ಕುಮಟಾದಲ್ಲಿ ನಿಂತಿದ್ದ ಹಸುವಿಗೆ ಕೆಎಸ್​ಆರ್​ಟಿ​ಸಿ ಬಸ್ ಡಿಕ್ಕಿ​; ಸ್ಥಳದಲ್ಲೇ ಸಾವನ್ನಪ್ಪಿದ ಗರ್ಭಿಣಿ ಆಕಳು

ಬಸ್ ಗುದ್ದಿದ ರಭಸಕ್ಕೆ ಆಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಸ್ಥಳೀಯರು ಪರಿಶೀಲಿಸಿದ ವೇಳೆ ಆಕಳು ಗರ್ಭ ಧರಿಸಿರುವುದು ಕಂಡುಬಂದಿದೆ. ಆದರೆ ಆಕಳಿನ ಮಾಲೀಕರು ಯಾರೆಂಬುವುದು ತಿಳಿಯದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯಕೀಯ ಸಿಬ್ಬಂದಿ ಆಕಳಿಗೆ ಅಳವಡಿಸಲಾಗಿರುವ ಟ್ಯಾಗನ್ನು ಪರಿಶೀಲಿಸಿದ್ದಾರೆ.

ಕುಮಟಾದಲ್ಲಿ ನಿಂತಿದ್ದ ಹಸುವಿಗೆ ಕೆಎಸ್​ಆರ್​ಟಿ​ಸಿ ಬಸ್ ಡಿಕ್ಕಿ​; ಸ್ಥಳದಲ್ಲೇ ಸಾವನ್ನಪ್ಪಿದ ಗರ್ಭಿಣಿ ಆಕಳು
ಬಸ್ ನಿಂತಿದ್ದ ಆಕಳಿಗೆ ಡಿಕ್ಕಿ ಹೊಡೆದಿದೆ
Follow us
| Updated By: ಸಾಧು ಶ್ರೀನಾಥ್​

Updated on:Jan 28, 2022 | 1:20 PM

ಉತ್ತರ ಕನ್ನಡ:  ಬಸ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಆಕಳು (COW) ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. ಪಟ್ಟಣದ ಬಸ್ ನಿಲ್ದಾಣದಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದ್ದು ಹುನಗುಂದದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ಕೆಎಸ್​ಆರ್​ಟಿಸಿ( KSRTC) ಬಸ್ ನಿಂತಿದ್ದ ಆಕಳಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಬಸ್ ಗುದ್ದಿದ ರಭಸಕ್ಕೆ ಆಕಳು ಸ್ಥಳದಲ್ಲೇ ಸಾವನ್ನಪ್ಪಿದ್ದು ಸ್ಥಳೀಯರು ಪರಿಶೀಲಿಸಿದ ವೇಳೆ ಆಕಳು ಗರ್ಭ ಧರಿಸಿರುವುದು ಕಂಡುಬಂದಿದೆ. ಆದರೆ ಆಕಳಿನ ಮಾಲೀಕರು ಯಾರೆಂಬುವುದು ತಿಳಿಯದ ಹಿನ್ನಲೆ ಸ್ಥಳಕ್ಕೆ ಆಗಮಿಸಿದ ಪಶು ವೈದ್ಯಕೀಯ ಸಿಬ್ಬಂದಿ ಆಕಳಿಗೆ ಅಳವಡಿಸಲಾಗಿರುವ ಟ್ಯಾಗನ್ನು ಪರಿಶೀಲಿಸಿದ್ದರು. ಈ ವೇಳೆ ಆಕಳು ಕುಮಟಾ ನಿವಾಸಿ ನಾಗಪ್ಪ ಬಲೀಂದ್ರ ಗೌಡ ಎನ್ನುವವರಿಗೆ ಸೇರಿದ್ದೆಂದು ತಿಳಿದುಬಂದಿದ್ದು, ಮಾಲೀಕರಿಗೆ ಮಾಹಿತಿ ನೀಡಲಾಗಿದೆ. ಕುಮಟಾ ಪೊಲೀಸ್ ಠಾಣಾ (Police station) ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ವಿಜಯಪುರ: ಟ್ರ್ಯಾಕ್ಟರ್​ನಿಂದ ರೊಟೋವೇಟರ್ ಮೂಲಕ ಜಮೀನು ಉಳುಮೆ ಮಾಡುವ ಯುವಕ ಸಾವು

ವಿಜಯಪುರ: ಟ್ರ್ಯಾಕ್ಟರ್​ನಿಂದ ರೊಟೋವೇಟರ್ ಮೂಲಕ ಜಮೀನು ಉಳುಮೆ ಮಾಡುವ ವೇಳೆ ಯುವಕ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಗೊಳಸಂಗಿ ಗ್ರಾಮದಲ್ಲಿ ನಡೆದಿದೆ. ರೊಟೋವೇಟರ್ ಕಟರ್ ಬಡಿದು ಗೊಳಸಂಗಿ ಗ್ರಾಮದ ನಿವಾಸಿ ಮೆಹಿಬೂಬ್ ಮನಗೂಳಿ(32) ಮೃತಪಟ್ಟಿದ್ದಾರೆ. ಕೂಡಗಿ ಎನ್​ಟಿಪಿಸಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಕಲಬುರಗಿ: ನೀರಾವರಿ ಪಂಪಸೆಟ್​ನಲ್ಲಿನ ತಾಮ್ರ ಕಳ್ಳತನ

