AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೇಷನ್ ಕಾರ್ಡ್​​ಗೆ ಇ-ಕೆವೈಸಿ ಸಲ್ಲಿಸಲು ಮಾರ್ಚ್ 31 ಡೆಡ್​ಲೈನ್; ತಪ್ಪಿದರೆ ಕೈತಪ್ಪಬಹುದು ಸಬ್ಸಿಡಿ

2025 March 31st deadline to link Ration Card and Aadhaar: ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ರೇಷನ್​ ಕಾರ್ಡ್ದದಾರರು ಆಧಾರ್ ದಾಖಲೆಯ ಮೂಲಕ ಇ ಕೆವೈಸಿ ಮಾಡಬೇಕು. 2025ರ ಮಾರ್ಚ್ 26ರವರೆಗೆ ಕಾಲಾವಕಾಶ ಕೊಡಲಾಗಿದೆ. ಜನರು ತಮ್ಮ ರಾಜ್ಯದ ಪಿಡಿಎಸ್ ಪೋರ್ಟಲ್ ಮೂಲಕ ಇಕೆವೈಸಿ ಸಲ್ಲಿಸಬಹುದು.

ರೇಷನ್ ಕಾರ್ಡ್​​ಗೆ ಇ-ಕೆವೈಸಿ ಸಲ್ಲಿಸಲು ಮಾರ್ಚ್ 31 ಡೆಡ್​ಲೈನ್; ತಪ್ಪಿದರೆ ಕೈತಪ್ಪಬಹುದು ಸಬ್ಸಿಡಿ
ರೇಷನ್ ಕಾರ್ಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 26, 2025 | 5:56 PM

Share

ನವದೆಹಲಿ, ಮಾರ್ಚ್ 26: ರೇಷನ್ ಕಾರ್ಡ್ ಹೊಂದಿರುವವರು ಇ-ಕೆವೈಸಿ (Ration Card e-KYC) ಮಾಡುವುದು ಕಡ್ಡಾಯವಾಗಿದೆ. ಕೇಂದ್ರ ಸರ್ಕಾರ ಮಾರ್ಚ್ 31ಕ್ಕೆ ಡೆಡ್​​ಲೈನ್ ನಿಗದಿ ಮಾಡಿದೆ. ಮುಂದಿನ ಮಂಗಳವಾರದೊಳಗೆ ರೇಷನ್ ಕಾರ್ಡ್​​ಗೆ ಆಧಾರ್ ದಾಖಲೆ ಸಲ್ಲಿಸದಿದ್ದರೆ ನಿಮ್ಮ ಪಡಿತರ ಸೌಲಭ್ಯ ಸ್ಥಗಿತಗೊಳ್ಳಬಹುದು. ರೇಷನ್ ಕಾರ್ಡ್ ದುರ್ಬಳಕೆ ತಡೆಯಲು, ಸರಿಯಾದ ಫಲಾನುಭವಿಗಳನ್ನು ಗುರುತಿಸಲು ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ರೇಷನ್ ಕಾರ್ಡ್ ಇ ಕೆವೈಸಿ ಸಲ್ಲಿಸುವ ಕ್ರಮ

  • ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಿಗೆ ಪ್ರತ್ಯೇಕವಾದ ಅಧಿಕೃತ ಪಿಡಿಎಸ್ ಪೋರ್ಟಲ್ ಇರುತ್ತದೆ. ನಿಮ್ಮ ರಾಜ್ಯದ ಪಿಡಿಎಸ್ ಪೋರ್ಟಲ್ ತೆರೆಯಿರಿ.
  • ಅಲ್ಲಿ ಮುಖ್ಯಪುಟದಲ್ಲಿ ರೇಷನ್ ಕಾರ್ಡ್ ಮೆನು ಅಥವಾ ಸರ್ವಿಸಸ್ ಮೆನು ಅಡಿಯಲ್ಲಿ ಇ ಕೆವೈಸಿ ಇರುತ್ತದೆ. ಅದನ್ನು ಕ್ಲಿಕ್ ಮಾಡಿ.
  • ಇಲ್ಲಿ ರೇಷನ್ ಕಾರ್ಡ್ ನಂಬರ್ ನಮೂದಿಸಿ. ಬಳಿಕ ರೇಷನ್ ಕಾರ್ಡ್ ಯಾರ ಹೆಸರಲ್ಲಿ ಇದೆಯೋ ಅವರ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಬಹುದು. ಅಥವಾ ರೇಷನ್ ಕಾರ್ಡ್​​ನಲ್ಲಿರುವ ಇತರ ಸದಸ್ಯರ ಆಧಾರ್ ನಂಬರ್ ಅನ್ನು ಬೇಕಾದರೂ ನಮೂದಿಸಬಹುದು.
  • ಈಗ ಮೊಬೈಲ್ ನಂಬರ್ ವೆರಿಫಿಕೇಶನ್ ಮಾಡಬೇಕಾಗುತ್ತದೆ. ಆಧಾರ್​​ಗೆ ಲಿಂಕ್ ಆದ ಮೊಬೈಲ್ ನಂಬರ್​​ಗೆ ಬರುವ ಒಟಿಪಿಯನ್ನು ನಮೂದಿಸಿ ಲಾಗಿನ್ ಆಗಬಹುದು.

