Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತಂಜಲಿ ಉತ್ಪನ್ನಗಳು ಜನಪ್ರಿಯವಾಗಲು, ಜನವಿಶ್ವಾಸ ಗಳಿಸಲು ಏನು ಕಾರಣ?

Know why Patanjali became success story: ಪತಂಜಲಿಯ ಆಯುರ್ವೇದಕ ಸಂಸ್ಥೆಯ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿರುವುದರಿಂದ ಅವು ತಮ್ಮದೇ ಆದ ವಿಶಿಷ್ಟ ಗುರುತನ್ನು ಸೃಷ್ಟಿಸಿಕೊಂಡಿವೆ. ಬಾಬಾ ರಾಮದೇವ್ ಸ್ಥಾಪಿಸಿದ ಈ ಕಂಪನಿಯ ಹರ್ಬಲ್ ಉತ್ಪನ್ನಗಳು ಜನರ ಆರೋಗ್ಯಕ್ಕೆ ಸಕಾರಾತ್ಮಕ ಪರಿಣಾಮ ತಂದಿವೆ. ಇಂದು ಮಾತ್ರವಲ್ಲ, ಪತಂಜಲಿ ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದ ಅದು ಜನರ ನೆಚ್ಚಿನ ಬ್ರ್ಯಾಂಡ್ ಎನಿಸಿದೆ.

ಪತಂಜಲಿ ಉತ್ಪನ್ನಗಳು ಜನಪ್ರಿಯವಾಗಲು, ಜನವಿಶ್ವಾಸ ಗಳಿಸಲು ಏನು ಕಾರಣ?
ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 26, 2025 | 4:53 PM

ಪತಂಜಲಿ ಉತ್ಪನ್ನಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಸದ್ದು ಮಾಡುತ್ತಿವೆ. ದೇಶೀಯ ಮತ್ತು ಸಾವಯವ ಉತ್ಪನ್ನಗಳು ಜನರ ಜೀವನದಲ್ಲಿ ಮಾತ್ರವಲ್ಲದೆ ಅವರ ಆಹಾರ ಪದ್ಧತಿಯಲ್ಲೂ ದೊಡ್ಡ ಬದಲಾವಣೆಯನ್ನು ತಂದಿವೆ. ಪತಂಜಲಿಯ ಆಯುರ್ವೇದ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿರುವುದರಿಂದ ಜಗತ್ತಿನಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿವೆ. ಬಾಬಾ ರಾಮದೇವ್ ಸ್ಥಾಪಿಸಿದ ಈ ಕಂಪನಿಯ ಗಿಡಮೂಲಿಕೆ ಉತ್ಪನ್ನಗಳು ಜನರ ಸ್ವಾಸ್ಥ್ಯ ಹೆಚ್ಚಿಸಿವೆ. ಈಗ ಮಾತ್ರವಲ್ಲ, ಪತಂಜಲಿ ಮಾರುಕಟ್ಟೆಗೆ ಪ್ರವೇಶಿಸಿದಾಗಿನಿಂದ ಜನರ ಫೇವರಿಟ್ ಆಗಿದೆ. ನೂಡಲ್ಸ್ ಆಗಲಿ ಅಥವಾ ಗಿಡಮೂಲಿಕೆ ತೈಲವೇ ಆಗಲಿ, ಪತಂಜಲಿಯು ಜನರ ನೆಚ್ಚಿನ ಬ್ರ್ಯಾಂಡ್ ಆಗಿ ರೂಪುಗೊಳ್ಳಲು ಹೇಗೆ ಸಾಧ್ಯವಾಯಿತು? ಈ ಬಗ್ಗೆ ಮಾಹಿತಿ:

ಪತಂಜಲಿ ಏಕೆ ಹಿಟ್ ಆಗಿದೆ?

