ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಯಾಕೆ ಬಹಿರಂಗ ಮಾಡುತ್ತಿಲ್ಲ?; ಬಿಜೆಪಿ ಪ್ರಶ್ನೆ
ಸಮಾಜವಾದಿ ಪಕ್ಷದ ಮೂಲಗಳು ಹೇಳುವಂತೆ ಅಭ್ಯರ್ಥಿಗಳ ಪಟ್ಟಿಯನ್ನು ಬಹಿರಂಗಗೊಳಿಸಿದರೆ, ಬಿಜೆಪಿಯು ಅವುಗಳನ್ನು ಬಳಸಿಕೊಂಡು ಚುನಾವಣೆಯನ್ನು ಮತ್ತಷ್ಟು ಧ್ರುವೀಕರಣಗೊಳಿಸಲು ಮುಸ್ಲಿಂ ಅಭ್ಯರ್ಥಿಗಳ ಹೆಸರನ್ನು ಹೈಲೈಟ್ ಮಾಡುವ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲೆಗಳನ್ನು ಪ್ರಸಾರ ಮಾಡುತ್ತದೆ.
ಲಖನೌ: ಉತ್ತರ ಪ್ರದೇಶ ಚುನಾವಣೆಯಲ್ಲಿ ಅಖಿಲೇಶ್ ಯಾದವ್ (Akhilesh Yadav) ಅವರ ಸಮಾಜವಾದಿ (Samajwadi Party) ಪಕ್ಷದಿಂದ ಕಠಿಣ ಹೋರಾಟವನ್ನು ಎದುರಿಸುತ್ತಿರುವ ಬಿಜೆಪಿ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ವಿರುದ್ಧ ಅಭ್ಯರ್ಥಿಗಳ ಪಟ್ಟಿಯ ವಿಷಯದಲ್ಲಿ ವಾಗ್ದಾಳಿ ನಡೆಸಿದೆ. ರಾಜ್ಯದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಭಾನುವಾರ ಟ್ವೀಟ್ ಮಾಡಿದ್ದು, ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಏಕೆ ಬಹಿರಂಗಗೊಳಿಸುತ್ತಿಲ್ಲ ಮತ್ತು ಪಕ್ಷ ಯಾಕೆ ಹೆದರುತ್ತಿದೆ ಎಂದು ಅಖಿಲೇಶ್ ಯಾದವ್ಗೆ ಕೇಳಿದ್ದಾರೆ. ಬಿಜೆಪಿಯ ಇತ್ತೀಚಿನ ದಾಳಿಗಳು 3 ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ರಾಜ್ಯದ ಪಶ್ಚಿಮ ಭಾಗದಿಂದ ಪ್ರಾರಂಭವಾಗುವ ನಿರ್ಣಾಯಕ ರಾಜ್ಯ ಚುನಾವಣೆಯನ್ನು ಧ್ರುವೀಕರಣಗೊಳಿಸುವ ಮತ್ತೊಂದು ಪ್ರಯತ್ನವಾಗಿದೆ ಎಂದು ಸಮಾಜವಾದಿ ಪಕ್ಷದ ಮೂಲಗಳು ತಿಳಿಸಿವೆ. 2017 ರ ಚುನಾವಣೆಯಲ್ಲಿ ಪಶ್ಚಿಮ ಉತ್ತರ ಪ್ರದೇಶದಲ್ಲಿ ಭರ್ಜರಿ ಪ್ರದರ್ಶನ ನೀಡಿದ ಬಿಜೆಪಿ, ರಾಜ್ಯದ ಪಶ್ಚಿಮ ಭಾಗದಲ್ಲಿ ಗರಿಷ್ಠ ಪರಿಣಾಮವನ್ನು ಬೀರಿದ ದೀರ್ಘಕಾಲದ ರೈತರ ಆಂದೋಲನದ ನಂತರ ಹಿನ್ನಡೆ ಅನುಭವಿಸುತ್ತಿದೆ. ಮುಖ್ಯಮಂತ್ರಿ ಆದಿತ್ಯನಾಥ ಸೇರಿದಂತೆ ಉತ್ತರ ಪ್ರದೇಶದ ಬಿಜೆಪಿಯ ಉನ್ನತ ನಾಯಕರಿಂದ ಅಲ್ಪಸಂಖ್ಯಾತರ ವಿರುದ್ಧವಾಗಿ ಕಂಡುಬರುವ ತೀಕ್ಷ್ಣವಾದ ಕಾಮೆಂಟ್‌ಗಳು ಕಳೆದ ವಾರದಲ್ಲಿ ತೀವ್ರಗೊಂಡಿದೆ. ತಮ್ಮ ಟ್ವಿಟರ್ ಟೈಮ್‌ಲೈನ್‌ನಲ್ಲಿ, ರಾಜ್ಯದ ಮುಖ್ಯಮಂತ್ರಿ ಕಳೆದ ವಾರದಲ್ಲಿ 6 ಬಾರಿ “ದಂಗಾ” ಅಥವಾ “ಗಲಭೆ” ಎಂದು ಉಲ್ಲೇಖಿಸಿದ್ದಾರೆ.
श्री अखिलेश यादव जी समाजवादी पार्टी गठबंधन के प्रत्याशियों की सूची जारी करो ! क्या बात है जो जनता से छिपा रहे हो,सब जान गए हैं आप अंदर ही अंदर घबरा रहे हो !
