ನಂದಿ ಬೆಟ್ಟಕ್ಕೆ ಹೋಗಲು ಇದು ಪ್ರಶಸ್ತ ಸಮಯ, ಆದ್ರೆ ಪರಿಸರ ಹಾಳಾಗುತ್ತೆ ಯಾರೂ ಬರೋದು ಬೇಡಾ ಅಂತಿದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ!

Chikkaballapur district administration: ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಪ್ರವಾಸಿಗರು ಆಕ್ರೋಶಗೊಂಡಿದ್ದಾರೆ. ಗಿರಿಧಾಮದಲ್ಲಿ ವಾಹನಗಳ ಪಾರ್ಕಿಂಗ್ ಸೌಲಭ್ಯವಿಲ್ಲ ಎಂದೂ ಸಬೂಬು ಹೇಳುತ್ತಿದೆ. ತಾನು ಸೂಕ್ತ ಕ್ರಮ ಕೈಗೊಳ್ಳದೆ. ಪರಿಸರ ಹಾಳಾಗುತ್ತೆ ಎನ್ನುವ ಮತ್ತೊಂದು ಸಬೂಬೂ ಉಲಿಯುತ್ತಿದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ.

ನಂದಿ ಬೆಟ್ಟಕ್ಕೆ ಹೋಗಲು ಇದು ಪ್ರಶಸ್ತ ಸಮಯ, ಆದ್ರೆ ಪರಿಸರ ಹಾಳಾಗುತ್ತೆ ಯಾರೂ ಬರೋದು ಬೇಡಾ ಅಂತಿದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ!
ನಂದಿ ಬೆಟ್ಟಕ್ಕೆ ಹೋಗಲು ಇದು ಪ್ರಶಸ್ತ ಸಮಯ, ಆದ್ರೆ ಪರಿಸರ ಹಾಳಾಗುತ್ತೆ ಎಂದು ಸಬೂಬು ಹೇಳಿ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 29, 2022 | 9:50 AM

ಚಿಕ್ಕಬಳ್ಳಾಪುರ: ಡಿಸೆಂಬರ್-ಜನವರಿ ಚುಮುಚುಮು ಚಳಿಯಲ್ಲಿ ನಂದಿ ಬೆಟ್ಟ ಹತ್ತಿ ( nandi hills) ಅಲ್ಲಿನ ಸೂರ್ಯೋದಯದ ಸೊಬಗನ್ನು ಸವಿಯುವುದೇ ಒಂದು ಭಾಗ್ಯ. ಬಹುತೇಕ ಪ್ರವಾಸಿಗರು, ಚಾರಣಿಗರು ಇಂತಹ ಅವಕಾಶಕ್ಕಾಗಿ ತಹತಹಿಸುತ್ತಾರೆ. ಆದರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತವು ನಿರ್ದಾಕ್ಷಿಣ್ಯವಾಗಿ ಇಂತಹ ಅವಕಾಶವನ್ನು ಕಸಿದುಕೊಂಡಿದೆ. ಬೆಟ್ಟ ಹತ್ತಿ ಬರಲು ಪ್ರವಾಸಿಗರಿಗೆ ಬಿಲ್ಕುಲ್​ ಬೇಡಾ ಎಂದಿದೆ. ಅದರಲ್ಲೂ ಪ್ರವಾಸಿಗರಿಗೆ ಪ್ರಿಯವಾದ ವೀಕೆಂಡ್ ಕಾಲವಾದ ಶನಿವಾರ ಹಾಗೂ ಭಾನುವಾರಗಳಂದೇ ಈ ಕಡೆ ಬರಲೇಬೇಡಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾಡಳಿತವು (Chikkaballapur district administration) ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಿ, ಕೈಕಟ್ಟಿ ಕುಳಿತುಬಿಟ್ಟಿದೆ.

ಹೀಗೆ ನಂದಿ ಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧ ತೆರವುಗೊಳಿಸದ ಹಿನ್ನೆಲೆ ನಂದಿ ಗಿರಿಧಾಮದ ಬಳಿ ಪ್ರವಾಸಿಗರು ಪರದಾಡುವಂತಾಗಿದೆ. ಇಂದು ಶನಿವಾರ ಬೆಳಂಬೆಳಗ್ಗೆ ನಂದಿ ಗಿರಿಧಾಮ ನೋಡಲು ಆಗಮಿಸಿರುವ ಪ್ರವಾಸಿಗರು ದಿಕ್ಕುತೋಚದಂತಾಗಿ ನಿರಾಶೆಗೊಂಡಿದ್ದಾರೆ. ಮೂಲಭೂತ ಸೌಕರ್ಯಗಳ ಕೊರತೆಯಿಂದ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ ಅಂತಾ ಸಬೂಬು ಹೇಳುತ್ತಿದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ. ಅಂದಹಾಗೆ ಕಳೆದ 6 ತಿಂಗಳಿಂದ ಪ್ರವಾಸಿಗರ ಪ್ರವೇಶಕ್ಕೆ ಹೀಗೆ ನಿರ್ಬಂಧ ಹೇರಲಾಗಿದೆ. ವೀಕೆಂಡ್ ಶನಿವಾರ ಹಾಗೂ ಭಾನುವಾರ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವಿದೆ.

