ಒಂದೇ ಹುಡುಗಿಯನ್ನ ಪ್ರೀತಿ ಮಾಡಿದರು, ಒಬ್ಬನ ಹತ್ಯೆ ಮಾಡಿ, ಅಪಘಾತವೆಂದು ನಾಟಕವಾಡಿದ್ದರು: ಆಮೇಲೇನಾಯ್ತು?
ಅಪಘಾತ ಅಂತಾ ಬಿಂಬಿಸಲು ಯತ್ನಿಸಿದ ಸ್ನೇಹಿತನ ನಡೆಯ ಬಗ್ಗೆ ರವಿ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ತೀವ್ರ ವಿಚಾರಣೆ ಕೈಗೊಂಡಾಗ ಸತ್ಯ ಬಯಲಿಗೆ ಬಂದಿದೆ. ಅಂದಹಾಗೆ ಕಳೆದ 11 ರಂದು ಈ ಘಟನೆ ನಡೆದಿದೆ. ಸದ್ಯಕ್ಕೆ ಪವನ್, ಭರತ್, ತಿಪ್ಪೇಶ್, ಅನಿಲ ಬಂಧನಕ್ಕೀಡಾಗಿದ್ದಾರೆ. ಪವನ್ ಹಾಗೂ ವೆಂಕಟೇಶ ರೌಡಿಶೀಟರ್.
ತುಮಕೂರು: ಹುಡುಗಿಯ (girl) ವಿಚಾರಕ್ಕೆ ಪರಸ್ಪರ ಜಗಳ ನಡೆ್ದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಅಷ್ಟೇ ಅಲ್ಲ ಕೊಲೆ ಮಾಡಿದ ಮೇಲೆ ಸ್ನೇಹಿತ ಅದನ್ನು ಅಪಘಾತ ರೀತಿಯಲ್ಲಿ ಬಿಂಬಿಸಿದ್ದಾನೆ. ಕೊಲೆ (murder) ಬಳಿಕ ತಾನೇ ಆಸ್ಪತ್ರೆ ಗೆ ದಾಖಲಿಸಿ, ಚಿಕಿತ್ಸೆ ಕೊಡಿಸುವ ನಾಟಕವಾಡಿದ್ದಾನೆ ಆ ಭೂಪ. ಇದೆಲ್ಲಾ ನಡೆದಿರುವುದು ತುಮಕೂರು ಜಿಲ್ಲೆಯ ಮಧುಗಿರಿ (madhugiri) ಪಟ್ಟಣದ ಕರಡಿ ಪುರ ಬಳಿ. ಭರತ್ ಹಾಗೂ ಇತರೆ ಏಳು ಜನರ ಸ್ನೇಹಿತರಿಂದ ಕೃತ್ಯ ನಡೆದಿದೆ. ರವಿ (23) ಕೊಲೆಯಾದ ದುರ್ದೈವಿ ಎಂದು ತಿಳಿದುಬಂದಿದೆ.
ರವಿ ಹಾಗೂ ಭರತ್ ಇಬ್ಬರೂ ಒಂದೇ ಹುಡುಗಿಯನ್ನ ಪ್ರೀತಿ ಮಾಡುತ್ತಿದ್ದರು. ರವಿ ಎಂಬುವವನು ಓಡಿ ಹೋಗಿ ಮದುವೆಯಾಗಿ ಬಂದಿದ್ದ. ಬಳಿಕ ಹುಡುಗಿ ಅಪ್ರಾಪ್ತೆಯಾದ ಕಾರಣ ಪೋಸ್ಕೋ ಕಾಯ್ದೆಯಡಿ ಜೈಲು ಸೇರಿ ರಿಲೀಸ್ ಆಗಿದ್ದ. ರಿಲೀಸ್ ಬಳಿಕ ಭರತ್ ಹಾಗೂ ಸ್ನೇಹಿತರೊಡನೆ ಕಿರಿಕ್ ಮಾಡಿಕೊಂಡಿದ್ದಾನೆ. ಪರಸ್ಪರ ಹೊಡೆದಾಟ ಬಡಿದಾಟವೂ ನಡೆದಿದೆ. ಕೊನೆಗೆ ಕೊನೆಯಲ್ಲಿ ಅಂತ್ಯವಾಗಿದೆ. ಎಂಟು ಮಂದಿ ಸ್ನೇಹಿತರು ರವಿಯನ್ನು ಆಟೋದಲ್ಲಿ ಮಧುಗಿರಿ ರಿಂಗ್ ರಸ್ತೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿ, ಹಲ್ಲೆ ಮಾಡಿದ್ದಾರೆ. ಸಿಕ್ಕ ಸಿಕ್ಕ ಕಡೆಯೆಲ್ಲ ಒದ್ದು ಸಾಯಿಸಿದ್ದಾರೆ.
ಅದಾದಮೇಲೆ ಅಪಘಾತ ಅಂತಾ ಬಿಂಬಿಸಲು ಯತ್ನಿಸಿದ ಸ್ನೇಹಿತನ ನಡೆಯ ಬಗ್ಗೆ ರವಿ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ತೀವ್ರ ವಿಚಾರಣೆ ಕೈಗೊಂಡಾಗ ಸತ್ಯ ಬಯಲಿಗೆ ಬಂದಿದೆ. ಅಂದಹಾಗೆ ಕಳೆದ 11 ರಂದು ಈ ಘಟನೆ ನಡೆದಿದೆ. ಸದ್ಯಕ್ಕೆ ಪವನ್, ಭರತ್, ತಿಪ್ಪೇಶ್, ಅನಿಲ ಬಂಧನಕ್ಕೀಡಾಗಿದ್ದಾರೆ. ಪವನ್ ಹಾಗೂ ವೆಂಕಟೇಶ ರೌಡಿಶೀಟರ್. ಆಟೋ ಚಾಲಕರಾಗಿರುವ ಮೃತ ರವಿ ಹಾಗೂ ಭರತ್ ಮಧುಗಿರಿಯ ಕರಡಿ ಪುರ ಎಸ್ ಎಮ್ ಕೃಷ್ಣ ಬಡವಾಣೆ ನಿವಾಸಿಗಳು.
ಸದ್ಯಕ್ಕೆ 4 ಆರೋಪಿಗಳನ್ನು ಮಧುಗಿರಿ ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ. ಇನ್ನುಳಿದ ನಾಲ್ವರಿಗೆ ಶೋಧ ಮುಂದುವರಿದಿದೆ. ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Also Read: ಕುಮಟಾದಲ್ಲಿ ನಿಂತಿದ್ದ ಹಸುವಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ; ಸ್ಥಳದಲ್ಲೇ ಸಾವನ್ನಪ್ಪಿದ ಗರ್ಭಿಣಿ ಆಕಳು
Published On - 1:48 pm, Fri, 28 January 22