‘ಬಾರ್ ವೈನ್​ಶಾಪ್ ಮಾಲೀಕರು ಆಕ್ಸಿಜನ್​ನಲ್ಲಿ ಇದ್ದೇವೆ, ವೀಕೆಂಡ್ ಕರ್ಫ್ಯೂ ಮುಂದುವರಿದರೆ ವೆಂಟಿಲೇಟರ್​ಗೆ ಹೋಗುತ್ತೇವೆ’

ಶನಿವಾರ, ಭಾನುವಾರವೇ ನಮಗೆ ಹೆಚ್ಚು ಬ್ಯುಸಿನೆಸ್ ಆಗೋದು. ಕಠಿಣ ರೂಲ್ಸ್ ತನ್ನಿ, ಆದರೆ ವೀಕೆಂಡ್ ಕರ್ಫ್ಯೂನಿಂದ ಮುಕ್ತ ನೀಡಿ ಎಂದು ಸರ್ಕಾರಕ್ಕೆ ಅಸೋಸಿಯೇಷನ್ ಅಧ್ಯಕ್ಷ ರವಿ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

‘ಬಾರ್ ವೈನ್​ಶಾಪ್ ಮಾಲೀಕರು ಆಕ್ಸಿಜನ್​ನಲ್ಲಿ ಇದ್ದೇವೆ, ವೀಕೆಂಡ್ ಕರ್ಫ್ಯೂ ಮುಂದುವರಿದರೆ ವೆಂಟಿಲೇಟರ್​ಗೆ ಹೋಗುತ್ತೇವೆ’
ನೈಟ್​ ಕರ್ಫ್ಯೂ ವೇಳೆ ಪೊಲೀಸರು ರಸ್ತೆಗೆ ಬ್ಯಾರಿಕೇಡ್ ಹಾಕುತ್ತಿದ್ದಾರೆ
Follow us
TV9 Web
| Updated By: ganapathi bhat

Updated on: Jan 17, 2022 | 2:09 PM

ಬೆಂಗಳೂರು: ವೀಕೆಂಡ್ ಕರ್ಫ್ಯೂನಿಂದ ವಿನಾಯಿತಿ ನೀಡಲು ಆಲ್​​ ಇಂಡಿಯಾ ಮೊಬೈಲ್ ರೀಟೇಲರ್ಸ್ ಅಸೋಸಿಯೇಷನ್ ಸರ್ಕಾರಕ್ಕೆ ಮನವಿ ಮಾಡಿದೆ. 2 ದಿನದ ಕರ್ಫ್ಯೂನಿಂದ ಶೇಕಡಾ 50 ರಷ್ಟು ಬ್ಯುಸಿನೆಸ್ ನಷ್ಟ ಆಗುತ್ತದೆ. ವೀಕೆಂಡ್​ನಲ್ಲಿ ಆನ್​​ಲೈನ್ ಮಾರಾಟಕ್ಕೆ ಮಾತ್ರ ಅವಕಾಶ ಕೊಟ್ಟಿದ್ದೀರಿ. ನಮಗೂ ಶಾಪ್ ಓಪನ್ ಮಾಡಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಗ್ರಾಹಕರೆಲ್ಲರೂ ಆನ್​​ಲೈನ್ ಶಾಪಿಂಗ್ ಮೊರೆ ಹೋಗ್ತಾರೆ. ಅವರಿಗೊಂದು ನ್ಯಾಯ, ನಮಗೊಂದು ನ್ಯಾಯ ಬೇಡ ಎಂದು ತಿಳಿಸಿದ್ದಾರೆ.

ಕೊವಿಡ್ ಎಂದು ಎಷ್ಟೋ ಜನರಿಗೆ ವರ್ಕ್ ಫ್ರಂ ಹೋಂ ಇದೆ. ಜನ ಬಳಸುವ ಎಲೆಕ್ಟ್ರಾನಿಕ್ ವಸ್ತು ರಿಪೇರಿ ಆದ್ರೆ ಎಲ್ಲಿ ಹೋಗೋದು. ಶನಿವಾರ, ಭಾನುವಾರವೇ ನಮಗೆ ಹೆಚ್ಚು ಬ್ಯುಸಿನೆಸ್ ಆಗೋದು. ಕಠಿಣ ರೂಲ್ಸ್ ತನ್ನಿ, ಆದರೆ ವೀಕೆಂಡ್ ಕರ್ಫ್ಯೂನಿಂದ ಮುಕ್ತ ನೀಡಿ ಎಂದು ಸರ್ಕಾರಕ್ಕೆ ಅಸೋಸಿಯೇಷನ್ ಅಧ್ಯಕ್ಷ ರವಿ ಕುಮಾರ್ ಮನವಿ ಮಾಡಿಕೊಂಡಿದ್ದಾರೆ.