ಕೋವಿಡ್​ ವೀಕೆಂಡ್ ಕರ್ಫ್ಯೂ ಸಬೂಬು ಚಾಲ್ತಿಯಲ್ಲಿದೆ! ಚಿಕ್ಕಬಳ್ಳಾಪುರ ಜಿಲ್ಲಾಡಳಿತದ ಈ ನಿರ್ಧಾರದ ವಿರುದ್ಧ ಪ್ರವಾಸಿಗರು ಆಕ್ರೋಶಗೊಂಡಿದ್ದಾರೆ. ಗಿರಿಧಾಮದಲ್ಲಿ ವಾಹನಗಳ ಪಾರ್ಕಿಂಗ್ ಸೌಲಭ್ಯವಿಲ್ಲ ಎಂದೂ ಸಬೂಬು ಹೇಳುತ್ತಿದೆ. ತಾನು ಸೂಕ್ತ ಕ್ರಮ ಕೈಗೊಳ್ಳದೆ. ಪರಿಸರ ಹಾಳಾಗುತ್ತೆ ಎನ್ನುವ ಮತ್ತೊಂದು ಸಬೂಬೂ ಉಲಿಯುತ್ತಿದೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ. ಒಟ್ಟಿನಲ್ಲಿ ಇಂತಹ ಕ್ರಮಗಳಿಗೆಲ್ಲಾ ಬ್ರೇಕ್​ ಹಾಕಿ, ಆದಷ್ಟೂ ಬೇಗಾ ಜಿಲ್ಲಾಡಳಿತವು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಾಗಲಿ ಎಂಬುದು ಪರಿಸರ ಪ್ರೇಮಿಗಳು ಮನದಾಳದ ಹಾರೈಕೆಯಾಗಿದೆ.

Nandi Hills: ಮೂಲಭೂತ ಸೌಕರ್ಯಗಳ ಕೊರತೆ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ

ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆ! ರಾತ್ರಿ 12 ಗಂಟೆಯಾದರೂ ಊಟ ಇಲ್ಲದೆ ಪರದಾಡಿದ ವಿದ್ಯಾರ್ಥಿಗಳು

ಗದಗ: ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಪತ್ತೆಯಾಗಿದ್ದಕ್ಕೆ ಗದಗನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗ ನಡೆದಿದೆ. ಶುಕ್ರವಾರ ರಾತ್ರಿ ಶ್ಯಾವಿಗೆ ಪಾಯಸದಲ್ಲಿ ಹುಳುಗಳು ಕಂಡು ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಇನ್ನು ಕೆಲ ವಿದ್ಯಾರ್ಥಿಗಳು ಹುಳುಗಳು ಗೊತ್ತಾಗದೆ ಹಾಗೇ ಪಾಯಸ ಸೇವಿಸಿದ್ದಾರೆ. ಗದಗ ನಗರದ ಹೊಸ ಬಸ್ ನಿಲ್ದಾಣದ ಬಳಿ ಇರುವ ಎಸ್ಸಿ, ಎಸ್ಟಿ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ವಸತಿ ನಿಲಯದ ವಾರ್ಡನ್ ಬಿ ಎಸ್ ಗೂಡಿ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.

ರಾತ್ರಿ 12 ಗಂಟೆಯಾದರೂ ಊಟವಿಲ್ಲದೆ ವಿದ್ಯಾರ್ಥಿಗಳು ಪರದಾಡಿದ್ದಾರೆ. ಹಸಿವಿನಿಂದ ಬಳಲುತ್ತಿರುವ ವಿದ್ಯಾರ್ಥಿಗಳು ರಾತ್ರೋರಾತ್ರಿ ವಾರ್ಡನ್ ವಿರುದ್ಧ ಆಕ್ರೋಶಗೊಂಡಿದ್ದಾರೆ. ನಂತರ ವಸತಿ ಶಾಲೆಯ ಸಿಬ್ಬಂದಿ ಬೇರೆ ಅಡುಗೆ ಮಾಡಿ, ಹಸಿದ ಮಕ್ಕಳಿಗೆ ಬಡಿಸಿದ್ದಾರೆ. ಅವ್ಯವಸ್ಥೆ ಸರಿ ಮಾಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿ‌ ಅವರಿಗೂ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ನಂದಿಗಿರಿಧಾಮದಲ್ಲಿ ಕ್ರಿಸ್​ಮಸ್​ ಆಚರಣೆಗೆ ಬ್ರೇಕ್​; ವೀಕೆಂಡ್​ನಲ್ಲಿ ಗಿರಿಧಾಮ ಬಂದ್ ಮಾಡಿದ ಹಿನ್ನಲೆ ಪ್ರವಾಸಿಗರ ಪರದಾಟ

ಇದನ್ನೂ ಓದಿ: ನಂದಿಬೆಟ್ಟದ ಮೇಲಿನ ವಾತಾವರಣ, ಮಂಜು ಮತ್ತು ಕುಳಿರ್ಗಾಳಿ ನಿಮ್ಮನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುವುದು ನಿಸ್ಸಂಶಯ!

Published On - 8:05 am, Sat, 29 January 22

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