವಲ 2,000 ರೂ ಎಂದರೆ ಯಾರಿಗಾದರೂ ಅಚ್ಚರಿ ಎನಿಸುತ್ತದೆ. ಶಾಸಕರಿಗೆ ಅತ್ಯಂತ ಕಡಿಮೆ ಸಂಬಳ ಹೊಂದಿರುವ ರಾಜ್ಯಗಳಲ್ಲಿ ಕೇರಳ ಇದೆ. ಈ ದಕ್ಷಿಣ ತುದಿಯ ರಾಜ್ಯದ ಎಂಎಲ್ಎಗಳಿಗೆ ಮೂಲವೇತನ ಕೇವಲ 2,000 ರೂ ಅಂತೆ. ಇದು ಅಚ್ಚರಿ ಎನಿಸಿದರೂ ನಿಜ. ಬೇಸಿಕ್ ಸ್ಯಾಲರಿ ಎರಡು ಸಾವಿರ ರೂ ಮಾತ್ರವೇ ಇದ್ದರೂ ಬೇರೆ ಬೇರೆ ಭತ್ಯೆಗಳನ್ನು ಸೇರಿಸಿದರೆ ಕೇರಳ ಶಾಸಕರ ಒಟ್ಟು ಸಂಬಳ 70,000 ರೂ ಆಗುತ್ತದೆ. ಆದರೂ ಕೂಡ ಬೇರೆ ಹೆಚ್ಚಿನ ರಾಜ್ಯಗಳಿಗೆ ಹೋಲಿಸಿದರೆ ಇವರ ಸಂಬಳ ಕಡಿಮೆ ಎನಿಸುವುದು.
ದೆಹಲಿ ರಾಜ್ಯದಲ್ಲಿ ಶಾಸಕರಿಗೆ ಸಿಗುವ ಸಂಬಳ ತಿಂಗಳಿಗೆ 90,000 ರೂ ಮಾತ್ರ. ರಾಷ್ಟ್ರ ರಾಜಧಾನಿಯ ಜನಪ್ರತಿನಿಧಿಗಳಿಗೆ ಇಷ್ಟು ಕಡಿಮೆ ಸಂಬಳ ಇರುವುದು ಅಚ್ಚರಿಯ ಸಂಗತಿ. ದೆಹಲಿ ವಿಧಾನಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ವೇತನ ಪರಿಷ್ಕರಣೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ದೆಹಲಿ ಶಾಸಕರ ವೇತನ ವಿವರ
ದೆಹಲಿ ಶಾಸಕರ ಒಟ್ಟು ಮಾಸಿಕ ಸಂಬಳ: 90,000 ರೂ
- ಮೂಲವೇತನ: 30,000 ರೂ
- ಕ್ಷೇತ್ರ ಭತ್ಯೆ: 25,000 ರೂ
- ಕಾರ್ಯದರ್ಶಿ ಭತ್ಯೆ: 15,000 ರೂ
- ದೂರವಾಣಿ ಮತ್ತಿತರ ಭತ್ಯೆ: 10,000 ರೂ
ಇವುಗಳ ಜೊತೆಗೆ, ದಿನಕ್ಕೆ 1,500 ರೂ ಭತ್ಯೆಯೂ ಸಿಗುತ್ತದೆ. ಇದು ತಿಂಗಳಿಗೆ 45,000 ರೂ ಆಗುತ್ತದೆ. ಇದನ್ನು ಸೇರಿಸಿದರೆ ದೆಹಲಿ ಶಾಸಕರು ತಿಂಗಳಿಗೆ ಸುಮಾರು 1,35,000 ರೂ ಗಳಿಸುತ್ತಾರೆ.
ಇದನ್ನೂ ಓದಿ: ಆಸ್ತಿ ನೋಂದಣಿ ಸಂದರ್ಭದಲ್ಲಿ ಯಾರನ್ನು ಸಾಕ್ಷಿದಾರರನ್ನಾಗಿ ಮಾಡಬಹುದು, ಕಾನೂನು ಏನು ಹೇಳುತ್ತೆ?