ಬಾರ್- ವೈನ್ ಶಾಪ್ ಮಾಲೀಕರು ಆಕ್ಸಿಜನ್​ನಲ್ಲಿ ಇದ್ದಾರೆ. ವೀಕೆಂಡ್ ಕರ್ಪ್ಯೂ ಮುಂದುವರಿದರೆ ನಾವು ವೆಂಟಿಲೇಟರ್​​ಗೆ ಹೋಗ್ತೇವೆ. ಎರಡು ವೀಕೆಂಡ್ ಕರ್ಪ್ಯೂನಿಂದ ಕೋಟ್ಯಾಂತರ ನಷ್ಟವಾಗಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚಂಟ್ಸ್ ಅಸೋಶಿಯೇಶನ್ ಪ್ರಧಾನಕಾರ್ಯದರ್ಶಿ ಗೋವಿಂದರಾಜ್ ಹೆಗ್ಡೆ ಹೇಳಿಕೆ ನೀಡಿದ್ದಾರೆ. ವಾರಾಂತ್ಯದ ಎಲ್ಲಾ ವ್ಯವಹಾರ ಕಳೆದುಕೊಂಡಿದ್ದೇವೆ. ದಯವಿಟ್ಟು ನಮ್ಮ ದುಸ್ಥಿತಿ ಅರ್ಥಮಾಡಿಕೊಳ್ಳಿ. ವೀಕೆಂಡ್ ಕರ್ಪ್ಯೂ ರದ್ದುಮಾಡಿ, ನೈಟ್ ಕರ್ಪ್ಯೂ ಅವಧಿ ವಿಸ್ತರಿಸಿ. ಕರ್ಫ್ಯೂ ರದ್ದಾಗದಿದ್ದರೆ ಪಾರ್ಸೆಲ್ ನೀಡಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದಾರೆ.

ಕೊರೊನಾ ಆತಂಕದ ನಡುವೆಯೂ ಜನಜಂಗುಳಿ

ಕೊರೊನಾ ಆತಂಕ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಜನಜಂಗುಳಿ ಕಂಡುಬಂದಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕೆ.ಸಿ.ಜನರಲ್ ಆಸ್ಪತ್ರೆ OPD ವಿಭಾಗದಲ್ಲಿ ಜನರ ಸಂಖ್ಯೆ ಹೆಚ್ಚಿದೆ. ಕೆಮ್ಮು, ನೆಗಡಿ, ಜ್ವರ ಎಂದು ಆಸ್ಪತ್ರೆಗೆ ಜನರು ಆಗಮಿಸುತ್ತಿದ್ದಾರೆ. ಇತ್ತ ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ, ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದೆ ಸಾವಿರಾರು ಜನರು ಗುಂಪುಗೂಡಿ ಕುರಿಗಳ ವ್ಯಾಪಾರ ವಹಿವಾಟು ನಡೆಸಿದ್ದಾರೆ.

ಕೊವಿಡ್ ರಿಸ್ಕ್ ಭತ್ಯೆ ಕೊಡುವಂತೆ ಶುಶ್ರೂಷಾಧಿಕಾರಿಗಳ ಪ್ರತಿಭಟನೆ

ಕೊವಿಡ್ ರಿಸ್ಕ್ ಭತ್ಯೆ ಕೊಡುವಂತೆ ಬೀದರ್​ನಲ್ಲಿ ಶುಶ್ರೂಷಾಧಿಕಾರಿಗಳ ಪ್ರತಿಭಟನೆ ನಡೆಸಲಾಗಿದೆ. ಬ್ರಿಮ್ಸ್‌ ಮೆಡಿಕಲ್‌ ಕಾಲೇಜು ಆವರಣದಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಇಲಾಖೆಯ ಶುಶ್ರೂಷಾಧಿಕಾರಿಗಳು ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯದಲ್ಲಿ ಕೊರೊನಾ ಹೆಚ್ಚಳಕ್ಕೆ ಬೆಂಗಳೂರು ಪ್ರಮುಖ ಕಾರಣ

ಮಂಡ್ಯದಲ್ಲಿ ಕೊರೊನಾ ಹೆಚ್ಚಳಕ್ಕೆ ಬೆಂಗಳೂರು ಪ್ರಮುಖ ಕಾರಣ ಎಂದು ಮಂಡ್ಯ‌ದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಧನಂಜಯ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಮಂಡ್ಯ‌‌ ಜ‌ನರು ಪ್ರತಿನಿತ್ಯ ಬೆಂಗಳೂರಿಗೆ‌ ಹೋಗಿ ಬರುತ್ತಾರೆ. ಸಾಕಷ್ಟು ಜನ ಕಾರ್ಯ ನಿಮಿತ್ತ ಬೆಂಗಳೂರು, ಮೈಸೂರಿಗೆ ಹೋಗ್ತಾರೆ. ಅಲ್ಲಿಗೆ ಹೋಗಿ ಬಂದ ಜನರಿಂದ ಮಂಡ್ಯದಲ್ಲಿ ಸೋಂಕು ಹೆಚ್ಚಾಗುತ್ತಿದೆ ಎಂದು ಮಂಡ್ಯ‌ದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಧನಂಜಯ ಹೇಳಿದ್ದಾರೆ.

ಇದನ್ನೂ ಓದಿ: Dolo 650: ದಾಖಲೆ ಬರೆದ ಡೋಲಾ 650 ಮಾತ್ರೆ, ಕೊರೊನಾ ಕಾಲದಲ್ಲಿ 358 ಕೋಟಿ ಮಾತ್ರೆ ಮಾರಾಟ

ಇದನ್ನೂ ಓದಿ: Corona 3rd Wave: ಕೊರೊನಾ ಸೋಂಕು ಹೆಚ್ಚಳ; ಮೂರನೇ ಅಲೆ ಎದುರಿಸಲು ಬೆಂಗಳೂರಿನಲ್ಲಿ ಸಿದ್ಧತೆ