ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆ! ರಾತ್ರಿ 12 ಗಂಟೆಯಾದರೂ ಊಟ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳು
ರಾತ್ರಿ 12 ಗಂಟೆಯಾದರೂ ಊಟವಿಲ್ಲದೆ ವಿದ್ಯಾರ್ಥಿಗಳು ಪರದಾಡಿದ್ದಾರೆ. ಹಸಿವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ರಾತ್ರೋರಾತ್ರಿ ವಾರ್ಡನ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ಅವ್ಯವಸ್ಥೆ ಸರಿ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಮನವಿ ಮಾಡಿಕೊಂಡಿದ್ದಾರೆ.
ಗದಗ: ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆಯಾಗಿದ್ದಕ್ಕೆ ಗದಗನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ. ಶುಕ್ರವಾರ ರಾತ್ರಿ ಶ್ಯಾವಿಗೆ ಪಾಯಸದಲ್ಲಿ ( sweet dish payasa) ಹುಳುಗಳು ಕಂಡು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳು ಹುಳುಗಳು ಗೊತ್ತಾಗದೆ ಹಾಗೇ ಪಾಯಸ ಸೇವಿಸಿದ್ದಾರೆ. ಗದಗ ನಗರದ (gadag) ಹೊಸ ಬಸ್ ನಿಲ್ದಾಣದ ಬಳಿ ಇರುವ ಎಸ್ಸಿ, ಎಸ್ಟಿ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ವಸತಿ ನಿಲಯದ (government hostel) ವಾರ್ಡನ್ ಬಿ ಎಸ್ ಗೂಡಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.
ರಾತ್ರಿ 12 ಗಂಟೆಯಾದರೂ ಊಟವಿಲ್ಲದೆ ವಿದ್ಯಾರ್ಥಿಗಳು ಪರದಾಡಿದ್ದಾರೆ. ಹಸಿವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ರಾತ್ರೋರಾತ್ರಿ ವಾರ್ಡನ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಂತರ ವಸತಿ ಶಾಲೆಯ ಸಿಬ್ಬಂದಿ ಬೇರೆ ಅಡುಗೆ ಮಾಡಿ, ಹಸಿದ ಮಕ್ಕಳಿಗೆ ಬಡಿಸಿದ್ದಾರೆ. ಅವ್ಯವಸ್ಥೆ ಸರಿ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೂ ಮನವಿ ಮಾಡಿಕೊಂಡಿದ್ದಾರೆ.
Students Protest : ಪಾಯಸದಲ್ಲಿ ಹುಳುಗಳು.. ವಿದ್ಯಾರ್ಥಿಗಳಿಗೆ ಶಾಕ್!
ರೌಡಿಶೀಟರ್ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ವಿರುದ್ಧ ಎಫ್‌ಐಆರ್ ದಾಖಲು ತುಮಕೂರು: ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ಬಿ. ತೇಜಸ್ವಿನಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದಲಿತ ಸಮುದಾಯದ ಪರಮೇಶ್‌ಗೆ ನಿಂದನೆ ಹಾಗೂ ಜೀವ ಬೆದರಿಕೆ ಪ್ರಸಂಗದಲ್ಲಿ ತೇಜಸ್ವಿನಿ ಬಿ. ವಿರುದ್ಧ ಅಟ್ರಾಸಿಟಿ ಆ್ಯಕ್ಟ್ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಹಶೀಲ್ದಾರ್ ತೇಜಸ್ವಿನಿ 2021ರ ಡಿಸೆಂಬರ್ 3ರಂದು ಪರಮೇಶ್‌ಗೆ ಕಚೇರಿಗೆ ಕರೆಸಿಕೊಂಡು ನಿಂದನೆ ಮತ್ತು ಧಮ್ಕಿ ಹಾಕಿದ್ದಾರೆ ಎಂದು ದೂರಲಾಗಿದೆ. ತಾವು ವಾಸವಿದ್ದ ಗುಡಿಸಲು ಮಳೆಗೆ ಕೊಚ್ಚಿ ಹೋಗಿ ಪರಮೇಶ್ ಗಂಜಿ ಕೇಂದ್ರದಲ್ಲಿ ವಾಸ್ತವ್ಯ ಹೂಡಿದ್ದರು. ಗಂಜಿ ಕೇಂದ್ರದಲ್ಲಿ ಪರಮೇಶ್ ಸೇರಿದಂತೆ ಇನ್ನೂ ಕೆಲ ಕುಟುಂಬಗಳು ನೆಲೆಸಿದ್ದರು. ಆದರೆ ಗಂಜಿ ಕೇಂದ್ರ ತೊರೆದು ಗುಂಡುದೋಪಿಗೆ ತೆರಳಲು ಸೂಚಿಸಿದ್ದಾರೆ.
