2ನೇ ಹಂತದ ಮೇಕೆದಾಟು ಪಾದಯಾತ್ರೆ ಬಗ್ಗೆ ಡಿಕೆ ಶಿವಕುಮಾರ್ ಚರ್ಚೆ; ಅಶ್ವತ್ಥ್ ನಾರಾಯಣ್​ಗೆ ಬಿಸಿ ಮುಟ್ಟಿಸಲು ಪ್ಲಾನ್?

2ನೇ ಹಂತದ ಮೇಕೆದಾಟು ಪಾದಯಾತ್ರೆ ಬಗ್ಗೆ ಡಿಕೆ ಶಿವಕುಮಾರ್ ಚರ್ಚೆ; ಅಶ್ವತ್ಥ್ ನಾರಾಯಣ್​ಗೆ ಬಿಸಿ ಮುಟ್ಟಿಸಲು ಪ್ಲಾನ್?
ಪ್ರಾತಿನಿಧಿಕ ಚಿತ್ರ

ಈ ಹಿಂದಿನ ಪ್ಲಾನ್​ನಲ್ಲಿ ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಇರಲಿಲ್ಲ. ಈ ಬಾರಿ ಮಲ್ಲೇಶರ ವಿಧಾನಸಭಾ ಕ್ಷೇತ್ರವನ್ನೇ ಬೆಂಗಳೂರು ಪಾದಯಾತ್ರೆಯ ಕೇಂದ್ರ ಬಿಂದುವಾಗಿಸಲು ಡಿ.ಕೆ ಶಿವಕುಮಾರ್ ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

TV9kannada Web Team

| Edited By: ganapathi bhat

Jan 17, 2022 | 5:47 PM

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಎರಡನೇ ಹಂತದ ಬಗ್ಗೆ ಡಿ.ಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ. ಬೆಂಗಳೂರು ಪಾದಯಾತ್ರೆ ರೂಟ್ ಮ್ಯಾಪ್ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ. ಪದೇ ಪದೇ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತಿರುವ ಡಾ. ಅಶ್ವಥ್ ನಾರಾಯಣ್​ಗೆ ಬಿಸಿ ಮುಟ್ಟಿಸಲು ಕೈ ಪಡೆ ಪ್ಲಾನ್ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರಕ್ಕೆ ಕೈ ಪಾದಯಾತ್ರೆ ಪ್ರವೇಶ ಕೊಡಲಿದೆ ಎಂದು ತಿಳಿದುಬಂದಿದೆ. ಈ ಹಿಂದಿನ ಪ್ಲಾನ್​ನಲ್ಲಿ ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಇರಲಿಲ್ಲ. ಈ ಬಾರಿ ಮಲ್ಲೇಶರ ವಿಧಾನಸಭಾ ಕ್ಷೇತ್ರವನ್ನೇ ಬೆಂಗಳೂರು ಪಾದಯಾತ್ರೆಯ ಕೇಂದ್ರ ಬಿಂದುವಾಗಿಸಲು ಡಿ.ಕೆ ಶಿವಕುಮಾರ್ ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಿಯ ಕಾರ್ಯಕರ್ತರಿಗೂ ಹೊಸ ಹುರುಪು ನೀಡಿದಂತಾಗಲಿದೆ ಎಂಬುದು ಕೈ ಪಡೆ ಲೆಕ್ಕಾಚಾರವಾಗಿದೆ. ಈ ಹಿನ್ಬಲೆಯಲ್ಲಿ ಮಲ್ಲೇಶ್ವರ ಭಾಗದ ಕಾರ್ಯಕರ್ತರಿಗೆ ಡಿ.ಕೆ ಶಿವಕುಮಾರ್ ಬುಲಾವ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ರೂಟ್ ಮ್ಯಾಪ್ ತಯಾರಿಗೆ ಕೈ ನಾಯಕರು ಸಿದ್ದತೆ ನಡೆಸುತ್ತಿದ್ದಾರೆ. ಮಲ್ಲೇಶ್ವರದ ಮನೆ ಮನೆಗೆ ಪಾಂಪ್ಲೆಟ್ ಕರಪತ್ರ ವಿತರಣೆಗೆ ಪ್ಲಾನ್ ಮಾಡಲಾಗಿದೆ. ಮಲ್ಲೇಶ್ವರದ ಸಂಘ ಸಂಸ್ಥೆಗಳ ಜೊತೆಯೂ ಸಭೆ ಸಾಧ್ಯತೆ ಇದೆ. ಮಲ್ಲೇಶ್ವರದಲ್ಲೇ ಪಾದಯಾತ್ರೆ ತಯಾರಿ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಕೊರೊನಾ ಅಬ್ಬರ ಕಡಿಮೆಯಾಗುತ್ತಿದ್ದಂತೆ 2ನೆ ಹಂತದ ಪಾದಯಾತ್ರೆ ನಡೆಯಲಿದೆ ಎನ್ನಲಾಗಿದೆ. ಈ ಮೊದಲು ನಾಯಂಡಹಳ್ಳಿಯಿಂದ ಪದ್ಮನಾಭನಗರ ಮಾರ್ಗ ನಿಗದಿಯಾಗಿತ್ತು. ಈಗ ಹೊಸ ರೂಟ್ ಮ್ಯಾಪ್ ಸಿದ್ಧಪಡಿಸಲು ಡಿಕೆಶಿ ಸೂಚನೆ ಕೊಟ್ಟಿದ್ದಾರೆ. ಒಂದು ದಿನ ಪೂರ್ಣ ಪ್ರಮಾಣದ ಪಾದಯಾತ್ರೆ ನಡೆಯಬೇಕು. ಆ ರೀತಿ ರೂಟ್ ಮ್ಯಾಪ್ ಸಿದ್ಧಪಡಿಸುವಂತೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಅಶ್ವತ್ಥ್ ​ನಾರಾಯಣ ಸ್ವಕ್ಷೇತ್ರದಲ್ಲಿ ಸವಾಲು ಹಾಕಲು ಸಿದ್ಧತೆ ನಡೆಸಲಾಗಿದೆ.

ಜೆಡಿಎಸ್‌ನ ಮಾಜಿ ಎಂಎಲ್‌ಸಿ ಬೆಮೆಲ್ ಕಾಂತರಾಜ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ರನ್ನು ಸೋಮವಾರ ಭೇಟಿಯಾಗಿದ್ದಾರೆ. ಬೆಂಗಳೂರಿನ ಸದಾಶಿವನಗರದ ಡಿ.ಕೆ. ಶಿವಕುಮಾರ್ ನಿವಾಸದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ತುರುವೇಕೆರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿರುವ ಬೆಮೆಲ್ ಕಾಂತರಾಜ್, ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಟಿಬಿ ಜಯಚಂದ್ರ ಹಾಗೂ ಕೆಲ ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢ

ಇದನ್ನೂ ಓದಿ: ಬಳ್ಳಾರಿಗೆ ಪ್ರತ್ಯೇಕ ಕೊರೊನಾ ಮಾರ್ಗಸೂಚಿ ಜಾರಿ, ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದ ಹಲವರಿಗೆ ಕೊವಿಡ್ ದೃಢ

Follow us on

Related Stories

Most Read Stories

Click on your DTH Provider to Add TV9 Kannada