ಪತಂಜಲಿ ಎಫೆಕ್ಟ್..! ಆರೋಗ್ಯ ಮತ್ತು ವ್ಯವಹಾರ ಕ್ಷೇತ್ರಗಳಲ್ಲಿ ಆಯುರ್ವೇದ ಸೂಪರ್ಸ್ಟಾರ್
Patanjali's role in making Ayurveda a hero in health and business: ಸುಮಾರು ಎರಡು ದಶಕಗಳ ಹಿಂದೆ, 2006 ರಲ್ಲಿ ಆಚಾರ್ಯ ಬಾಲಕೃಷ್ಣ ಅವರೊಂದಿಗೆ ಬಾಬಾ ರಾಮದೇವ್ ಅವರು ಪತಂಜಲಿ ಆಯುರ್ವೇದವನ್ನು ಪ್ರಾರಂಭಿಸಿದಾಗ ಭವಿಷ್ಯದಲ್ಲಿ ಆಯುರ್ವೇದವು ದೊಡ್ಡ ಉದ್ಯಮವಾಗುತ್ತದೆ ಎಂದು ಅವರೂ ಊಹಿಸಿರಲಿಲ್ಲ. ಆರೋಗ್ಯ ಮತ್ತು ವ್ಯವಹಾರ ಜಗತ್ತಿನಲ್ಲಿ ಆಯುರ್ವೇದವನ್ನು 'ಹೀರೋ' ಆಗಿ ಮಾಡುವಲ್ಲಿ ಪತಂಜಲಿಯ ಕೊಡುಗೆ ದೊಡ್ಡದಾಗಿದೆ. ಈ ಬಗ್ಗೆ ಒಂದು ವರದಿ:

ಶತಮಾನಗಳ ಹಿಂದೆ ಸಂತ ತುಳಸೀದಾಸರು ‘ಶ್ರೀ ರಾಮಚರಿತಮಾನಸ’ ಬರೆಯುವ ಮೂಲಕ ಪ್ರತಿ ಮನೆಯಲ್ಲೂ ಸಾಮಾನ್ಯ ಜನರಿಗೆ ಶ್ರೀರಾಮನ ಆದರ್ಶಗಳು ಮತ್ತು ಅವರ ಕಥೆಯನ್ನು ಹರಡುವ ಕೆಲಸ ಮಾಡಿದ್ದರು. ಈಗ 21ನೇ ಶತಮಾನದಲ್ಲಿ ಬಾಬಾ ರಾಮದೇವ್ ಮತ್ತು ಅವರ ಪತಂಜಲಿ ಆಯುರ್ವೇದ ಸಂಸ್ಥೆಯು (Patanjali Ayurved) ಯೋಗ, ಆಯುರ್ವೇದ ಮತ್ತು ಆರೋಗ್ಯ ರಕ್ಷಣೆಯ ವಿಚಾರಗಳನ್ನು ಸಾಮಾನ್ಯ ಜನರಲ್ಲಿ ಹರಡುವ ಕೆಲಸ ಮಾಡಿದೆ. ಇಂದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅನೇಕ ದೇಶಗಳಲ್ಲಿ ಯೋಗ ಮತ್ತು ಆಯುರ್ವೇದದ ಇನ್ನೊಂದು ಹೆಸರು ‘ಬಾಬಾ ರಾಮದೇವ್’ ಮತ್ತು ‘ಪತಂಜಲಿ ಆಯುರ್ವೇದ’.