ಪತಂಜಲಿ ಉತ್ಪನ್ನಗಳು ಇಂದು ಪ್ರಪಂಚದಾದ್ಯಂತ ಜನಪ್ರಿಯವಾಗಿವೆ. ಪತಂಜಲಿ ಉತ್ಪನ್ನಗಳು ಭಾರತದಿಂದ ಅಮೆರಿಕದವರೆಗೆ ಬಹಳ ಜನಪ್ರಿಯವಾಗಿವೆ. ವಿಶ್ವಾದ್ಯಂತ ನೈಸರ್ಗಿಕ ಉತ್ಪನ್ನಗಳಿಗೆ ಮನ್ನಣೆ ಸೃಷ್ಟಿಸುವುದು ಪತಂಜಲಿಯ ಉದ್ದೇಶ. ಪತಂಜಲಿ ತನ್ನ ಉತ್ಪನ್ನಗಳಲ್ಲಿ ಆಯುರ್ವೇದ ಮತ್ತು ಸಾವಯವ ಪದಾರ್ಥಗಳನ್ನು ಬಳಸುತ್ತದೆ. ರಾಸಾಯನಿಕ ಉತ್ಪನ್ನಗಳಿಗಿಂತ ಹೆಚ್ಚು ಪ್ರಯೋಜನಕಾರಿ ಮತ್ತು ಆರೋಗ್ಯಕ್ಕೆ ತಮ್ಮದು ಉತ್ತಮ ಆಯ್ಕೆ ಎಂಬುದನ್ನು ಅದು ತೋರಿಸಿದೆ. ತನ್ನ ಉತ್ಪನ್ನಗಳ ಮೂಲಕ ಪತಂಜಲಿ ಸಂಸ್ಥೆಯು ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತಂದಿದೆ.

ಗಿಡಮೂಲಿಕೆಗಳಿಂದ ತಯಾರಿಸಿದ ಪತಂಜಲಿ ಉತ್ಪನ್ನಗಳು

ಪತಂಜಲಿ ತನ್ನ ಉತ್ಪನ್ನಗಳನ್ನು ತಯಾರಿಸಲು ಅಶ್ವಗಂಧ, ಅಲೋವೆರಾ, ಶತಾವರಿ, ಶುದ್ಧ ಹಸುವಿನ ತುಪ್ಪ, ಹಸುವಿನ ಮೂತ್ರ ಮತ್ತು ಅಂತಹ ಅನೇಕ ಗಿಡಮೂಲಿಕೆಗಳು ಹಾಗೂ ಸಾವಯವಗಳನ್ನನು ಬಳಸುವುದಾಗಿ ಹೇಳಿಕೊಂಡಿದೆ. ಇಂತಹ ವಸ್ತುಗಳು ಪರಿಸರದ ಮೇಲೆ ಯಾವುದೇ ಅಡ್ಡಪರಿಣಾಮಗಳನ್ನು ಬೀರುವುದಿಲ್ಲ ಮತ್ತು ಜನರ ಆರೋಗ್ಯಕ್ಕೂ ಪುಷ್ಟಿ ನೀಡುತ್ತದೆ. ಪತಂಜಲಿ ಆಯುರ್ವೇದ ಉತ್ಪನ್ನಗಳು ಜನರು ರಾಸಾಯನಿಕ ಮತ್ತು ಸಂಸ್ಕರಿಸಿದ ವಸ್ತುಗಳ ಬಳಕೆ ತಪ್ಪಿಸುವಂತೆ ಮಾಡಲು ಸಹಾಯವಾಗಿವೆ.

ಇದನ್ನೂ ಓದಿ: ಪತಂಜಲಿ ಎಫೆಕ್ಟ್..! ಆರೋಗ್ಯ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಆಯುರ್ವೇದ ಸೂಪರ್​​ಸ್ಟಾರ್

