‘ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ’; ಮಗುವಿಗಾಗಿ ಮಿಡಿದ ಕಿಚ್ಚನ ಹೃದಯ
ಕಿಚ್ಚ ಸುದೀಪ್ ಅವರದ್ದು ದೊಡ್ಡ ಹೃದಯ. ಅವರು ನಿಂತಲ್ಲೆ ಅನೇಕರಿಗೆ ಸಹಾಯ ಮಾಡುವ ಗುಣ ಹೊಂದಿದ್ದಾರೆ. ಈಗ ಅವರು ಒಂದು ಮಗುವಿಗಾಗಿ ಮಿಡಿದ್ದಾರೆ. ತಾವು ಸಹಯಾ ಮಾಡಿದ್ದೂ ಅಲ್ಲದೆ, ಅಭಿಮಾನಿಗಳ ಬಳಿಯೂ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ಖ್ಯಾತ ನಟ ಕಿಚ್ಚ ಸುದೀಪ್ (Kichcha Sudeep) ಕೇವಲ ಹೀರೋ ಮಾತ್ರವಲ್ಲ, ಅವರಿಗೆ ಒಳ್ಳೆಯ ಸಾಮಾಜಿಕ ಕಾರ್ಯಕರ್ತ ಕೂಡ ಹೌದು. ಅವರು ಈಗ ಪುಟ್ಟ ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ. ಅಪರೂಪದ ಕಾಯಿಲೆ ಇರುವ ಬಾಲಕಿಯ ಚಿಕಿತ್ಸೆಗೆ ಬರೋಬ್ಬರಿ 16 ಕೋಟಿ ರೂಪಾಯಿಯ ಅಗತ್ಯವಿದೆ. ಈ ಬಗ್ಗೆ ವಿಡಿಯೋ ಮಾಡಿರೋ ಅವರು, ಕೈಲಾದಷ್ಟು ಸಹಾಯ ಮಾಡಿ ಎಂದು ಕೋರಿಕೊಂಡಿದ್ದಾರೆ. ಸುದೀಪ್ ಕೂಡ ಸಹಾಯ ಮಾಡಿರೋದಾಗಿ ಹೇಳಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos