ಯುಗಾದಿ ಹಬ್ಬದ ದಿನವೇ ಬರ್ಬರವಾಗಿ ಹತ್ಯೆಯಾದ ನೇಪಾಳಿ ಮಂಜು ಇತ್ತೀಚಿಗೆ ಕುಣಿಗಲ್ನಲ್ಲಿ ವಾಸಿಸಲಾರಂಭಿಸಿದ್ದ!
ರೌಡಿಗಳು ಸಹಜ ಸಾವು ಕಾಣೋದು ವಿರಳ ಸಂದರ್ಭಗಳಲ್ಲಿ ಅಂತ ಹೇಳಿದರೆ ಉತ್ಪ್ರೇಕ್ಷೆಯಾಗಲಾರದು. ಬೆಂಗಳೂರಲ್ಲಿ ಹತ್ಯೆಗೀಡಾಗುವ ರೌಡಿ ಅಥವಾ ಹಿಸ್ಟರಿ ಶೀಟರ್ ತಮ್ಮ ಎದುರಾಳಿಗಳಿಂದಲೇ ಅಂತ್ಯ ಕಾಣುತ್ತಾರೆ. ಹಾಗೆ ನೋಡಿದರೆ, ಮಂಜನ ಮೇಲೆ ಹಲವಾರು ಪ್ರಕರಣಗಳಿದ್ದವಂತೆ. 2024 ರ ಲೋಕ ಸಭಾ ಚುನಾವಣೆ ಸಂದರ್ಭದಲ್ಲಿ ಅವನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಿಂದ ಗಡೀಪಾರು ಮಾಡಲಾಗಿತ್ತು.
ಬೆಂಗಳೂರು, ಮಾರ್ಚ್ 31: ಆನೇಕಲ್ ಭಾಗದ ಹೆಸರಾಂತ ರೌಡಿ ನೇಪಾಳಿ ಮಂಜನನ್ನು ಕಳೆದ ರಾತ್ರಿ ಸುಮಾರು 10.45ಕ್ಕೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸ್ಥಳೀಯ ನಿವಾಸಿಯೊಬ್ಬರು (local resident) ಹೇಳುವ ಪ್ರಕಾರ ಎರಡು ಬೈಕ್ ನಲ್ಲಿ ಬಂದಿದ್ದ ಐದು ಜನ ಮಂಜನ ಕೊಲೆ ಮಾಡಿದ್ದಾರೆ. ಹಂತಕರು ಪ್ರಾಯಶಃ ಮಂಜನಿಗೆ ಪರಿಚಿತರು ಅಂತ ಕಾಣುತ್ತದೆ. ಯಾಕೆಂದರೆ ಅವನು ಕೊಲೆಯಾಗುವ ಮೊದಲು ಹಂತಕರ ಜೊತೆ ಮಾತಾಡಿದ್ದಾನೆ. ನೇಪಾಳಿ ಮಂಜು ಮೊದಲು ನಗರದ ವೀರಸಂದ್ರ ಏರಿಯಾ ನಿವಾಸಿಯಾಗಿದ್ದರೂ ಇತ್ತೀಚಿಗೆ ಫ್ಯಾಮಿಲಿ ಜೊತೆ ಕುಣಿಗಲ್ಗೆ ಶಿಫ್ಟ್ ಆಗಿದ್ದ.
ಇದನ್ನೂ ಓದಿ: ವಿಜಯನಗರ ಟ್ರಾಫಿಕ್ ಇನ್ಸ್ಪೆಕ್ಟರ್ ರೌಡಿ ವರ್ತನೆ: ಕೊಟ್ಟ ಏಟಿಗೆ ಬೈಕ್ ಸವಾರ ಆಸ್ಪತ್ರೆ ಪಾಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