ಪತಂಜಲಿ ಆಯುರ್ವೇದವು ಭಾರತೀಯ ಗ್ರಾಹಕರಲ್ಲಿ ತನ್ನದೇ ಗಟ್ಟಿ ಸ್ಥಾನ ಸೃಷ್ಟಿಸಿಕೊಂಡಿದೆ. ನೈಸರ್ಗಿಕ ಮತ್ತು ಆಯುರ್ವೇದ ಉತ್ಪನ್ನಗಳ ಕಾರಣದಿಂದಾಗಿ ಲಕ್ಷಾಂತರ ಜನರು ತಮ್ಮ ಆರೋಗ್ಯ ಸಮಸ್ಯೆಗಳನ್ನು ತೊಡೆದುಹಾಕುವಲ್ಲಿ ಯಶಸ್ಸನ್ನು ಕಂಡುಕೊಂಡಿದ್ದಾರೆ. ಇದು ಕೇವಲ ಒಂದು ಬ್ರಾಂಡ್ ಆಗಿರದೆ, ಆರೋಗ್ಯಕರ ಜೀವನಶೈಲಿಯತ್ತ ಒಂದು ಆಂದೋಲನವಾಗಿ ಮಾರ್ಪಟ್ಟಿದೆ.

ನೈಸರ್ಗಿಕ ಚಿಕಿತ್ಸೆ ಮೂಲಕ ಜೀವನ ಪರಿವರ್ತಿಸುತ್ತಿರುವ ಪತಂಜಲಿ ಉತ್ಪನ್ನಗಳು

ಪತಂಜಲಿಯ ಗಿಡಮೂಲಿಕೆ ಮತ್ತು ನೈಸರ್ಗಿಕ ಉತ್ಪನ್ನಗಳು ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿವೆ. ರಾಸಾಯನಿಕ ಮುಕ್ತ ಉತ್ಪನ್ನಗಳು ಇದಕ್ಕೆ ದೊಡ್ಡ ಕಾರಣ. ಪತಂಜಲಿಯ ಸೌಂದರ್ಯವರ್ಧಕಗಳು, ಆಯುರ್ವೇದ ಔಷಧಿಗಳು ಮತ್ತು ಆಹಾರ ಉತ್ಪನ್ನಗಳು ಸಂಪೂರ್ಣವಾಗಿ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲ್ಪಟ್ಟಿವೆ. ಆಯುರ್ವೇದ ಔಷಧ ಮತ್ತೆ ಜನಪ್ರಿಯಗೊಳ್ಳುವಂತೆ ಮಾಡಿದೆ. ಆಧುನಿಕ ಔಷಧಗಳ ಅಡ್ಡಪರಿಣಾಮಗಳನ್ನು ತಪ್ಪಿಸಲು ಲಕ್ಷಾಂತರ ಜನರಿಗೆ ಅವಕಾಶ ನೀಡಿದೆ. ಮಧುಮೇಹ, ಸಂಧಿವಾತ, ಜೀರ್ಣಕಾರಿ ಸಮಸ್ಯೆಗಳು ಮತ್ತು ಚರ್ಮ ರೋಗಗಳಂತಹ ಕಾಯಿಲೆಗಳಿಗೆ ಜನರು ಪತಂಜಲಿ ಉತ್ಪನ್ನಗಳಿಂದ ಪರಿಹಾರ ಪಡೆಯುತ್ತಿದ್ದಾರೆ.

ಪತಂಜಲಿ ಉತ್ಪನ್ನಗಳ ಬಗ್ಗೆ ಜನರ ಅಭಿಪ್ರಾಯವೇನು?

ದೆಹಲಿ ನಿವಾಸಿ ನೀತಾ ಶರ್ಮಾ ಅವರು ವರ್ಷಗಳಿಂದ ಅಲರ್ಜಿ ಮತ್ತು ಚರ್ಮದ ಸಮಸ್ಯೆಗಳಿಂದ ಬಳಲುತ್ತಿದ್ದರು. ಪತಂಜಲಿಯ ‘ಅಲೋ ವೆರಾ ಜೆಲ್’ ಮತ್ತು ‘ದಿವ್ಯ ಕಾಂತಿಲೇಪ್’ ಉತ್ಪನ್ನಗಳು ನೀತಾ ಅವರ ಚರ್ಮದ ಮೇಲೆ ಮ್ಯಾಜಿಕ್‌ನಂತೆ ಕೆಲಸ ಮಾಡಿತು. ಈಗ ಅವರು ರಾಸಾಯನಿಕ ಉತ್ಪನ್ನಗಳನ್ನು ಸಂಪೂರ್ಣವಾಗಿ ತ್ಯಜಿಸಿ ಪತಂಜಲಿಯನ್ನು ನಂಬುತ್ತಿದ್ದಾರೆ.