2006 ರಲ್ಲಿ ಬಾಬಾ ರಾಮ್‌ದೇವ್ ಅವರು ಆಚಾರ್ಯ ಬಾಲಕೃಷ್ಣ ಅವರೊಂದಿಗೆ ಪತಂಜಲಿಯನ್ನು ಪ್ರಾರಂಭಿಸಿದಾಗ, ಭಾರತದಲ್ಲಿ 80,000 ಕೋಟಿ ರೂ ಮೌಲ್ಯದ ಬೃಹತ್ ಆಯುರ್ವೇದ ಉದ್ಯಮ ನಿರ್ಮಾಣ ಆಗುತ್ತದೆಂದು ಯಾರೂ ಊಹಿಸಿರಲಿಲ್ಲ. ಪತಂಜಲಿ ಆಯುರ್ವೇದ ಪ್ರಾರಂಭವಾದಾಗ, ಕಂಪನಿಯು ಮುಖ್ಯವಾಗಿ ‘ದಿವ್ಯ ಫಾರ್ಮಸಿ’ ಅಡಿಯಲ್ಲಿ ಆಯುರ್ವೇದ ಔಷಧಿಗಳನ್ನು ಪ್ರಾರಂಭಿಸಿತು. ಇದಾದ ನಂತರ, ಪತಂಜಲಿ ಬ್ರಾಂಡ್ ಅಡಿಯಲ್ಲಿ ಕಂಪನಿಯು ದಂತ ಕಾಂತಿಯಿಂದ ಹಿಡಿದು ಶಾಂಪೂ ಮತ್ತು ಸೋಪಿನವರೆಗೆ ದೈನಂದಿನ ಬಳಕೆಯ ಉತ್ಪನ್ನಗಳನ್ನು ಬಿಡುಗಡೆ ಮಾಡಿತು. ಇದರಲ್ಲಿ, ದಂತ ಕಾಂತಿಯು ಕಂಪನಿಯ ಸ್ಟಾರ್ ಉತ್ಪನ್ನವಾಗಿ ಹೊರಹೊಮ್ಮಿತು.
ಭಾರತೀಯ ಮಾರುಕಟ್ಟೆಯಲ್ಲಿ ಆವರೆಗೂ ಇದ್ದ ಹೆಚ್ಚಿನ ಟೂತ್‌ಪೇಸ್ಟ್‌ಗಳ ಮಾರಾಟ ಕುಸಿಯಲು ಪ್ರಾರಂಭಿಸಿತು. ಅನೇಕ ಕಂಪನಿಗಳು ತಮ್ಮ ಜನಪ್ರಿಯ ಬ್ರ್ಯಾಂಡ್‌ಗಳ ‘ಆಯುರ್ವೇದ ಆವೃತ್ತಿಗಳ’ ಮೂಲಕ ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದವು. ಈ ರೀತಿಯಾಗಿ ಪತಂಜಲಿ ಉತ್ಪನ್ನಗಳು ಜನರ ಜೀವನದಲ್ಲಿ ಆಯುರ್ವೇದವನ್ನು ಅಳವಡಿಸಿಕೊಳ್ಳಲು ಸಹಾಯ ಮಾಡಿವೆ ಮತ್ತು ಅವರ ಜೀವನ ವಿಧಾನವನ್ನು ಬದಲಾಯಿಸಿವೆ.
ಇದನ್ನೂ ಓದಿ: ಪತಂಜಲಿ ಹೆಲ್ತ್ಕೇರ್ನಿಂದ ಸಮಗ್ರ ಆರೋಗ್ಯ; ಪ್ರಕೃತಿ ಚಿಕಿತ್ಸೆ, ವೆಲ್ನೆಸ್ ಸೆಂಟರ್, ಹೀಲಿಂಗ್ ಪ್ರೋಗ್ರಾಮ್, ಇನ್ನೂ ಅನೇಕ
ಪತಂಜಲಿ ಜನರ ಆಯ್ಕೆಯಾಗಿದ್ದು ಹೀಗೆ
ಅಡುಗೆಗೆ ಬಳಸುವ ಮಸಾಲೆಗಳು, ಧಾನ್ಯಗಳು ಮತ್ತು ಇತರ ವಸ್ತುಗಳ ಆರೋಗ್ಯ ಪ್ರಯೋಜನಗಳ ಬಗ್ಗೆ ಭಾರತೀಯರಲ್ಲಿ ಈಗಾಗಲೇ ಸಾಮಾನ್ಯ ಜ್ಞಾನವಿದೆ. ಯಾವುದೇ ಸಾಮಾನ್ಯ ಭಾರತೀಯ ಕುಟುಂಬದಲ್ಲಿ ಮನೆಮದ್ದುಗಳ ಪುಸ್ತಕವನ್ನು ನೀವು ಸುಲಭವಾಗಿ ಕಾಣಬಹುದು. ಪತಂಜಲಿ ಸಂಸ್ಥೆಯು ಆಯುರ್ವೇದದ ಈ ತತ್ವಗಳನ್ನು ಜನರಲ್ಲಿ ಹರಡಿತು. ತನ್ನ ಕಂಪನಿಯ ಉತ್ಪನ್ನಗಳನ್ನು ಶುದ್ಧ ರೀತಿಯಲ್ಲಿ ಉತ್ಪಾದಿಸಲಾಗುತ್ತಿದೆ ಎಂದು ಜನರಿಗೆ ಭರವಸೆ ನೀಡಿತು. ಬಾಬಾ ರಾಮದೇವ್ ಕೂಡ ವೀಡಿಯೊ ಮೂಲಕ ಜನರಿಗೆ ತಮ್ಮ ಕಂಪನಿಯ ಕಾರ್ಖಾನೆಯ ದರ್ಶನ ಮಾಡಿಸಿದರು. ಪತಂಜಲಿಯು ಜನರ ಆಯ್ಕೆಯಾಗಲು ಇದರಿಂದ ಸಾಧ್ಯವಾಯಿತು.