— Keshav Prasad Maurya (@kpmaurya1) January 23, 2022
ಸಮಾಜವಾದಿ ಪಕ್ಷದ ಮೂಲಗಳು ಹೇಳುವಂತೆ ಅಭ್ಯರ್ಥಿಗಳ ಪಟ್ಟಿಯನ್ನು ಬಹಿರಂಗಗೊಳಿಸಿದರೆ, ಬಿಜೆಪಿಯು ಅವುಗಳನ್ನು ಬಳಸಿಕೊಂಡು ಚುನಾವಣೆಯನ್ನು ಮತ್ತಷ್ಟು ಧ್ರುವೀಕರಣಗೊಳಿಸಲು ಮುಸ್ಲಿಂ ಅಭ್ಯರ್ಥಿಗಳ ಹೆಸರನ್ನು ಹೈಲೈಟ್ ಮಾಡುವ ಮೂಲಕ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದಾಖಲೆಗಳನ್ನು ಪ್ರಸಾರ ಮಾಡುತ್ತದೆ. ಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟವು ಚುನಾವಣೆಯ 1 ನೇ ಹಂತದ ಮತದಾನದಲ್ಲಿ 58 ಪಶ್ಚಿಮ ಉತ್ತರ ಪ್ರದೇಶದ ಸ್ಥಾನಗಳಿಗೆ 13 ಮುಸ್ಲಿಂ ಅಭ್ಯರ್ಥಿಗಳನ್ನು ಹೆಸರಿಸಿದೆ.
ಜನವರಿ 13 ರಂದು, ಸಮಾಜವಾದಿ ಪಕ್ಷವು ಮೈತ್ರಿಯಿಂದ 29 ಅಭ್ಯರ್ಥಿಗಳ ಹೆಸರುಗಳೊಂದಿಗೆ ಸಾಮಾಜಿಕ ಮಾಧ್ಯಮ ಮತ್ತು ಪತ್ರಿಕೆಗಳಿಗೆ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿತು ಆದರೆ ಹೆಚ್ಚಿನ ಟಿಕೆಟ್ ಗಳನ್ನು ನೀಡಿದ್ದರೂ, ಪಟ್ಟಿಗಳನ್ನು ಸಾರ್ವಜನಿಕ ಡೊಮೇನ್‌ನಲ್ಲಿ ಹಾಕಲಾಗಿಲ್ಲ.
समाजवादी पार्टी – राष्ट्रीय लोकदल का गठबंधन उत्तर प्रदेश में लाएगा परिवर्तन”
उत्तर प्रदेश विधानसभा चुनाव 2022 हेतु प्रत्याशियों की प्रथम सूची- pic.twitter.com/3xTanE906S
— Samajwadi Party (@samajwadiparty) January 13, 2022
ಅಲಿಗಢ್‌ನ ಕೊಯಿಲ್ ವಿಧಾನಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ ಅಜ್ಜು ಇಶಾಕ್, ಲಖನೌದಿಂದ ದೂರವಾಣಿ ಕರೆ ಮೂಲಕ ತಮ್ಮ ಉಮೇದುವಾರಿಕೆಯನ್ನು ತಿಳಿಸಲಾಗಿದೆ ಎಂದು ಹೇಳಿದರು. ಅಡಗಿಸಿಡುವುದಕ್ಕೆ ಏನಿದೆ? ಎಂದು ಹೇಳಿದ ಇಶಾಕ್,ಅಭ್ಯರ್ಥಿಯ ಹೆಸರುಗಳು ಹೇಗಾದರೂ ಸಾರ್ವಜನಿಕವಾಗುತ್ತವೆ. ಬಿಜೆಪಿಯವರೇ ತಮ್ಮ ಅಸಾಮರ್ಥ್ಯವನ್ನು ಅಡಗಿಸಲು ಬಯಸುತ್ತಿದ್ದಾರೆ,” ಎಂದು ತಿರುಗೇಟು ನೀಡಿದರು.
ಪಶ್ಚಿಮ ಉತ್ತರ ಪ್ರದೇಶದ ಹಾಪುರ್‌ನಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರ ಜಖಡ್, “ನಮ್ಮ ಪಟ್ಟಿಗಳಿಗೂ ಬಿಜೆಪಿಗೂ ಏನು ಸಂಬಂಧ? ಬಿಜೆಪಿಯು ಚುನಾವಣೆಯನ್ನು ಧ್ರುವೀಕರಣಗೊಳಿಸಲು ಬಯಸುತ್ತದೆ ಆದರೆ ನಾವು ಅವರಿಗೆ ಹೆದರುವುದಿಲ್ಲ ಎಂದು ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
ಇದನ್ನೂ ಓದಿ: ಪಂಜಾಬ್: 65 ಸ್ಥಾನಗಳಲ್ಲಿ ಬಿಜೆಪಿ, 37 ಸ್ಥಾನಗಳಲ್ಲಿ ಅಮರಿಂದರ್ ಸಿಂಗ್ ಅವರ ಪಂಜಾಬ್ ಲೋಕ ಕಾಂಗ್ರೆಸ್ ಸ್ಪರ್ಧೆ