ಇದನ್ನೂ ಓದಿ: ಪತಂಜಲಿ ಹೆಲ್ತ್​​ಕೇರ್​​ನಿಂದ ಸಮಗ್ರ ಆರೋಗ್ಯ; ಪ್ರಕೃತಿ ಚಿಕಿತ್ಸೆ, ವೆಲ್ನೆಸ್ ಸೆಂಟರ್, ಹೀಲಿಂಗ್ ಪ್ರೋಗ್ರಾಮ್, ಇನ್ನೂ ಅನೇಕ

ಅದೇ ರೀತಿ ಮುಂಬೈನಲ್ಲಿ ವಾಸಿಸುವ ಪತಂಜಲಿ ಗ್ರಾಹಕರೊಬ್ಬರ ಪ್ರಕಾರ, ಪತಂಜಲಿಯ ಆಯುರ್ವೇದ ಔಷಧವು ಅವರ ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡಿದೆ. ಪತಂಜಲಿ ಆಯುರ್ವೇದಿಕ್ ತೈಲ ಮತ್ತು ಶಾಂಪೂ ತನ್ನ ಕೂದಲನ್ನು ಬಲವಾಗಿ ಮತ್ತು ದಪ್ಪವಾಗಿ ಮಾಡಿದೆ ಎಂದು ಲಕ್ನೋದ ಗ್ರಾಹಕರೊಬ್ಬರು ಹೇಳುತ್ತಾರೆ.

ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸೆಗಳು ನಿಜವಾದ ಆರೋಗ್ಯ ಪರಿಹಾರಗಳು ಎಂಬುದನ್ನು ಪತಂಜಲಿ ಸಾಬೀತುಪಡಿಸಿದೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ವೈದ್ಯಕೀಯ ವ್ಯವಸ್ಥೆಗೆ ಮರುಜೀವ ನೀಡಿದೆ. ರಾಸಾಯನಿಕ ಮುಕ್ತ ಮತ್ತು ನೈಸರ್ಗಿಕ ಉತ್ಪನ್ನಗಳು ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ಹಾಗೆಯೇ, ಪತಂಜಲಿಯ ಬಗ್ಗೆ ಜನರ ನಂಬಿಕೆ ನಿರಂತರವಾಗಿ ಹೆಚ್ಚುತ್ತಿದ್ದು, ಇದು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ.

ಪತಂಜಲಿ ವೆಲ್ನೆಸ್‌ನಿಂದ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಲು ಸಾಧ್ಯ

ಪತಂಜಲಿ ವೆಲ್ನೆಸ್ ಸೆಂಟರ್ ಮತ್ತು ಆಯುರ್ವೇದ ಚಿಕಿತ್ಸೆಗಳ ಮೂಲಕ ಅನೇಕ ಜನರು ಕ್ರೋನಿಕ್ ಕಾಯಿಲೆ ಅಥವಾ ದೀರ್ಘಕಾಲದ ಕಾಯಿಲೆಗಳಿಂದ ಮುಕ್ತರಾಗಿದ್ದಾರೆ. ಪತಂಜಲಿಯ ‘ದಿವ್ಯ ಪೇನ್ ರಿಲೀನ್ ಆಯಿಲ್’ ಮತ್ತು ‘ಯೋಗರಾಜ ಗುಗ್ಗುಲು’ ನಂತಹ ಆಯುರ್ವೇದ ಔಷಧಿಗಳಿಂದ ಅನೇಕ ಜನರು ಪರಿಹಾರ ಪಡೆದಿದ್ದಾರೆ. ‘ತ್ರಿಫಲಾ ಚೂರ್ಣ’ ಮತ್ತು ‘ಅಗಸೆ ಬೀಜದ ಪುಡಿ’ ಯಿಂದ ಗ್ಯಾಸ್, ಎಸಿಡಿಟಿ, ಮತ್ತು ಮಲಬದ್ಧತೆಯಂತಹ ಸಮಸ್ಯೆಗಳಿಂದ ಪರಿಹಾರ ಸಿಕ್ಕಿದೆ. ‘ಅಶ್ವಗಂಧ’, ‘ತ್ರಿಫಲ’ ಮತ್ತು ‘ಗುಗ್ಗುಲ್’ ನಂತಹ ಗಿಡಮೂಲಿಕೆ ಔಷಧಿಗಳು ಬೊಜ್ಜು ಕಡಿಮೆ ಮಾಡಲು ಸಹಾಯ ಮಾಡಿವೆ.