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಟಾಕಳಿ ಗ್ರಾಮದಲ್ಲಿ ನೀರಾವರಿ ಪಂಪಸೆಟ್​ನಲ್ಲಿನ ತಾಮ್ರ ಕಳ್ಳತನ ಮಾಡಿದ್ದಾರೆ. ಭೀಮಾ ನದಿ ದಡದಲ್ಲಿನ ಪಂಪ್​ಸೆಟ್​ನಲ್ಲಿನ ತಾಮ್ರ ಕಳ್ಳತನ ಮಾಡಿದ್ದಾರೆ. ಹದಿನೈದು  ಪಂಪ್​ಸೆಟ್​ನಲ್ಲಿನ ತಾಮ್ರ ಕಳ್ಳತನವಾಗಿದ್ದು, ಕಳೆದ ಒಂದು ವಾರದಲ್ಲಿ ನೂರಕ್ಕೂ ಹೆಚ್ಚು ಪಂಪ್​ಸೆಟ್​ನಲ್ಲಿನ ತಾಮ್ರ ಕಳ್ಳತನವಾಗಿದೆ. ಅಫಜಲಪುರ, ಜೇವರ್ಗಿ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿದೆ. ಕಳ್ಳತನದಿಂದ ರೈತರು ಕಂಗಾಲಾಗಿದ್ದಾರೆ. ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಗದಗ: ಕ್ರಷರ್ ಧೂಳಿಗೆ, ಕಲ್ಲು ಗಣಿಗಾರಿಕೆಗೆ ರೈತರ ಬೆಳೆ ನಾಶ

ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಗ್ರಾಮದ ಬಳಿ ಇರುವ ಗಣಿಗಾರಿಕೆಯಿಂದ ರೈತರ ಬೆಳೆ ನಾಶವಾಗಿದೆ. ಅವೈಜ್ಞಾನಿಕ ಬ್ಲಾಸ್ಟಿಂಗ್​ಗೆ ದೊಡ್ಡ ಪ್ರಮಾಣದ ಕಲ್ಲುಗಳು ಬೋರ್ ವೆಲ್​ಗಳು ಬ್ಲಾಸ್ಟಿಂಗ್​ಗೆ ಕುಸಿಯುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಹಶಿಲ್ದಾರ, ಪೊಲೀಸ್, ಗಣಿ ಅಧಿಕಾರಿಗಳ ಗಮನಕ್ಕೆ ತಂದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ರೈತರ ನೆರವಿಗೆ ಬಾರದ ಜಿಲ್ಲಾಡಳಿತದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗದಗ-ಹೊನ್ನಾಳಿ ರಾಜ್ಯ ಹೆದ್ದಾರಿ ಕಾಮಗಾರಿ ಗುತ್ತಿಗೆ ಪಡೆದ ಸಧ್ಬವ್ ಕನ್​ಸ್ಟ್ರಕ್ಷನ್ ಕಂಪನಿ ಸದ್ಯ ಆರ್​ಎಸ್​ಎಎಸ್​ ಕಂಪನಿಯಿಂದ ‌ಕಾಮಗಾರಿ ನಡೆಸುತ್ತಿದೆ. ಅವೈಜ್ಞಾನಿಕ ಕಲ್ಲು ಕ್ವಾರಿ ಬ್ಲಾಸ್ಟಿಂಗ್ ನಡೆಯುತ್ತಿದ್ದು, ರೈತರ ಜಮೀನಿನಲ್ಲಿ ಕಲ್ಲು ರಾಶಿ ಹಾಕಲಾಗಿದೆ. ತಲೆ ಮೇಲೆ ಕಲ್ಲು ಹೊತ್ತುನಿಂತು ರೈತರು ರೋಷಾವೇಶ ವ್ಯಕ್ತಪಡಿಸಿದ್ದಾರೆ. ಬ್ಲಾಸ್ಟಿಂಗ್​ಗೆ ಹೆದರಿ ಜಮೀನಿನ ಕಡೆ ಕೂಲಿ ಕಾರ್ಮಿಕರು ಬರುತ್ತಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುವಂತೆ ಆಗಿದೆ.

ಇದನ್ನೂ ಓದಿ: ಶಿವಮೊಗ್ಗ: ವೇಗವಾಗಿ ಬಂದ ಟಿಪ್ಪರ್ ಕಾರಿಗೆ ಡಿಕ್ಕಿ! ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಕಂಠೀರವ ಸ್ಟುಡಿಯೋ ಬಳಿ ಭೀಕರ ಅಪಘಾತ; ಕ್ಯಾಂಟರ್‌ಗೆ ಹಿಂದಿನಿಂದ ದ್ವಿಚಕ್ರವಾಹನ ಡಿಕ್ಕಿ, ಇಬ್ಬರ ಸಾವು

Published On - 1:15 pm, Fri, 28 January 22

ತಾಜಾ ಸುದ್ದಿ