ಗಂಜಿ ಕೇಂದ್ರ ಬಿಟ್ಟು ನಿಮ್ಮ ಮೂಲ ಸ್ಥಳ ಚಿಕ್ಕನಾಯಕನಹಳ್ಳಿ ಪಟ್ಟಣದಲ್ಲಿರುವ ಗುಂಡುದೋಪಿಗೆ ತೆರಳುವಂತೆ ತೇಜಸ್ವಿನಿ ಆದೇಶಿಸಿದ್ದರು. ಆದರೆ ಎರಡು ತಿಂಗಳ ಹಿಂದೆ ಸುರಿದಿದ್ದ ಮಳೆಗೆ ಗುಂಡುದೋಪು ಮುಳುಗಿ ಗುಡಿಸಲುಗಳೆಲ್ಲಾ ಮುಳುಗಿಹೋಗಿದ್ದವು. ಆಗಿನಿಂದ ಡಿಸೆಂಬರ್ ವರೆಗೆ ಗಂಜಿ ಕೇಂದ್ರದಲ್ಲೇ ಪರಮೇಶ್ ಮತ್ತು ಇತರೆ ದಲಿತ ಕುಟುಂಬದವರು ಇದ್ದರು.
ಆದರೆ ಅಲ್ಲಿನ ವಾಸ್ತವ ಸಮಸ್ಯೆ ಹೇಳಿದ್ದಕ್ಕೆ ದಲಿತ ವ್ಯಕ್ತಿ ಪರಮೇಶ್ ಗೆ ತಹಶೀಲ್ದಾರ್ ತೇಜಸ್ವಿನಿ ನಿಂದನೆ ಮಾಡಿ, ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ತಹಶೀಲ್ದಾರ್ ತೇಜಸ್ವಿನಿ ಬೆದರಿಕೆ ಹಾಕುವ ಆಡಿಯೋ ಸಾಕ್ಷ್ಯ ಕೊಟ್ಟು, ಪರಮೇಶ್ ದೂರು ದಾಖಲು ಮಾಡಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ತಹಶೀಲ್ದಾರ್ ತೇಜಸ್ವಿನಿ ತಮ್ಮ ಆಧಾರ್ ಕಾರ್ಡ್ ರದ್ದು ಮಾಡಿ, ಗಡಿಪಾರು ಮಾಡುವ ಬೆದರಿಕೆ ಹಾಕಿದ್ದಾರೆ. ರೌಡಿ ಶೀಟರ್ ಓಪನ್ ಮಾಡಿಸುವುದಾಗಿ ಬೆದರಿಕೆಯೂ ಒಡ್ಡಿದ್ದಾರೆ ಎಂದು ನೊಂದ ಪರಮೇಶ್ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Veeranjaneya: ಆಂಜನೇಯ ಸ್ವಾಮಿ ವೀರಾಂಜನೇಯನಾದ ಕಥೆ! ಸ್ಕಂದ ಪುರಾಣದಲ್ಲಿ ಬರುವ ಗುರುಪರಂಪರೆ ಏನು?
Published On - 9:46 am, Sat, 29 January 22