ಇದನ್ನೂ ಓದಿ: ಆಯುರ್ವೇದ, ವಿಜ್ಞಾನ ಸಂಯೋಜನೆಯೊಂದಿಗೆ ಪತಂಜಲಿ ಜಾಗತಿಕ ಹೆಜ್ಜೆಗಳು

ಪತಂಜಲಿ ಭಾರತದಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ರ್ಯಾಂಡ್ ಏಕೆ?

  1. ರಾಸಾಯನಿಕಗಳಿಲ್ಲದೆ ತಯಾರಿಸಿದ ಆಯುರ್ವೇದ ಮತ್ತು ನೈಸರ್ಗಿಕ ಉತ್ಪನ್ನಗಳು.
  2. ಸಾಮಾನ್ಯ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣಾ ಪರಿಹಾರಗಳನ್ನು ತರುವುದು.
  3. ಬಾಬಾ ರಾಮದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರ ನೇತೃತ್ವದಲ್ಲಿ ಭಾರತದಲ್ಲಿ ಆರೋಗ್ಯ ಜಾಗೃತಿ ಹರಡುತ್ತಿದೆ.
  4. ಗ್ರಾಹಕ ತೃಪ್ತಿ ಮತ್ತು ವಿಶ್ವಾಸವು ಲಕ್ಷಾಂತರ ಕುಟುಂಬಗಳು ಪತಂಜಲಿ ಉತ್ಪನ್ನಗಳನ್ನು ಬಳಸುತ್ತಿವೆ.

ಪತಂಜಲಿ ಕೇವಲ ಒಂದು ಬ್ರಾಂಡ್ ಅಲ್ಲ, ಬದಲಾಗಿ ಆರೋಗ್ಯಕರ ಭಾರತದತ್ತ ಒಂದು ಆಂದೋಲನ. ಆಯುರ್ವೇದದ ಶಕ್ತಿಯಿಂದ ಅದು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಿದೆ. ರಾಸಾಯನಿಕ ಮುಕ್ತ ಹಾಗೂ ನೈಸರ್ಗಿಕ ಆರೋಗ್ಯ ಪರಿಹಾರವನ್ನು ಒದಗಿಸಿದೆ. ಇದೇ ಕಾರಣಕ್ಕೆ ಪತಂಜಲಿ ಇಂದು ಭಾರತದ ಅತ್ಯಂತ ವಿಶ್ವಾಸಾರ್ಹ ಆಯುರ್ವೇದ ಬ್ರಾಂಡ್ ಆಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
ಶ್ರೀಲಂಕಾದ ಕೊಲಂಬೋಗೆ ಆಗಮಿಸಿದ ಮೋದಿಗೆ ಮಳೆಯು ನಡುವೆಯೂ ವಿಶೇಷ ಸ್ವಾಗತ
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಹಾಡು ಬಿಡುಗಡೆ ಮಾಡಿದ ಆನೆ; ವಿಡಿಯೋ ಸೂಪರ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್
4 ಪಂದ್ಯಗಳಲ್ಲೂ ಮಾಲೀಕರಿಗೆ ನಿರಾಶೆ ಮೂಡಿಸಿದ ಪಂತ್