ಶಾಸಕರಿಗೆ ಅಧಿಕ ಸಂಬಳ ನೀಡುವ ರಾಜ್ಯಗಳಲ್ಲಿ ಕರ್ನಾಟಕ
ಶಾಸಕರಿಗೆ ಮೂಲವೇತನ ಕಡಿಮೆ ಇರುವ ರಾಜ್ಯಗಳಲ್ಲಿ ಕೇರಳದ ಜೊತೆಗೆ ಕರ್ನಾಟಕವೂ ಇದೆ. ಕರ್ನಾಟಕದ ಎಂಎಲ್ಎಗಳ ಬೇಸಿಕ್ ಸ್ಯಾಲರಿ 25,000 ರೂ ಮಾತ್ರವೇ. ಆದರೆ, ಭತ್ಯೆ ಸೇರಿ ಒಟ್ಟು ಸಂಬಳ ಎರಡು ಲಕ್ಷ ರೂಗಿಂತಲೂ ಹೆಚ್ಚಿದೆ. ಶಾಸಕರಿಗೆ ಅತಿಹೆಚ್ಚು ಸಂಬಳ ನೀಡುವ ಟಾಪ್-5 ರಾಜ್ಯಗಳಲ್ಲಿ ಕರ್ನಾಟಕವೂ ಇದೆ.
ಹಿಂದುಳಿದ ರಾಜ್ಯಗಳಲ್ಲಿ ಒಂದೆಂದು ಪರಿಗಣಿಸಲಾದ ಜಾರ್ಖಂಡ್ನಲ್ಲಿ ಶಾಸಕರಿಗೆ ಅತಿಹೆಚ್ಚು ಸಂಬಳ ನೀಡಲಾಗುತ್ತದೆ. ಇಲ್ಲಿ ತಿಂಗಳಿಗೆ ಒಟ್ಟು 2,90,000 ರೂ ಸಂಬಳ ನಿಗದಿ ಮಾಡಲಾಗಿದೆ. ಮಣಿಪುರ ರಾಜ್ಯದ ಶಾಸಕರೂ ಕೂಡ ಎರಡೂವರೆ ಲಕ್ಷ ರೂ ಸಂಬಳ ಪಡೆಯುತ್ತಾರೆ.
ರಾಜ್ಯವಾರು ಶಾಸಕರ ಮಾಸಿಕ ಸಂಬಳ
- ಜಾರ್ಖಂಡ್: 2,90,000 ರೂ
- ಮಹಾರಾಷ್ಟ್ರ: 2,60,000 ರೂ
- ತೆಲಂಗಾಣ: 2,50,000 ರೂ
- ಮಣಿಪುರ: 2,50,000 ರೂ
- ಕರ್ನಾಟಕ: 2,05,000 ರೂ
- ಉತ್ತರಪ್ರದೇಶ: 1,87,000 ರೂ
- ಉತ್ತರಾಖಂಡ್: 1,60,000 ರೂ
- ಆಂಧ್ರಪ್ರದೇಶ: 1,25,000 ರೂ
- ಹಿಮಾಚಲಪ್ರದೇಶ: 1,25,000 ರೂ
- ರಾಜಸ್ಥಾನ್: 1,25,000 ರೂ
- ಗೋವಾ: 1,00,000 ರೂ
- ದೆಹಲಿ: 90,000 ರೂ
- ಕೇರಳ: 70,000 ರೂ
ರಾಷ್ಟ್ರಪತಿ, ಪ್ರಧಾನಮಂತ್ರಿಗಳ ಮಾಸಿಕ ಸಂಬಳ ಎಷ್ಟು?
- ರಾಷ್ಟ್ರಪತಿ: 4,00,000 ರೂ
- ಪ್ರಧಾನಿ: 2,80,000 ರೂ
- ಸಂಸದರು: 1,00,000 ರೂ
ಇದನ್ನೂ ಓದಿ: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2 ಪ್ಲಾನ್ ನಿಲ್ಲಿಸಿದ ಸರ್ಕಾರ; ಏನಿದು ಚಿನ್ನ ನಗದೀಕರಣ ಯೋಜನೆ?
ತೆಲಂಗಾಣ ಸಿಎಂ ಸಂಬಳ ರಾಷ್ಟ್ರಪತಿಗಳದ್ದಕ್ಕೆ ಸಮ
ರಾಷ್ಟ್ರಪತಿಗಳಿಗೆ ತಿಂಗಳಿಗೆ ನಾಲ್ಕು ಲಕ್ಷ ರೂ ಸಂಬಳ ಸಿಗುತ್ತದೆ. ತೆಲಂಗಾಣ ಮುಖ್ಯಮಂತ್ರಿಯ ಮಾಸಿಕ ವೇತನವೂ ಇಷ್ಟೇ ಇದೆ. ದೆಹಲಿ ಶಾಸಕರಿಗೆ ಸಂಬಳ ಕಡಿಮೆ ಆದರೂ ಅಲ್ಲಿನ ಮುಖ್ಯಮಂತ್ರಿಗೆ 3,90,000 ರೂ ಸಂಬಳ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:04 pm, Thu, 27 March 25