ತುಮಕೂರು: ವಾಯುಪಡೆ ಮುನ್ನಡೆಸಿದ ಜಿಲ್ಲೆಯ ಮೊದಲ ಮಹಿಳೆ ಇಂಪನಾಶ್ರೀ; ಎನ್​ಸಿಸಿಯಿಂದ ಬದಲಾಯಿತು ಬದುಕು

ಎನ್​ಸಿಸಿಯ ಸತತ ಪರಿಶ್ರಮದಿಂದ ಅವಕಾಶಗಳನ್ನು ಪಡೆದ ಇಂಪನಾಶ್ರೀಗೆ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸುವ ಸುವರ್ಣಾವಕಾಶ ತಂದುಕೊಟ್ಟಿದ್ದು, ಇದರಿಂದ ರಾಜ್ಯ ಮತ್ತು ಜಿಲ್ಲೆಯ ಕೀರ್ತಿಗೆ ಭಾಜನರಾಗಿದ್ದಾರೆ.

ತುಮಕೂರು: ವಾಯುಪಡೆ ಮುನ್ನಡೆಸಿದ ಜಿಲ್ಲೆಯ ಮೊದಲ ಮಹಿಳೆ ಇಂಪನಾಶ್ರೀ; ಎನ್​ಸಿಸಿಯಿಂದ ಬದಲಾಯಿತು ಬದುಕು
ಇಂಪನಾಶ್ರೀ
Follow us
TV9 Web
| Updated By: preethi shettigar

Updated on: Jan 29, 2022 | 10:51 AM

ತುಮಕೂರು: ಗಣರಾಜ್ಯೋತ್ಸವ ದಿನದಂದು(Republic day) ಏರ್ ಪೋರ್ಸ್ ರೆಜಿಮೆಂಟ್ ಮುನ್ನಡೆಸಿದ ಮೊದಲ ಮಹಿಳಾ ವೈದ್ಯೆ ಎಂಬ ಕೀರ್ತಿಗೆ ಕಲ್ಪತರು ನಾಡಿನ ಇಂಪನಾಶ್ರೀ ಪಾತ್ರರಾಗಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೋಳಾಲ ಗ್ರಾಮದ ಯಲ್ಲರಾಜು ಮತ್ತು ಕೆಎಸ್ ಭಾನುಮತಿ ದಂಪತಿಯ ಪುತ್ರಿ ಇಂಪನಾಶ್ರೀ ಇದೀಗ ಕೀರ್ತಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನ ಏರ್ ಕಮಾಂಡರ್ ಆಸ್ಪತ್ರೆಯಲ್ಲಿ(Hospital) ವೈದ್ಯೆಯಾಗಿರುವ ಇವರು ಮೊನ್ನೆ ನಡೆದ ಜನವರಿ 26 ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ರಾಜಪಥದಲ್ಲಿ 3.3 ಕಿಲೋಮೀಟರ್ ಏರ್ ಪೋರ್ಸ್(Air force) ರೆಜಿಮೆಂಟನ್ನು ಪಥಸಂಚಲನದಲ್ಲಿ ನಡೆಸಿ ರಾಜ್ಯದ ಕೀರ್ತಿ ಪತಾಕೆ ಹಾರೀಸಿದ್ದಾರೆ.

ತುಮಕೂರಿನ ಸರ್ವೋದಯ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿರುವ ಇವರು, ಅಲ್ಲಿದ್ದಾಗಲೇ ಎನ್​ಸಿಸಿಗೆ ಸೇರ್ಪಡೆಯಾಗಿದ್ದರು. ಸತತ ಪರಿಶ್ರಮದಿಂದ 2012 ರ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸುವ ಅವಕಾಶವೂ ಪಡೆದಿದ್ದರು.

ದಿಕ್ಕು ಬದಲಿಸಿದ ಎನ್​ಸಿಸಿ

ಪಿಯುಸಿ ನಂತರ ಯುವ ವಿನಿಮಯ ಕಾರ್ಯಕ್ರಮದಡಿ ಒಂದು ವರ್ಷ ಚೀನಾ ತರಬೇತಿಗೂ ಆಯ್ಕೆಯಾಗಿದ್ದ ಇಂಪನಾಶ್ರೀಗೆ ಎನ್​ಸಿಸಿ ಕೋಟಾದಡಿ ಹಾಸನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಸಿಕ್ಕಿತ್ತು. ಇದರಿಂದ ಕಷ್ಟದಲ್ಲಿದ್ದ ಆಕೆಯ ಜೀವನದ ದಿಕ್ಕೆ ಬದಲಾಯಿತು. ಅವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಾಲ ಪಡೆದಿದ್ದರು. ನಂತರ 2021 ಮೇನಲ್ಲಿ ಬೆಂಗಳೂರಿನ ಏರ್ ಕಮಾಂಡರ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಆಯ್ಕೆಯಾದರು. 2012ರ ಪರೇಡ್​ನಲ್ಲಿ 4 ನೇ ಬೆಟಾಲಿಯನ್ ಎನ್​ಸಿಸಿ ಕೆಡೆಟ್ ಆಗಿ ಭಾಗವಹಿಸಿದ್ದ ಇಂಪನಾಶ್ರೀಗೆ ಪ್ರಸ್ತುತ ಗಣರಾಜ್ಯೋತ್ಸವದಂದು ವಾಯುಪಡೆ ರೆಜಿಮೆಂಟ್ ಮುನ್ನಡೆಸುವ ಇನ್ನೊಂದು ಅವಕಾಶ ಒದಗಿ ಬಂದಿದೆ.

ಸದ್ಯ ಎನ್​ಸಿಸಿಯ ಸತತ ಪರಿಶ್ರಮದಿಂದ ಅವಕಾಶಗಳನ್ನು ಪಡೆದ ಇಂಪನಾಶ್ರೀಗೆ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‍ನಲ್ಲಿ ಭಾಗವಹಿಸುವ ಸುವರ್ಣಾವಕಾಶ ತಂದುಕೊಟ್ಟಿದ್ದು, ಇದರಿಂದ ರಾಜ್ಯ ಮತ್ತು ಜಿಲ್ಲೆಯ ಕೀರ್ತಿಗೆ ಭಾಜನರಾಗಿದ್ದಾರೆ.

ವರದಿ: ಮಹೇಶ್

ಇದನ್ನೂ ಓದಿ:

Flypast: ಗಣರಾಜ್ಯೋತ್ಸವ ವಿಶೇಷ ವೈಮಾನಿಕ ಪ್ರದರ್ಶನ: ಅಪರೂಪದ ಫ್ಲೈಪಾಸ್ಟ್​ ಸಾಹಸದಲ್ಲಿ ಬೆಂಗಳೂರು ನಂಟಿನ ವಾಯುಪಡೆ ಅಧಿಕಾರಿ

ವಾಯುಪಡೆ ಟ್ಯಾಬ್ಲೋದಲ್ಲಿ ರಫೇಲ್ ಜೆಟ್ ಚಲಾಯಿಸಿದ ಭಾರತದ ಮೊದಲ ಮಹಿಳಾ ಪೈಲಟ್ ಶಿವಾಂಗಿ ಸಿಂಗ್

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