ಇಷ್ಟೇ ಅಲ್ಲ, ಪತಂಜಲಿ ಹಲವು ಮಾರ್ಕೆಟಿಂಗ್ ಸ್ಟ್ಯಾಂಡರ್ಡ್ಗಳನ್ನು ಹಿಂದಿಕ್ಕಿದೆ. ಕಂಪನಿಯು ಆರಂಭದಲ್ಲಿ ಪತಂಜಲಿ ಉತ್ಪನ್ನಗಳನ್ನು ಸಾಮಾನ್ಯ ಉತ್ಪನ್ನಗಳಂತೆ ಮಾಲ್‌ಗಳು ಅಥವಾ ದಿನಸಿ ಅಂಗಡಿಗಳಿಗೆ ತಲುಪಿಸುವ ಬದಲು ‘ವಿಶೇಷ ಮಳಿಗೆ’ಗಳನ್ನು ತೆರೆಯಿತು. ಅದೇ ಸಮಯದಲ್ಲಿ, ಹಲವು ದೊಡ್ಡ ಮಳಿಗೆಗಳಲ್ಲಿ ಆಯುರ್ವೇದ ವೈದ್ಯರನ್ನು ಜೋಡಿಸಲಾಯಿತು. ಅಲ್ಲಿ ಈ ವೈದ್ಯರು ಜನರನ್ನು ಉಚಿತವಾಗಿ ತಪಾಸಿಸಿ, ಆಯುರ್ವೇದ ಚಿಕಿತ್ಸೆ ನೀಡುತ್ತಾರೆ. ಈ ಚಿಕಿತ್ಸೆಗೆ ಪತಂಜಲಿ ಉತ್ಪನ್ನಗಳನ್ನು ಬಳಸಲಾಗುತ್ತದೆ. ಇದರಿಂದ ಜನರಿಗೆ ಪತಂಜಲಿ ಉತ್ಪನ್ನಗಳ ಬಗ್ಗೆ ನಂಬುಗೆ ಹುಟ್ಟಲು ನೆರವಾಗಿದೆ.
ಜನರಿಗೆ ಯೋಗ ಮತ್ತು ಆಯುರ್ವೇದ ಸುಲಭವಾಗಿ ತಲುಪಿದ್ದು ಯಾಕೆ?
ಬಾಬಾ ರಾಮದೇವ್ ಅವರು ಯೋಗ ಗುರುಗಳಾಗಿ ಜನಪ್ರಿಯರಾದವರು. ಪತಂಜಲಿಯು ಯೋಗಋಷಿಯ ಹೆಸರಾದ್ದರಿಂದ ಪತಂಜಲಿ ಬ್ರ್ಯಾಂಡ್ ಬಹಳ ಬೇಗ ಯೋಗ ಹಾಗೂ ಆಯುರ್ವೇದದ ಜೊತೆ ಗುರುತಾಗಲು ಸಾಧ್ಯವಾಯಿತು. ಯೋಗದಿಂದ ಆರೋಗ್ಯ ಭಾಗ್ಯ ಸಿಗುತ್ತದೆ. ಬಾಬಾ ರಾಮದೇವ್ ಅವರು ಪತಂಜಲಿ ಮೂಲಕ ಜನರಿಗೆ ಆಯುರ್ವೇದದ ಭಾಗ್ಯವನ್ನೂ ಕೊಟ್ಟಿದ್ದಾರೆ. ಯೋಗ ಮತ್ತು ಆಯುರ್ವೇದದ ಆರೋಗ್ಯ ಪ್ರಯೋಜನಗಳ ಬಗ್ಗೆ ಜನರಿಗೆ ಸಕಾರಾತ್ಮಕ ದೃಷ್ಟಿ ಬೆಳೆದು, ತಮ್ಮ ವೈಯಕ್ತಿಕ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳಲು ಸಹಾಯಕವಾಗಿದೆ ಪತಂಜಲಿ.