ಈ ಹಂತಗಳಾದರೆ ಇ ಕೆವೈಸಿ ಪೂರ್ಣವಾಗುತ್ತದೆ.

ಇದನ್ನೂ ಓದಿ: ಗೋಲ್ಡ್ ಮಾನಿಟೈಸೇಶನ್ ಸ್ಕೀಮ್, 2 ಪ್ಲಾನ್ ನಿಲ್ಲಿಸಿದ ಸರ್ಕಾರ; ಏನಿದು ಚಿನ್ನ ನಗದೀಕರಣ ಯೋಜನೆ?

ಕಚೇರಿಗೆ ಹೋಗಿ ಕೆವೈಸಿ ಸಲ್ಲಿಸಬಹುದು

ಆನ್​​​ಲೈನ್​​ನಲ್ಲಿ ಇ-ಕೆವೈಸಿ ಸಲ್ಲಿಸಲು ಕಷ್ಟವಾಗುತ್ತಿದ್ದರೆ ಆಫ್​​ಲೈನ್​ನಲ್ಲೇ ಮಾಡಬಹುದು. ನಿಮ್ಮ ಸ್ಥಳೀಯ ರೇಷನ್ ಕಾರ್ಡ್ ಕಚೇರಿ ಅಥವಾ ಕಾಮನ್ ಸರ್ವಿಸ್ ಸೆಂಟರ್​​ನಲ್ಲಿ (Common Service Centre) ಇಕೆವೈಸಿ ಸಲ್ಲಿಸಬಹುದು.

ನಿಮ್ಮ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ದಾಖಲೆಗಳನ್ನು ಕೊಂಡೊಯ್ಯಬೇಕು. ಫಿಂಗರ್ ಪ್ರಿಂಟ್ ಅಥವಾ ಐರಿಸ್ ಸ್ಕ್ಯಾನ್ ಮೂಲಕ ಬಯೋಮೆಟ್ರಿಕ್ಸ್ ವೆರಿಫೈ ಮಾಡಬಹುದು. ಇದಾದ ಬಳಿಕ ಇ-ಕೆವೈಸಿ ಪೂರ್ಣಗೊಂಡು ನಿಮಗೆ ದೃಢೀಕರಣ ಪತ್ರ ಸಿಗುತ್ತದೆ.

ರೇಷನ್ ಕಾರ್ಡ್​​​ಗೆ ಇಕೆವೈಸಿ ಸಲ್ಲಿಸಲು ಸದ್ಯಕ್ಕೆ ಮಾರ್ಚ್ 31ಕ್ಕೆ ಗಡುವು ಕೊಡಲಾಗಿದೆ. ಕಾಲಾವಕಾಶ ಮತ್ತಷ್ಟು ವಿಸ್ತರಣೆ ಆಗುತ್ತದಾ ಗೊತ್ತಿಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗುಲ್ಮಾರ್ಗ್‌ನಲ್ಲಿ ಹಿಮಪಾತ; ಶ್ವೇತವರ್ಣಕ್ಕೆ ತಿರುಗಿದ ಪರ್ವತಗಳು
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
ಗನ್, ಪಿಸ್ತೂಲ್ ಹೊಂದಿರುವವರಿಗೆ ಖಡಕ್ ಸಂದೇಶ ನೀಡಿದ ಸಿಎಂ ಡಿಕೆ ಶಿವಕುಮಾರ್
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನ: ಮೈಲುಗಲ್ಲಿನ ಬಗ್ಗೆ ಚಂದ್ರು ಮಾತು
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ವಂದೇ ಮಾತರಂ: ಸಿಎಂ ಡಿಕೆಶಿಗೆ ರಾಜ್ಯಪಾಲರು ಬರೆದ 4 ಪುಟ ಪತ್ರದ ವಿವರ ಹೀಗಿದೆ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ: ನಟ ಅನಂತ್ ನಾಗ್​ಗೆ ವಿಶೇಷ ಗೌರವ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ
ಎಚ್​​​ಕೆ ಪಾಟೀಲ್ ರಾಜೀನಾಮೆ ಎಚ್ಚರಿಕೆಗೆ ಡಿಕೆಶಿ ಪ್ರತಿಕ್ರಿಯೆ ಇಲ್ಲಿದೆ