ಇದನ್ನೂ ಓದಿ: ಆಯುರ್ವೇದ, ವಿಜ್ಞಾನ ಸಂಯೋಜನೆಯೊಂದಿಗೆ ಪತಂಜಲಿ ಜಾಗತಿಕ ಹೆಜ್ಜೆಗಳು
ಈ ವೇಳೆ, ಜಾಗತಿಕ ಮಟ್ಟದಲ್ಲೂ ಯೋಗ ಮತ್ತು ಆಯುರ್ವೇದದ ಮಹತ್ವ ಹೆಚ್ಚಲು ಪ್ರಾರಂಭಿಸಿದೆ. ಜೂನ್ 21 ಅನ್ನು ‘ಅಂತರರಾಷ್ಟ್ರೀಯ ಯೋಗ ದಿನ’ ಎಂದು ವಿಶ್ವಸಂಸ್ಥೆ ಗುರುತಿಸಿದೆ. ಭಾರತ ಮತ್ತು ವಿದೇಶಗಳಲ್ಲಿ ಯೋಗ ಸಂಬಂಧಿತ ಕಾರ್ಯಕ್ರಮಗಳು ನಡೆಯಲು ಪ್ರಾರಂಭಿಸಿದವು. ಇದು ಜನರಲ್ಲಿ ಯೋಗ ಮತ್ತು ಆಯುರ್ವೇದದ ಬಗ್ಗೆ ಒಲವು ಮೂಡಿಸಿದೆ.
ಆಧುನಿಕ ಉತ್ಪನ್ನಗಳನ್ನು ತಯಾರಿಸುತ್ತಿದೆ ಪತಂಜಲಿ
ಪತಂಜಲಿ ಸಂಸ್ಥೆಯು ರೆಡಿ ಟು ಯೂಸ್ ಆಯುರ್ವೇದ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಆಮ್ಲಾ ಮತ್ತು ಗಿಲೋಯ್ ರಸವನ್ನು ಎರಡು ಪಾನೀಯಗಳ ಸಿದ್ಧ ರೂಪದಲ್ಲಿ ಪರಿಚಯಿಸಿದೆ. ಪತಂಜಲಿ ಉತ್ಪನ್ನಗಳು ಯಾವುದೇ ಅಡ್ಡಪರಿಣಾಮ ಉಂಟುಮಾಡದೇ ಇದ್ದರಿಂದ ಜನರಲ್ಲಿ ಆಯುರ್ವೇದ ಉತ್ಪನ್ನಗಳನ್ನು ಖರೀದಿಸುವ ಉತ್ಸಾಹ ಹೆಚ್ಚಾಯಿತು.
ಕಂಪನಿಯು ಅಶ್ವಗಂಧದಿಂದ ಹಿಡಿದು ತ್ರಿಫಲದವರೆಗಿನ ಪುಡಿ ಉತ್ಪನ್ನಗಳನ್ನು ಹಾಗೂ ಆಧುನಿಕ ರೂಪದಲ್ಲಿ ಮಾತ್ರೆಗಳನ್ನು ಬಿಡುಗಡೆ ಮಾಡಿದ್ದು, ಜನರಿಗೆ ಇವುಗಳನ್ನು ಬಳಸುವುದು ಸುಲಭವಾಗಿದೆ. ಪತಂಜಲಿಯು ಜನರ ಜೀವನಶೈಲಿಯ ಒಂದು ಭಾಗವಾಗಿ ಹೋಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